About the Author

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ರಾಘವೇಂದ್ರರಾವ್ ಅವರದು ವಿಸ್ತೃತ ಓದು, ಅನ್ಯಶಾಸ್ತ್ರಗಳ ಜೊತೆಗೆ ಸಂಬಂಧಗಳ ಹುಡುಕಾಟ ಹಾಗೂ ಸಂಶೋಧನೆಯ ಪರಿಶ್ರಮಗಳೆಲ್ಲ ಎದ್ದು ಕಾಣುವಂತಹದ್ದು. ಸೆಂಟ್ರಲ್ ಕಾಲೇಜಿನ ಪೋಲಿ ಪಟಾಲಂ (ಪಿಪಿ) ಬಳಗದ ಸದಸ್ಯರಾಗಿದ್ದ ರಾಘವೇಂದ್ರರಾವ್ ಅವರು ಪಿಪಿ ಬಳಗ ತಂದ ‘ಅಂಕಣ’ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕೃತಿಗಳು: ತರುತಳೆದ ಪುಷ್ಪ, ಸಂಗಡ, ನಮಸ್ಕಾರ, ಅವಘ, ಇಂದಿನ ಕವಿತೆ, ಸಾಹಿತ್ಯ ಸಂವಾದ, ಭೃಂಗಮಾರ್ಗ, ವಿಶ್ಲೇಷಣೆ, ಮಂಜು ಮಣ್ಣು ಮೌನ, ಕಪ್ಪು ಕವಿತೆ, ಹತ್ತು ದಿಕ್ಕಿನ ಬೆಳಕು, ಕಣ್ಣ ಹನಿಗಳೆ ಕಾಣಿಕೆ, ಚಕ್ರವರ್ತಿಯ ಬಟ್ಟೆಗಳು.

ಎಚ್.ಎಸ್. ರಾಘವೇಂದ್ರರಾವ್

(01 Aug 1948)

Awards

BY THE AUTHOR