‘ಚಾಂದನಿ ಚೌಕ್’ ಲೇಖಕ ಬಸವರಾಜ ಡೋಣೂರ್ ಅವರ ಆರನೆಯ ಕಥಾ ಸಂಗ್ರಹ, ಇಲ್ಲಿನ ಬಹುತೇಕ ಕತೆಗಳು ಅವರು ಮಧ್ಯಪ್ರದೇಶದ ಅಮರಕಂಟಕಕ್ಕೆ ಹೋದ ಮೇಲೆ ಬರೆದ ಕತೆಗಳಾಗಿವೆ. ನೈತಿಕತೆ ಮತ್ತು ದೃಷ್ಟಿಕೋನವನ್ನು ರೂಪಿಸಿದ, ನನ್ನ ಸೃಜನಶೀಲ ಅಭಿವ್ಯಕ್ತಿಗೆ ರೂಪಾತ್ಮಕತೆ ಒದಗಿಸಿದ ಶಾಂತನಾಳವೇ ಈ ಕತೆಗಳಿಗೆ ಜೀವದ್ರವ್ಯವಾಗಿದೆ ಎನ್ನುತ್ತಾರೆ ಲೇಖಕ ಬಸವರಾಜ ಡೋಣೂರ. ಈ ಕೃತಿಗೆ ಲೇಖಕ ಡಾ. ಬಸು ಬೇವಿನಗಿಡದ ಅವರು ಮುನ್ನುಡಿ ಬರೆದಿದ್ದು, ಬಸವರಾಜ ಡೋಣೂರ ಅವರ ಈ ಕತೆಗಳು ಅವರಲ್ಲಿನ ಮಾನವೀಯ ಚಿಂತನೆಗಳ ಫಲಶ್ರುತಿಗಳಾಗಿವೆ ಎನ್ನುತ್ತಾರೆ. ಆತ್ಮಗೌರವ ಮತ್ತು ನೈತಿಕತೆಯ ಬಾಳು-ಇಂತಹ ಮೌಲ್ಯಗಳನ್ನು ಈ ಕತೆಗಳೊಂದಿಗೆ ಅರಳುತ್ತವೆ. ಮನುಷ್ಯನೆದೆಯೊಳಗೆ ತುಂಬಿಕೊಂಡಿರುವ ಕ್ರೌರ್ಯವನ್ನು ಅನಾವರಣಗೊಳಿಸುವುದರ ಜೊತೆಗೆ ನಿಷ್ಕಲ್ಮಷ ಪ್ರೇಮ ಮತ್ತು ಉದಾತ್ತ ವಿಚಾರಗಳು ಅವನ ಬದುಕನ್ನು ಎತ್ತರಿಸಬಲ್ಲ ಶಕ್ತಿ ಹೊಂದಿವೆ ಎಂಬುದನ್ನು ಇಲ್ಲಿನ ಕತೆಗಳು ಸಾರಿ ಹೇಳುತ್ತವೆ.
ಡಾ ಬಸವರಾಜ್ ಪಿ. ಡೋಣೂರು 1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ಪ್ರಬಂಧಕ್ಕೆ ಇವರಿಗೆ 2000 ...
READ MOREಚಾಂದನಿ ಚೌಕ್ ಕೃತಿಯ ಕುರಿತು ಲೇಖಕ ಬಸವರಾಜ ಡೋಣೂರ ಅವರ ಮಾತು