About the Author

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ. 

ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ - ಪಟ್ಟಣದ ಹುಡುಗಿ. ಕವಿತೆ - ಕಂಪೊಜಿಟರ್, ಸ್ವತಂತ್ರವ್ವ. ಪ್ರವಾಸಕಥನ - ನಾ ಕಂಡ ರಶಿಯಾ. ಮಕ್ಕಳ ಸಾಹಿತ್ಯ-ಕುಮಾರರಾಮ, ಸಂಗೊಳ್ಳಿ ರಾಯಣ್ಣ. ಆತ್ಮಕಥೆ-ಕಾದಂಬರಿಕಾರನ ಬದುಕು. ಹಲವಾರು ಗೌರವ ಪ್ರಶಸ್ತಿಗಳು. ಜ್ವಾಲಾಮುಖಿಯ ಮೇಲೆ ಕಾದಂಬರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಬೆಳಗಾವಿಯ 52ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. 1968ರಲ್ಲಿ ವಿಧಾನಸಭೆಯ ಸದಸ್ಯತ್ವ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ. ಅವರು 1989 ರ ಅಕ್ಟೋಬರ್ 23 ರಂದು ಧಾರವಾಡದ ತಮ್ಮ ಮನೆ-‘ಸಾಹಿತ್ಯ ಶ್ರೀ’ಯಲ್ಲಿ ನಿಧನರಾದರು. 

 

ಬಸವರಾಜ ಕಟ್ಟೀಮನಿ

(05 Oct 1919-23 Oct 1989)