ಮಹಾ ಬೌದ್ಧ ವಿಷಯ ವಿಶ್ವಕೋಶ ನಿಘಂಟು

Author : ಆರ್. ಶೇಷಶಾಸ್ತ್ರಿ

Pages 422

₹ 1000.00




Year of Publication: 2020
Published by: ಟಿ.ಎನ್. ಮುದ್ದಮ್ಮ ಶ್ಯಾಮಸುಮದರರಾವ್
Address: ಸನ್ನಿಧಿ ಪ್ರಕಾಶನ, 5/1, ನಾಗಪ್ಪಬೀದಿ, ಶೇಷಾದ್ರಿಪುರ, ಬೆಂಗಳೂರು- 560020
Phone: 9449446328

Synopsys

ಪ್ರಾಚೀನ ಕನ್ನಡಸಾಹಿತ್ಯದಲ್ಲಿರಲಿ, ಆಧುನಿಕ ಕಾಲಘಟ್ಟದಲ್ಲಿ ಕೂಡ ಬೌದ್ಧ ಸಾಹಿತ್ಯದ ಕುರಿತಾಗಿ ಬೆರಳೆಣಿಕೆಯ ಗ್ರಂಥಗಳು ಮಾತ್ರ ರಚಿತವಾಗಿವೆ. ಈ ಕೊರತೆಯನ್ನು ತುಂಬಿಸುವಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಬಂದಿರುವ ‘ಮಹಾ ಬೌದ್ಧ ವಿಷಯ ವಿಶ್ವಕೋಶ ನಿಘಂಟು’ ಕನ್ನಡಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ.

ಮೂಲತಃ ಇದು ‘ಮಹಾಬೌದ್ಧ ನಿಘಂಟು ಸರ್ವಸ್ವಮು’ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ರಚಿತವಾದ ಗ್ರಂಥ. ಶ್ರೀ ಅನ್ನಪರೆಡ್ಡಿ ವೆಂಕಟೇಶ್ವರ ರೆಡ್ಡಿಯವರು ರಚಿಸಿರುವ ಈ ಗ್ರಂಥವನ್ನು ಶ್ರೀ. ಬಿ.ಎನ್. ಶ್ರೀನಿವಾಸನ್ ಹಾಗೂ ಡಾ. ಆರ್. ಶೇಷಶಾಸ್ತ್ರಿ ಅವರು ಕನ್ನಡಕ್ಕೆ ತಂದಿದ್ದಾರೆ. ಕನ್ನಡದಲ್ಲಿ ವಿಭಿನ್ನ ರೀತಿಯ ನಿಘಂಟು, ಕೋಶಗಳು ರಚಿತವಾಗಿ ಬಂದಿವೆ. ಆದರೆ ‘ಮಹಾ ಬೌದ್ಧ ವಿಷಯ ವಿಶ್ವಕೋಶ ನಿಘಂಟು’ ಹಲವು ಕಾರಣಗಳಿಂದಾಗಿ ಹಿಂದಿನ ಎಲ್ಲ ಗ್ರಂಥಗಳಿಗಿಂತ ವಿಶೇಷವಾಗಿದೆ. ಇದು ಸಾಮಾನ್ಯ ಪ್ರತಿಪದಾರ್ಥ ನಿಘಂಟುಗಳಿಗಿಂತಲೂ ಪಾರಿಭಾಷಿಕ ಪದಗಳಿಗಿಂತಲೂ ಭಿನ್ನವಾಗಿ, ವಿಷಯದ ವಿವರಗಳನ್ನು ವಿಸ್ತೃತವಾಗಿ ನೀಡಿರುವುದರಿಂದ ಇದು ವಿಶ್ವಕೋಶವೂ ಹೌದು ನಿಘಂಟು ಕೂಡ ಹೌದು.

