ಹತ್ತು ದಿಕ್ಕಿನ ಬೆಳಕು

Author : ಎಚ್.ಎಸ್. ರಾಘವೇಂದ್ರರಾವ್

Pages 230

₹ 200.00




Published by: ಕನ್ನಡ ಸಂಘ, ಕ್ರೈಸ್ಟ್ ಕಾಲೇಜು
Phone: 98801 32569

Synopsys

ಕನ್ನಡದ ಒಳಗೆ ಏನು ನಡೆಯುತ್ತಿದೆ ಎಂಬಷ್ಟೇ ಮುಖ್ಯವಾದುದು ಕನ್ನಡದ ಹೊರಗೆ ಏನು ಸಂಭವಿಸುತ್ತಿದೆ ಅಥವಾ ಸಂಭವಿಸಿದೆ ಎಂಬುದಾಗಿದೆ. ಚಿಂತಕರು ಬರಹಗಾರರು ಕಾಲಕಾಲಕ್ಕೆ ಹಾಗೆ ’ಬಾಹ್ಯ’ ಸಂಗತಿಗಳನ್ನು ಧ್ಯಾನಿಸುತ್ತಿರುತ್ತಾರೆ. ಹಿರಿಯ ವಿಮರ್ಶಕ ಎಚ್‌.ಎಸ್. ರಾಘವೇಂದ್ರರಾವ್‌ ಅಂತಹ ಧ್ಯಾನಿ.

ಶೀರ್ಷಿಕೆಯಿಂದಲೇ ಗಮನ ಸೆಳೆಯುವ ’ಹತ್ತು ದಿಕ್ಕಿನ ಬೆಳಕು’ ಜೀನ್ ಪಾಲ್ ಸಾರ್ತ್, ರಾಮ ಮನೋಹರ ಲೋಹಿಯಾ, ಫ್ಯಾನ್ಸ್ ಮಾಸ್ ಎಂಕೆನ್ಸ್ ಬರ್ಗರ್, ಸೂಸಿ ಫಾರು ಮತ್ತು ಕೆ. ಲಲಿತಾ ಅವರ ಚಿಂತನ ಬರಹಗಳ ಕನ್ನಡ ಅನುವಾದ. ವೈಚಾರಿಕ ವಾಗ್ವಾದ, ಮಾಧ್ಯಮ ಕೈಗಾರಿಕೆ, ಲಿಂಗ ತಾರತಮ್ಯ, ಮುಂತಾದ ವಿಚಾರಗಳು ಕೃತಿಯಲ್ಲಿ ಸ್ಥಾನ ಪಡೆದಿವೆ.

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books