ಚಿತ್ರ ಪ್ರಪಂಚ

Author : ಎ.ಎನ್. ಪ್ರಸನ್ನ

Pages 312

₹ 250.00
Year of Publication: 2014
Published by: ಚಾರುಮತಿ ಪ್ರಕಾಶನ
Address: ನಂ-224, 4ನೇ ಮುಖ್ಯರಸ್ತೆ, 3 ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು. 560018
Phone: 080-26615510

Synopsys

ಲೇಖಕ, ಅನುವಾದಕ, ನಿರ್ದೇಶಕ ಪ್ರಸನ್ನ ಅವರು ’ಚಿತ್ರ ಪ್ರಪಂಚ’ಕೃತಿಯ ಮೂಲಕ ವಿಶ್ವದ ಅತ್ಯುತ್ತಮ ಚಲನಚಿತ್ರಗಳ ಸೂಕ್ಷ್ಮನೋಟ ನೀಡಿದ್ದಾರೆ. ರಾಜಕೀಯ, ಸಾಮಾಜಿಕ, ಕೌಟುಂಬಿಕ ಮತ್ತು ವ್ಯಕ್ತಿಗತವಾಗಿ ಪಲ್ಲಟವಾಗುವ ನೈತಿಕತೆ ಮತ್ತು ತನ್ಮೂಲಕ ಉಂಟಾಗುವ ಹಿಂಸೆಗಳ ಒಂದು ಚಿತ್ರಣ ಈ ಕೃತಿಯಲ್ಲಿ ವ್ಯಕ್ತಗೊಂಡಿದೆ. ಇಲ್ಲಿ ಸುಮಾರು 40 ಚಲನಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಆಯ್ದ ಚಲನಚಿತ್ರಗಳ ಬಗ್ಗೆ ಕೇವಲ ಕಥೆ ಮತ್ತು ವಿವರಗಳನ್ನು ಮಾತ್ರ ನೀಡದೆ, ಕಲಾಕೃತಿಗಳ ಜೊತೆಯಲ್ಲಿನ ಅನುಸಂಧಾನದ ರೀತಿಯಲ್ಲಿ ಇಲ್ಲಿನ ಲೇಖನಗಳಿವೆ.

About the Author

ಎ.ಎನ್. ಪ್ರಸನ್ನ

ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಪಡೆದು, ಕೆ.ಪಿ.ಟಿ.ಸಿ.ಎಲ್. ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಲೇಖಕ ಎ.ಎನ್. ಪ್ರಸನ್ನ ಮೊದಲಿನಿಂದಲೂ ಸಾಹಿತ್ಯ, ನಾಟಕ ಮತ್ತು ಚಲನಚಿತ್ರದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡವರು. 1974ರಲ್ಲಿ ’ಉಳಿದವರು’ ಕಥಾಸಂಕಲನದಿಂದ ಆರಂಭಿಸಿ ಇಲ್ಲಿಯ ತನಕ ನಾಲ್ಕು ಕಥಾಸಂಕಲನಗಳನ್ನು ಹೊರತಂದಿದ್ದಾರೆ. ಅಲ್ಲದೇ ಮಾರ್ಕೆಜ್‌ನ ’ಒನ್ ಹಂಡ್ರೆಡ್ ಇಯರ್ ಆಫ್ ಸಾಲಿಟ್ಯೂಡ್’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ಯಾಮ್ಯುಯಲ್ ಬೆಕೆಟ್, ಝಾ ಆನ್ವಿ, ಎಡ್ವರ್ಡ್ ಆಲ್ಬಿ ಮತ್ತು ಇಬ್ಬನ್ನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ’ಸಂಬಂಧಗಳು’ ದೂರದರ್ಶನ ಧಾರವಾಹಿ ಮತ್ತು ’ಅಪ್ಪ-ಮಗ’ ಟೆಲಿಫಿಲ್ಮ್ ಮತ್ತು ’ಹಾರು ಹಕ್ಕಿಯನೇರಿ’ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ...

READ MORE

Related Books