ದೇವೇಗೌಡರ ಪ್ರಧಾನಿಯ ದಿನಗಳು

Author : ಶಿವಾಜಿ ಗಣೇಶನ್

Pages 340

₹ 450.00




Year of Publication: 2023
Published by: ಶಿಂಷಾ ಲಿಟರರಿ ಅಕಾಡೆಮಿ
Address: ‘ಅಮ್ಮ’, ರಿಂಗ್ ರಸ್ತೆ ಹತ್ತಿರ, ಗೆದ್ದಲಹಳ್ಳಿ ಸರ್ಕಲ್, ಸಪ್ತಗಿರಿ ಬಡಾವಣೆ, ಎಸ್.ಎಸ್. ಪುರಂ ಅಂಚೆ, ತುಮಕೂರು- 572102
Phone: 9845157308

Synopsys

‘ದೇವೇಗೌಡರ ಪ್ರಧಾನಿಯ ದಿನಗಳು’ ಹಿರಿಯ ಪತ್ರಕರ್ತ, ಲೇಖಕ ಶಿವಾಜಿ ಗಣೇಶನ್ ಅವರು ಬರೆದಿರುವ ಕೃತಿ. ಈ ಕೃತಿಗೆ ಲೋಕಸಭೆಯ ಮಾಜಿ ಸದಸ್ಯರಾದ ಡಾ.ಬಿ.ಎಲ್. ಶಂಕರ್ ಅವರ ಮುನ್ನುಡಿ ಹಾಗು ಕೆ ಸುಬ್ರಹ್ಮಣ್ಯ ಅವರ ಬೆನ್ನುಡಿ ಬರಹಗಳಿವೆ. ಕೃತಿಯ ಕುರಿತು ವಿವರಿಸಿರುವ ಬಿ.ಎಲ್. ಶಂಕರ್ ‘ಸಹಜನ್ಯಾಯದ ದೃಷ್ಟಿಯಲ್ಲಿ ಪ್ರಕಟವಾಗಲೇಬೇಕಿದ್ದ ಇಂಥ ಒಂದು ಅನನ್ಯ, ಅಮೂಲ್ಯ ಕೃತಿಯನ್ನು ಕೊನೆಗೂ ಪೂರ್ಣಗೊಳಿಸಿ ಸಾರ್ವಜನಿಕ ಅಧ್ಯಯನಕ್ಕೆ ಅನುವುಮಾಡಿಕೊಟ್ಟ ಶಿವಾಜಿ ಗಣೇಶನ್ ರವರಿಗೆ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳು ಸಲ್ಲಲೇಬೇಕು ಎಂದಿದ್ದಾರೆ.. ದೇವೇಗೌಡರ ಆಡಳಿತಾವಧಿಯಲ್ಲಿನ ಹಲವಷ್ಟು ವಿಚಾರಗಳನ್ನು ಸ್ಪಷ್ಟವಾಗಿ, ವಸ್ತುನಿಷ್ಠವಾಗಿ ಮತ್ತು ನಿಖರವಾಗಿ ವಿವಿಧ ಅಧ್ಯಾಯಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ಕೃತಿಯು ತನ್ನ ಉದ್ದೇಶಿತ ಗುರಿಯನ್ನು ತಲುಪುವಲ್ಲಿ ಯಾವ ಸಂಶಯವೂ ಇಲ್ಲ. ವಿಶೇಷವಾಗಿ ಪ್ರಸ್ತುತ ಪೀಳಿಗೆಯ ಹಾಗೂ ಭವಿಷ್ಯದಲ್ಲಿ ಸಾರ್ವಜನಿಕ ರಾಜಕಾರಣದಲ್ಲಿ ನೇರವಾಗಿ ಧುಮುಕುವ ಆಸಕ್ತಿಯುಳ್ಳವರು; ರಾಜಕೀಯ ಶಾಸ್ತ್ರವನ್ನು ಅಭ್ಯಸಿಸುವ ವಿದ್ಯಾರ್ಥಿಮಿತ್ರರು ಹಾಗೂ ಅವರುಗಳನ್ನು ರೂಪಿಸುವ ಉಪನ್ಯಾಸಕರುಗಳು ಓದಲೇಬೇಕಾದ ಕೃತಿಯಿದು ಎಂದಿದ್ದಾರೆ.

About the Author

ಶಿವಾಜಿ ಗಣೇಶನ್

ಪತ್ರಕರ್ತ, ಲೇಖಕ ಶಿವಾಜಿ ಗಣೇಶನ್ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ. ಪ್ರೌಢಶಾಲೆವರೆಗೆ ಓದಿದ್ದು ಮಳವಳ್ಳಿ. ಪಿಯುಸಿಯಿಂದ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣದವರೆಗೆ ವ್ಯಾಸಂಗ ಮಾಡಿದ್ದು ಮೈಸೂರಿನ ಮಹಾರಾಜ ಕಾಲೇಜು ಮತ್ತು ಮಾನಸಗಂಗೋತ್ರಿಯಲ್ಲಿ. ಮೈಸೂರಿನಲ್ಲಿ ವ್ಯಾಸಂಗ ಮಾಡುವಾಗ ದೇವನೂರ ಮಹಾದೇವ ಮುಂತಾದ ಸ್ನೇಹಿತರಿಂದ ಲೋಹಿಯಾವಾದಿಗಳು ಮತ್ತು ಪ್ರಗತಿಪರರ ಸ್ನೇಹ. ಬೆಂಗಳೂರಿನಲ್ಲಿ ಸಿದ್ದಲಿಂಗಯ್ಯ ಅವರ ಮತ್ತು ಎಡಪಂಥೀಯ ವಿಚಾರಧಾರೆಯತ್ತ ಒಲವು. ಆ ಸ್ನೇಹವೇ ಓದಿನ ಜೊತೆಗೆ ಹೋರಾಟದ ಹಾದಿಹಿಡಿಯಲು ಕಾರಣವಾಯಿತು. ಹಾಗಾಗಿ ಪಂಚಮ ಪತ್ರಿಕೆಯ ಆರಂಭ ಮತ್ತು ದಲಿತ ಸಂಘರ್ಷ ಸಮಿತಿಯ ಪ್ರಾರಂಭದಿಂದಲೂ ಅದರ ಹೋರಾಟಗಳಲ್ಲಿ ಭಾಗಿ. ದಲಿತ ಚಳವಳಿಗೆ ಒಂದು ...

READ MORE

Related Books