ಒಂದು ಉದಾಹರಣೆ ನೋಡುವುದಾದರೆ, ‘ಆಂಬಪಾಲಿ’ ಎನ್ನುವ ಪದಕ್ಕೆ, ‘ಆಮ್ರಪಾಲಿ’ ಎಂಬ ಅರ್ಥ (ಸಂಸ್ಕೃತ) ವನ್ನು ಕೊಟ್ಟು, ‘ಮಾವಿನ ಮರಗಳ ಸಾಲು’ ಎಂಬ ಇದರ ವಾಚ್ಯಾರ್ಥವನ್ನು ವಿವರಿಸಿರುವುದಲ್ಲದೆ, ಬುದ್ಧನ ಸಮಕಾಲೀನಳಾದ ಆಮ್ರಪಾಲಿ ಎನ್ನುವ ಮಹಿಳೆಯ ವಿಚಾರವನ್ನು ‘ಮಾವಿನ ಮರದ ಬುಡದಲ್ಲಿ ದೊರೆತವಳಾದ್ದರಿಂದ ಇವಳಿಗೆ ಈ ಹೆಸರು ಬರಲು ಕಾರಣವಾಯಿತು’ ಎಂಬ ವಿವರಣೆಯಿಂದ ಮೊದಲುಗೊಂಡು ಇವಳ ಸಮಗ್ರ ಜೀವನದ ಸಂಕ್ಷಿಪ್ತ ಪರಿಚಯವನ್ನು ನೀಡಲಾಗಿದೆ. ಈ ಕೋಶವು ಕೇವಲ ಮಾಹಿತಿಗಳ ಸಂಗ್ರಹವನ್ನಷ್ಟೇ ಮಾಡದೆ, ಕೆಲವೊಂದು ಪದಗಳಿಗೆ ವಿಮರ್ಶಾತ್ಮಕವಾದ, ಸಂಶೋಧನಾತ್ಮಕವಾದ ವಿವರಣೆಗಳನ್ನೂ ನೀಡಿದೆ. ಅಮರಸಿಂಹನ ಕುರಿತು ವಿವರಿಸುವಾಗ, ಸಾಧಾರಣವಾಗಿ ಈತನನ್ನು ವೈದಿಕ ಬ್ರಾಹ್ಮಣನೆಂದು ಕರೆಯುವ ಪರಿಪಾಟು ಇರುವುದನ್ನು ತಿಳಿಸಿ, ಆದರೆ ಈತ ಬೌದ್ಧ ಧರ್ಮೀಯ ಎನ್ನುವುದಕ್ಕೆ ಆಧಾರಗಳನ್ನು ತೋರಿಸಿದ್ದಾರೆ. ಕೆಲವೊಂದು ಪದಗಳ ವಿವರಣೆ ನೀಡುವಲ್ಲಿ, ಬೌದ್ಧರಲ್ಲಿ ಅಂದು ಬಳಕೆಯಲ್ಲಿದ್ದ ಕಾಲಗಣನೆ ಕುರಿತಾದ ವಿಚಾರದ ವಿವರಣೆ ಇದೆ.

