ಹೊಯ್ಸಳೇಶ್ವರ

Author : ಕೌಂಡಿನ್ಯ ನಾಗೇಶ

Pages 270

₹ 280.00
Year of Publication: 2022
Published by: ಭಾವಸಿಂಚನ ಪ್ರಕಾಶನ

Synopsys

ಹೊಯ್ಸಳೇಶ್ವರ ಕೌಂಡಿನ್ಯ ಅವರ ಕೃತಿಯಾಗಿದೆ. ಸ್ಥಳ ಅಥವಾ ನೃಪಕಾಮನಿಂದ ಸ್ಥಾಪನೆಯಾದ ಹೊಯ್ಸಳ ಸಾಮ್ರಾಜ್ಯ ಮೂರನೆಯ ಬಲ್ಲಾಳನ ಆಳ್ವಿಕೆಯ ನಂತರ, ಹಂತ-ಹಂತವಾಗಿ ಅವನತಿಯತ್ತ ಸಾಗುತ್ತದೆ. ಸಾಮ್ರಾಜ್ಯ, ಸಾಮ್ರಾಟ ಎಷ್ಟೇ ಬಲಯುತನಾಗಿದ್ದರೂ ಶಾಶ್ವತವಾಗಿ ಇರಲು ಸಾಧ್ಯವೇ ಇಲ್ಲ. ಆದರೆ ಈ ಹೊಯ್ಸಳರು ನೀಡಿರುವ ಕೊಡುಗೆಗಳ ಮೂಲಕ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಲವಾರು ದೇಶಗಳ ಗಮನ ಸೆಳೆದಿದ್ದಾರೆ, ಈ ವಂಶವನ್ನು ಅನೇಕ ರಾಜರುಗಳು ಆಳಿದ್ದರೂ ಸಹ, ವಿಶೇಷ ಕೊಡುಗೆ ನೀಡಿ, ಸಾಮ್ರಾಜ್ಯದ ಬುನಾದಿಯನ್ನು ಭದ್ರಗೊಳಿಸಿದ್ದ ಏಕೈಕ ರಾಜ ವಿಷ್ಣುವರ್ಧನ (ಬಿಟ್ಟಿದೇವ), ರಾಜ್ಯಾಡಳಿತದ ಮಾದರಿಯನ್ನು ವಿವರಿಸುತ್ತಲೇ, ರಾಜನ ಪತ್ನಿಯರಲ್ಲಿ ಪ್ರಾಮುಖ್ಯತೆ ಪಡೆದಿದ್ದ ನಾಟ್ಯರಾಣಿ ಶಾಂತಲ ಆತ್ಮೀಯ ಗೆಳತಿ ಲಕ್ಷ್ಮಿಯ ಭಾವನಾತ್ಮಕ ಸಂಬಂಧ ರೂಪಗೊಳ್ಳುತ್ತದೆ. ಆ ಕಾಲದ ರಾಜಕೀಯದ ಸೂಕ್ಷ್ಮ ಸಂವೇದನೆಗಳೊಂದಿಗೆ, ಮಹಾ ದುರಂತದ ಘಟನೆ ಅನುಕಂಪದ ಸ್ಪಂದನ ಉಂಟು ಮಾಡುತ್ತದೆ. ಆ ದುರಂತದ ಹಿನ್ನಲೆ ಏನು? ಎಲ್ಲವನ್ನೂ ತನ್ನೊಳಗೆ ಅಡಗಿಸಿಕೊಂಡಿರುವ ಮಹೋನ್ನತ ಐತಿಹಾಸಿಕ ಕೃತಿಯಾಗಿದೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books