ಚಿತ್ರಕಥೆಯ ಸ್ವರೂಪ

Author : ಎ.ಎನ್. ಪ್ರಸನ್ನ

Pages 208

₹ 160.00




Year of Publication: 2017
Published by: ಕಣ್ವ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ 
Address: 777, ನೆಲಮಹಡಿ 7ನೇ ಕ್ರಾಸ್, 5ನೇ ಮೇನ್ ಎಂ.ಸಿ. ಲೇಔಟ್ ವಿಜಯನಗರ, ಬೆಂಗಳೂರು-40

Synopsys

ಒಳ್ಳೆಯ ಚಿತ್ರಕಥೆ ಇದ್ದರೆ ಅರ್ಧ ಸಿನಿಮಾ ಆದಂತೆ  ಎನ್ನುವುದು ಚಿತ್ರರಂಗದಲ್ಲಿ ಕೇಳಿಬರುವ ಸಾಮಾನ್ಯ ಮಾತು. ಹಾಗಾದರೆ ಚಿತ್ರಕಥೆಯ ಲಕ್ಷಣಗಳೇನು, ಒಳ್ಳೆಯ ಚಿತ್ರಕಥೆ ಎಂದರೇನು ಎಂಬುದನ್ನು ಇಲ್ಲಿಯ ಲೇಖನಗಳು ವಿವರಿಸುತ್ತದೆ. ಚಿತ್ರಕಥೆ ಎನ್ನುವುದು ಕಥೆ ಅಥವಾ ಕಾದಂಬರಿಗಳ ವಿನ್ಯಾಸ ಕ್ರಮಕ್ಕಿಂತ ತುಂಬಾ ಭಿನ್ನವಾಗಿ ಇರುತ್ತದೆ. ಕಥೆ, ನಿರೂಪಣೆ, ಪಾತ್ರ, ಪೂರ್ವ ತಯಾರಿ ಸೇರಿದಂತೆ ಚಿತ್ರಕಥೆಯ ಹಲವು ಆಯಾಮಗಳ ಕುರಿತು ಲೇಖಕ ಎ.ಎನ್. ಪ್ರಸನ್ನ ಅವರು ‘ಚಿತ್ರಕಥೆಯ ಸ್ವರೂಪ’ ಕೃತಿಯಲ್ಲಿ ವಿವರಿಸಿದ್ದಾರೆ.

ಹಿರಿಯ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಈ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ: ‘ಚಿತ್ರಕಥಾ ಲೇಖಕನಿಗೆ ಇರಬೇಕಾದ ಎಚ್ಚರ ತಾನು ಕಾಗದದ ಮೇಲೆ ಬರೆದ ಅಂಶಗಳು ತೆರೆಯ ಮೇಲೆ ಸಿನಿಮಾ ಪರಿಕರಗಳಾದ ಬಿಂಬ, ಶಬ್ದ, ಸಂಕಲನಗಳ ಮೂಲಕ ಹೇಗೆ ಪರಿವರ್ತಿತವಾಗಬಲ್ಲದು ಎನ್ನುವ ಸಾಧ್ಯತೆಯ ಅರಿವು. ಈ ಪುಸ್ತಕ ಅಂತಹ ಅನೇಕ ಒಳನೋಟಗಳನ್ನು / ಸಾಧ್ಯತೆಗಳನ್ನು ನಿವೇದಿಸುತ್ತಾ ಹೋಗುವುದರಿಂದಲೇ ಇದೊಂದು ಅಮೂಲ್ಯ ಪುಸ್ತಕವಾಗುತ್ತದೆ. ಸಿನಿಮಾ ಒಂದರಲ್ಲಿ 'ನಾಟಕೀಯತೆ'ಯನ್ನು, ಭಾವತೀವ್ರತೆಯನ್ನು ಯಾವ ಹದದಲ್ಲಿ, ಯಾವ ಬಿಗಿಬಂಧದಲ್ಲಿ ಹಿಡಿಯಬೇಕೆನ್ನುವುದು ಪ್ರತಿ ಚಿತ್ರಕಥಾ ಲೇಖಕ/ ನಿರ್ದೇಶಕನ ಎದುರಿಗಿರುವ ಸಮಸ್ಯೆ, ಮೂರು ಅಂಕದ ವಿನ್ಯಾಸ ಕ್ರಮವನ್ನು ವಿವರಿಸುವ ಮೂಲಕ ಆ ಸಮಸ್ಯೆಗೆ ಒಂದು ಪರಿಹಾರ ಸೂಚಿಸುತ್ತಾರೆ.

ಪ್ರಸನ್ನರ ಈ ಕೃತಿಯ ಇನ್ನೊಂದು ಹೆಗ್ಗಳಿಕೆ ಅವರು 'ದೃಶ್ಯ'ಗಳನ್ನು ಬಗೆದ ಬಗೆ, ಪುಸ್ತಕದುದ್ದಕ್ಕೂ ಅವರು ಯಾವ ಕಾನ್ಸೆಪ್ಟ್ ಗಳನ್ನು ಕೇವಲ ಅಮೂರ್ತ ರೂಪದಲ್ಲಿ ಗ್ರಹಿಸಿ, ವಿವರಿಸಿಲ್ಲ. ಅದು ಸಿನಿಮಾದಲ್ಲಿ ಪಡಿಮೂಡಿದ ರೀತಿಯಲ್ಲಿ ತೋರಿಸಿ, ವಿಶ್ಲೇಷಿಸಿದ್ದಾರೆ. ಜನಪ್ರಿಯ, ಗಂಭೀರ, ಸಮಕಾಲೀನ, ಕ್ಲಾಸಿಕ್ಸ್ ಎಲ್ಲ ರೀತಿಯ ಚಿತ್ರಗಳಿಂದಲೂ ಉದಾಹರಣೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಅನೇಕ ಚಿತ್ರಕಥಾ ಲೇಖಕರು ಗಮನ ಕೊಡದ ಕೆಲವು ಅಂಶಗಳಿಗೆ ಇಲ್ಲಿ ಒತ್ತು ಸಿಕ್ಕಿರುವುದನ್ನು ಗಮನಿಸಬಹುದು. ಈ ಪುಸ್ತಕ ಆ ದಿಕ್ಕಿನಲ್ಲಿಟ್ಟ ಒಂದು ಮೌಲಿಕ ಹೆಜ್ಜೆ.’ ಎಂದು ಪ್ರಶಂಸಿಸಿದ್ದಾರೆ. 

 

About the Author

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...

READ MORE

Conversation

Related Books