ನಮಸ್ಕಾರ

Author : ಎಚ್.ಎಸ್. ರಾಘವೇಂದ್ರರಾವ್

Pages 304

₹ 150.00




Year of Publication: 2006
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ನಮಸ್ಕಾರ- ಎಚ್.ಎಸ್.ರಾಘವೇಂದ್ರ ರಾವ್ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಲೇಖನಗಳಲ್ಲಿ ತಮ್ಮ ಸಮಕಾಲೀನರು ಮತ್ತು ನಂತರದ ಪೀಳಿಗೆಯವರ ಬಗೆಗೆ ಬರೆದ ಬರಹಗಳು ಇವೆ. ಕನ್ನಡದ ವಿದ್ವತ್ ಪರಂಪರೆಯನ್ನು ಮುಂದುವರೆಸಿಕೊಂಡು ಬಂದವರಲ್ಲಿ ಡಾ.ಜಿ.ಎಸ್.ಎಸ್. ಮುಖ್ಯರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಅಕಾಡೆಮಿಯಲ್ಲಿ ಪ್ರಕಟಿಸಿದ ಪುಸ್ತಕಗಳಾಗಿರಬಹುದು ಅಥವಾ ತಮ್ಮ ಶಿಷ್ಯರನ್ನು ಅವರವರ ಆಸಕ್ತಿವಲಯಗಳಲ್ಲಿ ಬೆಳೆಸಿದ್ದಾಗಿರಬಹುದು. ಪ್ರತಿಯೊಂದು ಕೆಲಸವೂ ಪಥಪ್ರವರ್ತಕವೇ. ಹೀಗಾಗಿ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಜಿ.ಎಸ್.ಎಸ್. ಅವರನ್ನು, ಅವರ ಶಿಷ್ಯರನ್ನು, ಅವರ ಪುಸ್ತಕಗಳನ್ನು ಗಮನಿಸದಿರಲು ಸಾಧ್ಯವಿಲ್ಲ. 

ಎಚ್.ಎಚ್. ರಾಘವೇಂದ್ರರಾವ್ ಅವರೂ ಸಹ ಜಿ.ಎಸ್.ಎಸ್. ಅವರ ಗರಡಿಯಿಂದ ಬಂದವರು. ಅವರ ಜೀವನ ಪ್ರೀತಿ ಮತ್ತು ಸಾಹಿತ್ಯ ಪ್ರೀತಿ ಒಂದೇ ಮೂಲದಿಂದ ಮೂಡಿಬಂದವು. ಅವರು ಅನೇಕ ಹಿರಿಯ, ಸಮಕಾಲೀನ ಮತ್ತು ಕಿರಿಯ ಲೇಖಕರ ಬಗ್ಗೆ ಬರೆದಿದ್ದಾರೆ. ಮಾತನಾಡಿದ್ದಾರೆ ಮತ್ತು ವ್ಯಾಪಕವಾದ ಓದಿನ ಹಿನ್ನೆಲೆಯನ್ನು ಪಡೆದಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಹಲವು ಹಿರಿಯರ, ಕಿರಿಯರ ಕೃತಿಗಳ ಬಗ್ಗೆ ಸಾಹಿತ್ಯದ ಬಗ್ಗೆ ರಾಘವೇಂದ್ರರಾವ್ ಅವರು ವಿಮರ್ಶಾಲೇಖನಗಳನ್ನು ಬರೆದಿದ್ದಾರೆ.

ಕುವೆಂಪು ಅವರ ಸಾಹಿತ್ಯದಲ್ಲಿ ವಸಾಹತುಶಾಹಿಯ ಸ್ವರೂಪ, ಕನ್ನಡ ಕಾವ್ಯ ಪರಂಪರೆ ಮತ್ತು ಬೇಂದ್ರೆ ಪ್ರತಿಭೆ, ವ್ಯಾಕುಲಸಾಧಕ ಮಧುರಚೆನ್ನರ ಅನುಭಾವ ಕಾವ್ಯದ ವಿಶಿಷ್ಟತೆಗಳು, ಶ್ರೀಹರಿಚರಿತೆಯಲ್ಲಿ ಆಧುನಿಕ ಚಿಂತನೆಗಳು, ನಿಮ್ಮುಸಿರು ನನ್ನ ಕವಿತೆ, ಧ್ಯಾನಸ್ಥ ಬುಗುರಿ ಮತ್ತು ಸತ್ಯದ ಸ್ಫೋಟ, ತಿರುಮಲೇಶರ ಲೋಕದೃಷ್ಟಿ- ಕೆಲವು ಅನಿಸಿಕೆಗಳು, ಮೊಗ್ಗು ಮೊಗ್ಗಿಗೆ ಸೂಜಿ ಸೂಜಿ, ಡಿ.ವಿ.ಗುಂಡಪ್ಪ- ವ್ಯಕ್ತಿತ್ವ ಮತ್ತು ಸಾಧನೆ, ಶಿವರಾಮ ಕಾರಂತರು ಮತ್ತು ಬಾಲಸಾಹಿತ್ಯ: ಪರಿಕಲ್ಪನೆಗಳ ವಿಶ್ಲೇಷಣೆ, ಪ್ರವಾಹ ಪತಿತರ ಕರ್ಮ ಹಿಂದೂ ಎಂಬ ಧರ್ಮ, ಭಾಷ್ಯದ ತರ್ಕದಿಂದ ಭಕ್ತಿಯ ಸಮರ್ಪಣಕ್ಕೆ, ಎಲ್ಲಿ ಹೋದವೋ ಗೆಳೆಯಾ ಆ ಕಾಲ.., ಬಿ.ವಿ.ಕಾರಂತರಿಗೆ ನಮಸ್ಕಾರ: ಕೆಲವು ಟಿಪ್ಪಣಿಗಳು, ತವರುಮನೆಯಲ್ಲೇ ಆಗಂತುಕ-ಡಿ.ಎನ್.ಶಂಕರಭಟ್, ಜಿ.ಎಸ್.ಶಿವರುದ್ರಪ್ಪನವರ ಸಂಸ್ಕೃತಿ ಸಾಧನೆ: ಒಂದು ಪರೀಶಿಲನೆ.

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books