ಉಳಿದವರು

Author : ಎ.ಎನ್. ಪ್ರಸನ್ನ

Pages 104

₹ 5.00
Year of Publication: 1974
Published by: ಅಕ್ಷರ ಪ್ರಕಾಶನ
Address: ಸಾಗರ - 577401

Synopsys

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಎ.ಎನ್.  ಪ್ರಸನ್ನ ಅವರ `ಉಳಿದವರು’ ಕೃತಿಗೆ ಮುನ್ನುಡಿಯಲ್ಲಿ ಗೋಪಾಲಕೃಷ್ಣ ಅಡಿಗರು “ಇತ್ತೀಚಿನ ಸಣ್ಣ ಕಥೆಗಾರರಲ್ಲಿ ತುಂಬಾ ಗಣ್ಯಸ್ಥಾನ ಇವರಿಗೆ ಸಲ್ಲುತ್ತದೆ. ಮನಸ್ಸಿನ ಅತ್ಯಂತ ಸೂಕ್ಷ್ಮವಾದ ಪದರುಗಳನ್ನು ಶೋಧಿಸುವವರ ಮೂಲಕ ವ್ಯಕ್ತಿಯೊಬ್ಬನ ಅಂತರಂಗ ಜೀವನದ ಸಂಕೀರ್ಣತೆಯನ್ನು ಈ ಸಣ್ಣ ಕಥೆಗಳು ತುಂಬಾ ಹೃದ್ಯವಾಗಿ ಚಿತ್ರಿಸುತ್ತವೆ. ಸಂವೇದನೆಯ ಚುರುಕು, ಭಾಷೆಯ ಭಾವ, ಸಂಯಮಗಳಿಂದ ಈ ಕಥೆಗಳು ನಮ್ಮ ಮನಸ್ಸನ್ನು ಮುಟ್ಟುತ್ತವೆ. ತಾನು ಸರಿ ಎಂದು ತಿಳಿದ ರೀತಿಯಲ್ಲಿ ನಡೆಯಲಾರದ ಮನುಷ್ಯನ ಸಂಕಟ, ಆತಂಕಗಳು ಈ ಕಥೆಗಳ ಹಿಂದಿನ ಮೂಲ ಸಾಮಗ್ರಿ” ಎಂದಿದ್ದಾರೆ.

ಪ್ರಸನ್ನರ ‘ಉಳಿದವರು’, ‘ಪ್ಯಾರಾಸೈಟ್’ ಇಂತಹ ಕಥೆಗಳಲ್ಲಿ ಅಪರೂಪವಾದ ಸಂದರ್ಭಕ್ಕೆ ಉಚಿತವಾದ ನವನವೀನ ವಾದ ವಿವರಣೆಗಳನ್ನು ನೀಡಿದ್ದಾರೆ. ‘ನಾವು ಹೇಗಿದ್ದೇವೆ?’ ಎಂದುಕೊಂಡರೆ ನಮಗೆ ದಿಗಿಲಾಗುವಂತೆ ಆತ್ಮನಿರೀಕ್ಷಣೆಗಳನ್ನು ನೇರವಾಗಿ ಹೇಳುವುದೇ ಅಲ್ಲದೆ ಕಲಾತ್ಮಕವಾಗಿ ಹೇಳುತ್ತಾರೆ. ಕಥೆಯ ಸಂಯೋಜನೆಯಲ್ಲಿಯೇ ಕಥೆಯ ಅರ್ಥಗಳು ಹೊರಹೊಮ್ಮುತ್ತವೆ.

About the Author

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...

READ MORE

Related Books