ದಶಕದ ಕತೆಗಳು

Author : ಬಸವರಾಜ ಪಿ. ಡೋಣೂರ

Pages 541

₹ 350.00




Year of Publication: 2012
Published by: ರೋಹಿಣಿ ಎಂಟರ್‌ಪ್ರೈಸಸ್
Address: #15, 6ನೇ ಕ್ರಾಸ್, ಧನ್ವಂತರಿ ನಿಲಯ, ಮಾಗಡಿ ಮೈನ್ ರೋಡ್, ವಿಶ್ವನೀಡಂ ಪೋಸ್ಟ್ ಕೊಟ್ಟಿಗೆಪಾಳ್ಯ, ಬೆಂಗಳೂರು-79

Synopsys

'ದಶಕದ ಕಥೆಗಳು' ಬಸವರಾಜ ಡೋಣೂರರು ಈವರೆಗೆ ಬರೆದ 35 ಕಥೆಗಳ ಸಂಗ್ರಹವೇ 'ತಮ', 'ಹಾವು ತುಳಿದೆನೇ', 'ತಬಲಜಿ' ಹಾಗೂ 'ಪರಿಹಾರ' ಕಥಾಸಂಕಲನಗಳಲ್ಲಿ ಪ್ರಕಟಗೊಂಡ ಕಥೆಗಳು ಇಲ್ಲಿವೆ. ಜೊತೆಗೆ, ಇತ್ತೀಚೆಗೆ ಬರೆದ ಏಳು ಕಥೆಗಳೂ ಸೇರಿವೆ. ಪ್ರಬಂಧ, ವಿಮರ್ಶೆ, ಅನುವಾದ ಮತ್ತು ಸಂಪಾದನೆಯಂತಹ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಮಹತ್ವದ ಕೆಲಸ ಮಾಡಿದ್ದರೂ, ಡೋಣೂರರ ಮೊದಲ ಆದ್ಯತೆ ಸಣ್ಣಕತೆಯೇ; ಒಬ್ಬ ಕಥೆಗಾರರು. ಒಂದು ದಶಕದಿಂದ ಕಥೆಗಳನ್ನು ಬರೆಯುತ್ತಾ ಬಂದಿದ್ದಾರೆ. ಅವರ ಕಥೆಗಳು ಬದುಕಿನ ಅನ್ವೇಷಣೆಯಲ್ಲಿ, ತಾತ್ವಿಕ ಜಿಜ್ಞಾಸೆಯಲ್ಲಿ ಮಾತ್ರ ಮುಳುಗದೇ,  ಅವು ಕಥೆಗಳನ್ನೂ ಹೇಳುತ್ತವೆ ಎನ್ನುವುದು ವಿಶೇಷ.

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books