ಪರಿಹಾರ

Author : ಬಸವರಾಜ ಪಿ. ಡೋಣೂರ

Pages 96

₹ 90.00
Year of Publication: 2009
Published by: ನೀಲಪರ್ವತ ಪ್ರಕಾಶನ
Address: ವಿಶ್ವನಾಥ್ ಕಾಂಪ್ಲೆಕ್ಸ್, ಅರತಳ ರುದ್ರಗೌಡ ಮಾರ್ಗ, ಶ್ರೀನಗರ, ಧಾರವಾಡ- 580003

Synopsys

‘ಪರಿಹಾರ’ ಲೇಖಕ ಬಸವರಾಜ ಡೋಣೂರರ ನಾಲ್ಕನೇ ಕಥಾಸಂಕಲನ.  ಈ ಸಂಕಲನದಲ್ಲಿ ಒಟ್ಟು 9 ಕಥೆಗಳಿವೆ. ತಮ್ಮ ಸುತ್ತಮುತ್ತಲಿನ ಸಣ್ಣ ಸಣ್ಣ ವಿದ್ಯಮಾನಗಳನ್ನೇ ಕಥಾವಸ್ತುವಾಗಿಸಿದ್ದಾರೆ.

'ಹೋದನೆಲ್ಲಿ ಆ ನನ್ನ ಗೆಳೆಯಾ?” ಒಬ್ಬ ಗೆಳೆಯ ಚೆನ್ನಾಗಿ ಸಂಪಾದಿಸುತ್ತಿದ್ದವನು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಂಡ ಕತೆ. 'ದಿಗ್ವಿಜಯ' ಸಮ ವಯಸ್ಕ ತರುಣಿಯೊಂದಿಗಿನ ಸೆಳೆತವನ್ನು ನಿಗ್ರಹಿಸುವ ಕತೆ. 'ಪರಿಹಾರ' ಗಂಡ-ಹೆಂಡತಿ ಮಾತಿಗೆ ಮಾತು ಬೆಳೆಸಿ ವಿರಸ ತಂದುಕೊಂಡು ಸಂಬಂಧ ಕಳಚಿಕೊಳ್ಳುವ ಹಂತಕ್ಕೆ ತಲುಪಿ ಕೊನೆಗೆ ವಿವೇಕೋದಯವಾಗಿ 'ಗಂಡಹೆಂಡಿರ ಜಗಳ ಉಂಡು ಮಲಗುವತನಕ ಎಂಬುದರಲ್ಲಿ ಅಂತ್ಯ ಕಾಣುತ್ತದೆ. 'ಹೀಗೊಂದು ನಾಟಕ’ ಹಳ್ಳಿಯಲ್ಲಿ ಮೋಜಿನ ಪ್ರಸಂಗವು ಪ್ರಣಯ ಪ್ರಸಂಗವಾದ ಕಥೆ. ಲೇಖಕರ ಕಥಾಶೈಲಿ ನೇರ, ಸರಳವಾಗಿರುವುದು ಓದುಗರಿಗೆ ಆಪ್ತವೆನಿಸುತ್ತದೆ.

 

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books