About the Author

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ.

ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ಕಾಡಿನಲ್ಲಿ (ಮಕ್ಕಳ ನಾಟಕ : ಬಾಲಭವನ ಪ್ರಶಸ್ತಿ), ಗಾಡೋ (ನೊಬೆಲ್ ಪ್ರಶಸ್ತಿ ವಿಜೇತ ಸ್ಯಾಮುಯಲ್ ಬೆಕೆಟ್‌ನ 'ವೇಟಿಂಗ್ ಫಾರ್ ಗಾಡೋ), ಬೆಕೆಟ್ (ಜಾ ಆನ್ವಿಯ 'ಬೆಕೆಟ್ ಮುಂತಾದ ನಾಟಕಗಳ ಅನುವಾದ). ಚಿತ್ರ-ಕಥೆ, ಚಿತ್ರಪ್ರಪಂಚ (ಅಂತರರಾಷ್ಟ್ರೀಯ ಚಲನಚಿತ್ರಗಳ ವಿಶ್ಲೇಷಣಾತ್ಮಕ ಲೇಖನಗಳು) ಹಾಗೂ ಚಿತ್ರಕಥೆಯ ಸ್ವರೂಪ(ಚಿತ್ರಕಥೆ ಬರೆಯಲು ಮಾರ್ಗದರ್ಶಿ), ಸಂಬಂಧಗಳು (ದೂರದರ್ಶನ ಧಾರಾವಾಹಿ), ಅಪ್ಪ-ಮಗ(ಟೆಲಿ-ಫಿಲ್ಮ್ ಮತ್ತು ಹಾರು ಹಕ್ಕಿಯನೇರಿ (ಚಲನಚಿತ್ರ ನಿರ್ದೇಶನ) ಮತ್ತು 6ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಏಷಿಯನ್ ಫಿಲ್ಮ್ ಪ್ರಶಸ್ತಿ ತೀರ್ಪುಗಾರ ಮಂಡಲಿಯ ಸದಸ್ಯರು.

ಎ.ಎನ್. ಪ್ರಸನ್ನ

Stories/Poems

BY THE AUTHOR