About the Author

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ.

“ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ಪ್ರಬಂಧಕ್ಕೆ ಇವರಿಗೆ 2000 ರಲ್ಲಿ ಹಂಪಿಯ ಕನ್ನಡ ವಿವಿ ಪ್ರಶಸ್ತಿ ನೀಡಿದೆ.  ಕರ್ನಾಟಕದ ಕನ್ನಡ ದಲಿತ ಸಾಹಿತ್ಯ ಪರಿಷತ್‌ನಿಂದ ಪುಸ್ತಕ ಪ್ರಶಸ್ತಿ ದೊರೆತಿದೆ.  ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ನೀಡಿದ ಕೊಡುಗೆಗಾಗಿ 2018 ರಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ’ಪಾರ್ಥಸಾರಥಿ ಮನ್ಮುಶ್ರೀ ರಾಷ್ಟ್ರೀಯ ಪ್ರಶಸ್ತಿ’ ಪಡೆದಿದ್ದಾರೆ. 

ಕೃತಿಗಳು; ತಮ, ತಬಲಜಿ, ಹಾವು ತುಳಿದೇನ, ದಶಕದ ಕಥೆಗಳು, ಚಾಂದಿನಿ ಚೌಕ್‌ (ಕಥಾ ಸಂಗ್ರಹ) ಉರಿವ ಕೆಂಡದ ಮೇಲೆ (ಕಾದಂಬರಿ) ಸೀಳು ನೋಟಗಳು, ಕರ್ಪೂರದ ಗಿರಿ, ಬಯಲು ಬೆರಗು, ಕನ್ನಡ ನಾಟಕ ಮತ್ತು ರಂಗಭೂಮಿ, ಕನ್ನಡ ನಾಟಕ ಮತ್ತು ವಾಸ್ತವತೆ, ಒಳಗಣ ಹೊರಗಣ, ನೋಟ ನಿಲುವು (ಸಂಪುಟಗಳು) ಉರಿವ ಮಾತಿನ ಅರಿವು (ವಿಮರ್ಶೆ) ಪಾಪಿಯ ಪಶ್ಚಾತ್ತಾಪ, ಕೊನೆಯ ಎಲೆ ಲಾಜವಂತಿ, ಕಥಾಮಂಜರಿ, ದೇವರ ನ್ಯಾಯ (ಅನುವಾದ).

ಬಸವರಾಜ ಪಿ. ಡೋಣೂರ

(26 Jul 1969)

BY THE AUTHOR