ಪಾತರಗಿತ್ತಿ

Author : ಬಸವರಾಜ ಕಟ್ಟೀಮನಿ

Pages 298

₹ 1.00




Year of Publication: 1955
Published by: ಶಾರದಾ ಪ್ರಕಟನಾಲಯ
Address: ಅರಳೇಪೇಟೆ, ಬೆಂಗಳೂರು-2

Synopsys

ಬಸವರಾಜ ಕಟ್ಟೀಮನಿ ಅವರ ಸಾಮಾಜಿಕ ಕಾದಂಬರಿ-ಪಾತರಗಿತ್ತಿ. ಜೀವನದ ಯಥಾರ್ಥತೆ, ಸಾಮಾನ್ಯ ಘಟನೆಗಳು ಯಾವುದೇ ಮುಲಾಜಿಲ್ಲದೇ ಹಾಗೂ ಅಷ್ಟೇ ಕಲಾತ್ಮಕವಾಗಿ ವಸ್ತುವನ್ನು ಹೆಣೆಯುವ ಕೌಶಲ ಈ ಕಾದಂಬರಿಯಲ್ಲಿ ಕಾಣಬಹುದು. ಇಲ್ಲಿಯ ಗಿರಿಜಾ ಹಾಗೂ ಕಾಶಪ್ಪನವರಂತಹ ಪಾತ್ರಗಳು ನಿಜ ಜೀವನದಲ್ಲಿ ಸಾಕಷ್ಟು ಜನರು ಸಿಗುತ್ತಾರೆ. ಇಂತಹ ಪಾಪಿಗಳನ್ನು ಸಾಹಿತ್ಯಕೃತಿಯಲ್ಲಿ ಚಿತ್ರಿಸಬಾರದು, ವೈಭವೀಕರಿಸಬಾರದು ಎಂಬ ವಾದದ ವಿರುದ್ಧ ಈ ಕಾದಂಬರಿ ಹತ್ತು ಹಲವು ಪ್ರಶ್ನೆಗಳನ್ನು ಎತ್ತಿ, ಸಾಹಿತ್ಯ-ಸಾಹಿತ್ಯ-ಲೇಖಕ, ವಾಚಕ ಹಾಗೂ ವಿಮರ್ಶಕ ಹೀಗೆ ಅವರವರ ಹೊಣೆಗಾರಿಕೆಯನ್ನೂ ಹೆಚ್ಚಿಸುವಂತೆ ಮಾಡುತ್ತದೆ. ಉತ್ತಮ ಕಲಾಕೃತಿಗಳು ಹಾಗೂ ಅತ್ಯುತ್ತಮ ಸಾಹಿತ್ಯ ಇಂತಹ ಮಡಿವಂತಿಕೆಯಿಂದ ಹೊರತಾಗಿರುತ್ತದೆ ಎಂಬುದು ಲೇಖಕರು ತಮ್ಮಈ ಕಾದಂಬರಿ ಮೂಲಕ ಸಮರ್ಥಿಸಿಕೊಂಡಿದ್ದಾರೆ.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books