ಪ್ರಸ್ತಾವನೆಯು ಕಾನೂನು ಮತ್ತು ನೀತಿ ರಚನೆಗೆ ಒಂದು ದಿಕ್ಕನ್ನು ಸೂಚಿಸುತ್ತದೆ. ಸರ್ಕಾರಗಳು ಯಾವ ಕಾನೂನು ಮಾಡಬೇಕು, ಯಾವ ನೀತಿ ನಿರೂಪಿಸಬೇಕು ಮತ್ತು ಆ ಕಾನೂನಿನ ಉದ್ದೇಶ ಇತ್ಯಾದಿ ಯಾವುದಾಗಿರಬೇಕು ಎಂಬುದನ್ನು ಪ್ರಸ್ತಾವನೆ ನಿರ್ದೇಶಿಸುತ್ತದೆ. ಪ್ರಸ್ತಾವನೆಯು ಯಾವ ಉದ್ದೇಶವನ್ನು ಈಡೇರಿಸಲು ಮುಂದಾಗುತ್ತದೋ ಅದಕ್ಕೆ ದಾರಿಯನ್ನು ತೋರಿಸುತ್ತದೆ. ಸಂವಿಧಾನ ಯಾವ ಆದರ್ಶವನ್ನು ಪಾಲಿಸಬೇಕೆಂದು ಹೇಳುತ್ತದೋ ಅದನ್ನು ಪ್ರಸ್ತಾವನೆ ವಿವರಿಸುತ್ತದೆ. ದೇಶದ ಸಾಮಾಜಿಕ ಮತ್ತು ಅರ್ಥಿಕ ಅಭಿವೃದ್ಧಿಯ ಗುರಿಯನ್ನು ಯಾವ ರೀತಿ ಸಾಧಿಸಬೇಕು ಎಂಬುದನ್ನು ಪ್ರಸ್ತಾವನೆ ಸೂಚಿಸುತ್ತದೆ.
©2023 Book Brahma Private Limited.