ಇಟಗಿಯವರ 5 ಯಕ್ಷಗಾನ ಪ್ರಸಂಗಗಳು

Author : ರಾಘವೇಂದ್ರ ಇಟಗಿ

Pages 96

₹ 80.00




Year of Publication: 2019
Published by: ಕರ್ನಾಟಕ ಯಕ್ಷಗಾನ ಅಕಾಡೆಮಿ
Address: 2ನೇ ಮಹಡಿ ಕನ್ನಡ ಭವನ, ಜಿ.ಸಿ ರಸ್ತೆ, ಬೆಂಗಳೂರು-560002.

Synopsys

'ಇಟಗಿಯವರ 5 ಯಕ್ಷಗಾನ ಪ್ರಸಂಗಗಳು' ಕೃತಿಯನ್ನು ಲೇಖಕ ಇಟಗಿ ಮಹಾಬಲೇಶ್ವರ ಭಟ್‌ ರಚಿಸಿದ್ದಾರೆ. ಈ ಕೃತಿಯು ಯಕ್ಷಗಾನ ಪ್ರಸಂಗಗಳಿಗೆ ಆಧಾರಭೂತವಾಗಿದೆ. ಕಥಾನಕವೊಂದನ್ನು ವಿವಿಧ ಛಂದೋಬಂಧಗಳನ್ನು ಬಳಸಿ ಪ್ರದರ್ಶನಕ್ಕನುಗುಣವಾಗಿ ಈ ಕೃತಿಯು ರಚಿತವಾಗಿದೆ. ಅಶ್ವಿನಿ ವಿಜಯ, ಗೋಮಹಿಮೆ, ಗುರುದಕ್ಷಿಣೆ, ಗೋಕರ್ಣ, ಮಾರೀಷಾ ಕಲ್ಯಾಣ ಹೀಗೆ ಒಟ್ಟು ಐದು ಪ್ರಸಂಗಗಳನ್ನು ಒಳಗೊಂಡಿದೆ. ಲೇಖಕರು ವ್ಯಾಪಕವಾದ ರಂಗಾನುಭವವನ್ನು ಇಟ್ಟುಕ್ಕೊಂಡು ಇಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ಈ ಪುಸ್ತಕವನ್ನು ಹಿರಿಯ ಕವಿ, ಭಾಗವತ ಮತ್ತು ಅಕಾಡೆಮಿಯ ಸದಸ್ಯ ಪುರುಷೋತ್ತಮ ಪೂಂಜ ಪರಿಷ್ಕರಿಸಿದ್ದಾರೆ.

About the Author

ರಾಘವೇಂದ್ರ ಇಟಗಿ
(06 April 1926 - 12 August 1997)

ಕವಿ ರಾಘವೇಂದ್ರ ಇಟಗಿಯವರು ಗದಗ ಜಿಲ್ಲೆ ರೋಣ ತಾಲ್ಲೂಕಿನ ಇಟಗಿಯಲ್ಲಿ 1926 ಏಪ್ರಿಲ್‌ 6 ರಂದು ಜನಿಸಿದರು. ಇರಾ ಇವರ ಕಾವ್ಯನಾಮ. ತಾಯಿ ಸೀತಮ್ಮ, ತಂದೆ ಪ್ರಹ್ಲಾದಾಚಾರ್ಯ. ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹೈದರಾಬಾದ್‌ನ ಆಕಾಶವಾಣಿಯಲ್ಲಿ ವೃತ್ತಿ ಜೀವನ ಆರಂಭಿಸಿದರು. ಬೆಂಗಳೂರು ಆಕಾಶವಾಣಿಯಲ್ಲಿ ‘ನವಸುಮ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿ ಹಲವಾರು ಕವಿಗಳ ಕವನಗಳಿಗೆ ರಾಗ ಸಂಯೋಜನೆ ಮಾಡಿ ಪ್ರಸಾರ ಮಾಡಿದ್ದು ಜನಮಾನಸದಲ್ಲಿ ಜನಪ್ರಿಯತೆ ಗಳಿಸಿತ್ತು. ಇವರ ಪ್ರಮುಖ ಕೃತಿಗಳೆಂದರೆ ವಸುಂಧರಾ ಗೀತೆಗಳು, ಕ್ಷಿತಿಜ ಕೋದಂಡ, ಸನ್ನದ್ಧ ಭಾರತ, ಬೆಳಕು ತುಂಬಿದ ಬಲ್ಬು, ...

READ MORE

Related Books