ಪಟ್ಟಮಹಾದೇವಿ ಶಾನ್ತಲದೇವಿ

Author : ಸಿ.ಕೆ. ನಾಗರಾಜರಾವ್

₹ 2.00




Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

ಈ ಪುಸ್ತಕ ಶಾನ್ತಲದೇವಿಯ ಬಾಳಿನ ಸುತ್ತ ಬಾಲ್ಯದಿಂದ ಸಾಯುಜ್ಯದವರೆಗೆ, ಹಾಗೆ ಆ ಕಾಲದ ಕಲೆ, ಸಂಸ್ಕೃತಿ, ಶಿಲ್ಪ, ಧರ್ಮ, ಸಾಹಿತ್ಯ, ಜನಜೀವನ, ರಾಜಕೀಯ ಹೋರಾಟ, ಆರ್ಥಿಕ ಪರಿಸ್ಥಿತಿ, ಕುತಂತ್ರಗಳು, ಮೇಲಾಟ, ಸಂಚು, ಮಾನವೀಯ ದೌರ್ಬಲ್ಯಗಳ ಸೆಳೆತ, ಪಿಸುಣತನ, ರಾಷ್ಟ್ರದ್ರೋಹ, ರಾಷ್ಟ್ರನಿಷ್ಠೆ, ವ್ಯಕ್ತಿನಿಷ್ಠೆ, ಯುದ್ಧಗಳು, ಕರಾಳ ಸ್ವಾರ್ಥ, ಹೀಗೆ ಹಲವು ಮುಖಗಳು ಇದರಲ್ಲಿ ಹರಡಿ ನಿಂತಿವೆ. ಪುಸ್ತಕದುದ್ದಕೂ ವಿಭಿನ್ನ ವಿಚಾರಗಳನ್ನು ಚರ್ಚಿಸಲಾಗಿದೆ .ನಿಜವಾದ ಮಾನವೀಯ ಮೌಲ್ಯಗಳು ಹೇಗಿರಬೇಕು ಹಾಗೆ ಲೌಕಿಕ ವಿಚಾರಗಳ ಸೆಳೆಯಲ್ಲಿ ಪಾರ ಲೌಕಿಕ ವಿಚಾರಗಳು ಅಂತರ್ವಾಹಿನಿಯಾಗಿ ಹರಿವುಗಳ ಬಗೆಗೆ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.

About the Author

ಸಿ.ಕೆ. ನಾಗರಾಜರಾವ್
(12 June 1915 - 10 April 1998)

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಿ. ಕೆ. ನಾಗರಾಜರಾವ್ ಅವರು 1915ರ ಜೂನ್ 12ರಂದು ಜನಿಸಿದರು. ತಂದೆ ಕೃಷ್ಣಮೂರ್ತಿ ರಾವ್ ಮತ್ತು ತಾಯಿ ಪುಟ್ಟಮ್ಮ..ತಂದೆ ವಿವಿಧೆಡೆ ವರ್ಗವಾಗುತ್ತಿರುವ ಪ್ರಯುಕ್ತ ಇವರ ಪ್ರಾಥಮಿಕ ಶಿಕ್ಷಣವು ವಿವಿಧಡೆಯಾಯಿತು. ಎಸ್.ಎಸ್.ಎಲ್.ಸಿ ಉತ್ತೀರ್ಣವಾಗಿದ್ದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ.  ಇಂಟರ್ಮೀಡಿಯೆಟ್‌ನಲ್ಲಿ ಉತ್ತೀರ್ಣರಾದರೂ ಓದು ಮುಂದುವರಿಯದೇ  ಮೈಸೂರು ಪ್ರೀಮಿಯರ್ ಮೆಟಲ್‌ ಕಾರ್ಖಾನೆಯಲ್ಲಿ. ಸಿಬ್ಬಂದಿ ನಿಯಂತ್ರಣ ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿದರು.ನಂತರ ಅದನ್ನು ತೊರೆದು, ನಿಟ್ಟೂರು ಶ್ರೀನಿವಾಸರಾಯರು ನಡೆಸುತ್ತಿದ್ದ ಸತ್ಯಶೋಧನ ಪ್ರಕಟಣಾ ಮಂದಿರದಲ್ಲಿ ವ್ಯವಸ್ಥಾಪಕರಾದರು. ಇಂಡಿಯನ್‌ ಮ್ಯೂಚುಯಲ್‌ ಲೈಫ್‌ ಅಸೋಸಿಯೇಷನ್‌ ಸಂಸ್ಥೆಗೂ ಸೇರಿದರು. ನಂತರ ಪತ್ರಿಕೋದ್ಯಮ ಸೇರಿದರು. ಕನ್ನಡ ಮತ್ತು ...

READ MORE

Related Books