ಬುದ್ಧನ ಎಲ್ಲ ಪ್ರತಿಮೆಗಳೂ ಒಂದೇ ರೀತಿಯದಾಗಿರುವುದಿಲ್ಲ. ವಿಭಿನ್ನ ಲಕ್ಷಣಗಳಿಗೆ ಅನುಗುಣವಾಗಿ ಬುದ್ಧನ ಪ್ರತಿಮೆಗಳು ವಿಭಿನ್ನ ಹೆಸರುಗಳಿಂದ ಗುರುತಿಸಲ್ಪಡುತ್ತವೆ. ಅವುಗಳಲ್ಲಿ ಒಂದು ಉಷ್ಣೀಷ. ನಡುನೆತ್ತಿಯ ಮೇಲೆ ಉಬ್ಬಿದಂತೆ ಕಾಣಿಸುವ ಕೂದಲಿನ ಗಂಟು ಅಥವಾ ಬೋರೆಯ ಲಕ್ಷಣವಿದ್ದರೆ ಅದು ಉಷ್ಣೀಷ. ಇದನ್ನು ವಿಜಯ ಎಂದೂ ಕರೆಯಲಾಗುತ್ತದೆ. ಆದರೆ ಉಷ್ಣೀಷವಿಜಯ ವಿಭಿನ್ನ ಪ್ರಕಾರದ್ದು. ಇದು ತಾಂತ್ರಿಕ ಪಂಥದ ಎಂಟು ಕೈ ಮೂರು ಮುಖಗಳಿರುವ ದೇವತೆ. ಹೀಗೆ ಪ್ರತಿಮಾಶಾಸ್ತ್ರದ ಹಿನ್ನೆಲೆಯಲ್ಲಿ ಕೆಲವು ಪದಗಳನ್ನು ಗಮನಿಸಿದರೆ, ಎಮಿರಾಲ್ಡ್ ಬುದ್ಧ ಎನ್ನುವುದು ಕ್ರಿ.ಪೂ ಒಂದನೆಯ ಶತಮಾನದಲ್ಲಿ ನಿರ್ಮಿಸಲಾದ ಮರಕತ ಮಣಿಯ ಬುದ್ಧನ ಪ್ರತಿಮೆ. ಇದು ವಿಭಿನ್ನ ಕಾರಣಗಳಿಂದಾಗಿ ದೇಶ ವಿದೇಶಗಳನ್ನು ಸುತ್ತಿ. ಕೆಲ ಕಾಲ ಭೂಗತವಾಗಿದ್ದು, ಹದಿನೆಂಟನೆಯ ಶತಮಾನದಿಂದೀಚೆಗೆ ಬಾಂಕಾಕ್ ನಲ್ಲಿ ಸ್ಥಿರವಾಗಿರುವ ರೋಚಕ ಕತೆಯನ್ನು ಈ ಪದದ ವಿವರಣೆಯಲ್ಲಿ ನಿರೂಪಿಸಲಾಗಿದೆ. ಹೀಗೆ ಪ್ರತಿಮಾ ಶಾಸ್ತ್ರದ ಲಕ್ಷಣಗಳು, ಪ್ರಸಿದ್ಧ ಬುದ್ಧನ ಶಿಲ್ಪಗಳ ರೋಚಕ ಕತೆಗಳು, ಶಿಲ್ಪಶಾಸ್ತ್ರಕ್ಕೆ ಸಂಬಂಧಿಸಿದ ವಿವರಣೆಗಳನ್ನೂ ಈ ಗ್ರಂಥವು ನೀಡುತ್ತದೆ. ಈ ಅನುವಾದ ಕೋಶವು ಕನ್ನಡಕ್ಕೆ ಒಂದು ವಿಶೇಷ ಕೊಡುಗೆಯಾಗಿದೆ. ಬೌದ್ಧ ಧರ್ಮವನ್ನು ಸಮಗ್ರವಾಗಿ ಪರಿಚಯಿಸುವ ಕೋಶವಾಗಿದೆ ಅಲ್ಲದೆ ವಿಶೇಷವಾಗಿ ಬೌದ್ಧಧರ್ಮವನ್ನು ಕುರಿತು ಅಧ್ಯಯನ ಮಾಡುವವರಿಗೆ ಇದು ಒಂದು ಆಕರ ಗ್ರಂಥವಾಗಿದೆ. ಬೌದ್ಧಧರ್ಮದ ಒಳಹೊರಗನ್ನು ಸಮಗ್ರವಾಗಿ ಪರಿಚಯಿಸುವ ಈ ಗ್ರಂಥವು, ಪದಗಳಿಗೆ ನೀಡುವ ವಿವರಣೆಯ ಮೂಲಕವೇ ದೇಶವಿದೇಶಗಳಲ್ಲಿ ಬೌದ್ಧ ಹೇಗೆ ವ್ಯಾಪಿಸಿತು, ಆಯಾ ಸಂಸ್ಕೃತಿಗಳನ್ನು ಹೇಗೆ ನಾಗರೀಕಗೊಳಿಸಿತು. ಆ ಮೇರೆಗೆ ಬೌದ್ಧ ಹೇಗೆ ಬದಲಾವಣೆಗಳೊಳಗಾಯಿತು ಎಂಬ ವಿಮರ್ಶಾತ್ಮಕ ವಿಚಾರಗಳನ್ನೂ ಒಳಗೊಂಡಿದೆ. ಚೀನಾದಲ್ಲಿ ಬೌದ್ಧಧರ್ಮ, ಅಮೆರಿಕದಲ್ಲಿ ಬೌದ್ಧಧರ್ಮ, ಕಾಂಬೋಡಿಯಾದಲ್ಲಿ ಹೇಗೆ ವೈದಿಕ ಸಂಪ್ರದಾಯ ನಶಿಸಿ ಬೌದ್ಧ ಪ್ರಸಾರ ನಡೆಯಿತು, ಜಪಾನಿನಲ್ಲಿ ಬೌದ್ಧ ಧರ್ಮ ಹರಡಲು ವೈದ್ಯವು ಹೇಗೆ ಸಹಾಯಕವಾಯಿತು. ವಿಯತ್ನಾಂ ನಲ್ಲಿ ವಿಭಿನ್ನಕಾಲದಲ್ಲಿ ಬೌದ್ಧಧರ್ಮದ ಸ್ವರೂಪ ಬದಲಾದ ವಿಚಾರ, ಮೊದಲಾದ ಐತಿಹಾಸಿಕ ವಿಚಾರಗಳನ್ನು ವಿಮರ್ಶಾತ್ಮಕವಾಗಿ ನೀಡಲಾಗಿದೆ.

About the Author

ಆರ್. ಶೇಷಶಾಸ್ತ್ರಿ

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಬಹುಭಾಷಾ ಪಂಡಿತರ ಪರಂಪರೆಗೆ ಸೇರಿದವರು ಡಾ. ಆರ್. ಶೇಷಶಾಸ್ತ್ರಿ. ಅಧ್ಯಾಪಕ, ಲೇಖಕ, ಅನುವಾದಕ, ಸಂಶೋಧಕರಾಗಿ ಅದರದ್ದು ಬಹುಮುಖ ಪ್ರತಿಭೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಶೇಷಶಾಸ್ತ್ರಿಗಳ ಹುಟ್ಟೂರು. ಬೆಂಗಳೂರು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿ ಪಡೆದ ಅವರು ಸಂಶೋಧಕ ಸಹಾಯಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕನ್ನಡ ಅಧ್ಯಾಪಕ, ರೀಡರ್, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಆನಂತರದಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾದರು ಜೊತೆಗೆ, ಕುಪ್ಪಂನ ದ್ರಾವಿಡ ವಿವಿಯಲ್ಲಿ ಕನ್ನಡ ಮತ್ತು ಅನುವಾದ ವಿಭಾಗದ ಸ್ಥಾಪಕ ...

READ MORE

Related Books