ಪ್ರೀತಿಸುವುದೆಂದರೆ....

Author : ಎಚ್.ಎಸ್. ರಾಘವೇಂದ್ರರಾವ್

Pages 136

₹ 50.00




Year of Publication: 2001
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, , ಮಾರೇನಹಳ್ಳಿ, ವಿಜಯನಗರ, ಬೆಂಗಳೂರು -560040
Phone: 9448804905

Synopsys

ಜರ್ಮನ್ ಮನಃಶಾಸ್ತ್ರಜ್ಞನಾದ ಎರಿಕ್ ಫ್ರಾಂ ನ ಕೃತಿ ’ ಆರ್ಟ್ ಆಫ್ ಲಿವಿಂಗ್’ ನ ಕನ್ನಡ ಅನುವಾದವನ್ನು ವಿಮರ್ಶಕರೂ, ಲೇಖಕರೂ ಆದ  ಡಾ. ಕೆ.ವಿ ನಾರಾಯಣ ಮತ್ತು ಎಚ್. ಎಸ್. ರಾಘವೇಂದ್ರ ರಾವ್ ಅವರು ’ಪ್ರೀತಿಸುವುದೆಂದರೆ…’ ಎಂಬ ಶೀರ್ಪಿಕೆಯಡಿ ಹೊರತಂದಿದ್ದಾರೆ.

ಪ್ರೀತಿ ಎಂಬುದು ತಾನೇ ತಾನಾಗಿ ಹುಟ್ಟುವುದಿಲ್ಲ; ಅದಕ್ಕೆ ಶಿಸ್ತು, ಏಕಾಗ್ರತೆ, ಶಾಂತಿ, ಸಹನೆ ಬೇಕು. ಪ್ರೀತಿ ಎಂಬುದು ಭಾವನೆಯಲ್ಲ; ಅದೊಂದು ಆಚರಣೆ ಎಂಬ ನಿಲುವನ್ನು ತನ್ನ ಕೃತಿಯ ಮೂಲಕ ತಿಳಿಸಿದ ಎರಿಕ್ ಫ್ರಾಂ ತನ್ನ ಮನಃಶಾಸ್ತ್ರದ ನಿಲುವನ್ನು, ತತ್ವವನ್ನು, ಮನೋಸಿದ್ದಾಂತದ ಮಾರ್ಗದಲ್ಲೇ ಪ್ರಸ್ತುತಪಡಿಸಿದನು.

ಬೇರೆಯವರನ್ನು ಪ್ರೀತಿಸುವ ಮುನ್ನ ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು. ನಮ್ಮ ಮನವನ್ನು ಮುಕ್ತವಾಗಿಟ್ಟುಕೊಳ್ಳಬೇಕು. ಎಲ್ಲದಕ್ಕೂ ಲೆಕ್ಕಾಚಾರ ಹಾಕುವುದರ ಬದಲು ಮುಗ್ಧತೆಯನ್ನು ಕಾಯ್ದುಕೊಳ್ಳಬೇಕು. ಆತ್ಮೀಯತೆ, ಗೌರವ ಮತ್ತು ಜ್ಞಾನವನ್ನು ಬೆಳೆಸುವುದೇ ಪ್ರೀತಿ ಎಂಬ ಆಶಯವನ್ನು ತಿಳಿಸುವ ಕೃತಿ ’ಪ್ರೀತಿಸುವುದೆಂದರೆ…..’

ಪ್ರೀತಿ ಒಂದು ಕಲೆಯೇ, ಪ್ರೀತಿ ಮೀಮಾಂಸೆ, ಪ್ರೀತಿಯ ವಸ್ತುಗಳು, ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ, ಪ್ರೀತಿ ಮತ್ತು ಅದರ ವಿಘಟನೆ, ಪ್ರೀತಿಯ ಅನುಷ್ಠಾನ ಮೊದಲಾದ ವಿಷಯಗಳ ಪ್ರಸ್ತಾಪದ ಜೊತೆಯಲ್ಲಿ ಎರಿಕ್ ಫ್ರಾಂನ ಜೀವನದ ಮುಖ್ಯ ಘಟನೆಗಳು, ಎರಿಕ್ ಫ್ರಾಂನ ಪ್ರಕಟಿತ ಕೃತಿಗಳು(ಇಂಗ್ಲಿಷ್ ನಲ್ಲಿ) ಇವುಗಳ ಸಂಕ್ಷಿಪ್ತ ಮಾಹಿತಿಯನ್ನೂ ಈ ಕೃತಿಯಲ್ಲಿ ನೀಡಲಾಗಿದೆ.

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books