ಧಮ್ಮಯಾನ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 480

₹ 550.00
Year of Publication: 2024
Published by: ಲಡಾಯಿ ಪ್ರಕಾಶನ
Address: ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

'ಧಮ್ಮಯಾನ' ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಕೃತಿಯ. ಈ ಕೃತಿಗೆ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಧಮ್ಮಯಾನವು ನಾಲ್ಕು ವರ್ಷಗಳ ತಪಸ್ಸಿನ ದೆಸೆಯಿಂದಾಗಿ ಇಂದು ಒಂದು ಬೃಹತ್ ಗ್ರಂಥವಾಗಿ ಹೊರಬರುತ್ತಿದೆ. ಅದಕ್ಕಾಗಿ ಮಿತ್ರ ಮೂಡ್ನಾಕೂಡು ಚಿನ್ನಸ್ವಾಮಿಯವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದಿದ್ದಾರೆ. ತಪಸ್ಸು ಎನ್ನುವ ಪದವನ್ನು ಕೇವಲ ಅಲಂಕಾರಿಕವಾಗಿ ಪ್ರಯೋಗ ಮಾಡಿಲ್ಲ. ಸಂವಾದ ಸಂಚಿಕೆಯಲ್ಲಿ ಬರುತ್ತಿದ್ದ ಧಮ್ಮಯಾನ ಧಾರಾವಾಹಿಯನ್ನು ನಿರಂತರವಾಗಿ ಓದಿಕೊಂಡು ಬಂದಿದ್ದೇನೆ. ಧಮ್ಮಯಾನವು ಅಷ್ಟೇನು ಸುಲಭದ ಯಾನ(ಪ್ರಯಾಣವಲ್ಲ). ಧಮ್ಮವನ್ನು ಹೊತ್ತ ಯಾನವು (ದೋಣಿಯು) ಭದ್ರವಾಗಿದ್ದರೇನೆ ಓಘತರಣವು (ಪ್ರವಾಹ ದಾಟುವುದು) ಸಾಧ್ಯ (ಸಂಯುಕ್ತ ನಿಕಾಯದ ಸಗಾತ ವಗ್ಗದ ಓಘತರಣವನ್ನು ನೋಡಿ). ಧಮ್ಮಯಾನದ ಪ್ರಯಾಣವು ಸುಖಕರವಾಗಿರಬೇಕಾದರೆ ಮತ್ತು ಧಮ್ಮದೋಣಿಯು ಭದ್ರವಾಗಿರಬೇಕಾದರೆ ಕೃತಿಕಾರನು ತಪಸ್ಸು ಮಾಡಲೇಬೇಕು.

ಕೃತಿಕಾರನು ಸಮರ್ಪಣಾಭಾವದಿಂದ ತಪಸ್ಸು ಮಾಡದ್ದರಿಂದ ದೋಣಿಯೂ ಭದ್ರವಾಗಿದೆ, ಪ್ರಯಾಣವೂ ಸುಖಕರವಾಗಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ. ಚಿನ್ನಸ್ವಾಮಿಯವರು ವಿಪಸ್ಸನ ಧ್ಯಾನಿಗಳು. ಪಾಲಿ ಮೂಲಗ್ರಂಥಗಳನ್ನು (ಅವುಗಳ ಇಂಗ್ಲಿಷ್ ರೂಪದಲ್ಲಿ) ಓದಿಕೊಂಡವರು. ಯಾವ ಮಹನೀಯರು ಪಾಲಿ ಮೂಲದ ತ್ರಿಪಿಟಕಗಳನ್ನು ಓದಿ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೋ ಅಂತಹ ಪೂಜ್ಯರಾದ ಭಿಕ್ಕು ಬೋಧಿಯವರನ್ನು, ಪರಮಪೂಜ್ಯ ಆಚಾರ್ಯ ಬುದ್ಧರಕ್ಖಿತ ಥೇರಾ ಇನ್ನೂ ಮುಂತಾದವರೊಡನೆ ಬೆರೆತವರು. ಹೀಗಾಗಿ ಇವರು ತಿಲಕ್ಷಣ ಬಗ್ಗೆ ಬರೆಯುವಾಗಾಗಲಿ, ಆರ್ಯಸತ್ಯಗಳ ಬಗ್ಗೆ ಟಿಪ್ಪಣಿ ಮಾಡುವಾಗಾಗಲಿ ಅತ್ಯಂತ ಎಚ್ಚರದಿಂದ ಮೂಲಕ್ಕೆ ಲೋಪ ಬರದಂತೆ, ಕಠಿಣ ಸಂಗತಿಗಳನ್ನು ಸರಳ ಕನ್ನಡ ಪದಗಳಲ್ಲಿ ಮತ್ತು ಸುತ್ತಗಳನ್ನು ಆಧರಿಸಿಯೇ ಸಾಮಾನ್ಯ ಓದುಗನೂ ಸಂಗ್ರಹಿಸುವ ರೀತಿಯಲ್ಲಿ ಮಂಡಿಸುತ್ತಾರೆ. ಕನ್ನಡದಲ್ಲಿ ಬರೆಯುವ ಬೌದ್ಧ ಸಾಹಿತಿಗಳು ಬಹಳಷ್ಟು ಜನರಿದ್ದಾರೆ. ಉತ್ತಮೋತ್ತಮವಾಗಿ ಬರೆದವರೂ ಇದ್ದಾರೆ. ಅದಕ್ಕೆ ಕೊರತೆ ಏನಿಲ್ಲ. ಆದರೆ ಮೂಲ ಪಿಟಕಳಿಗೆ ಲಗ್ಗೆ ಹಾಕಿ ಅಲ್ಲಿಂದ ಹೆಕ್ಕಿ ಬರೆಯುವ ಪ್ರಥಮ ಶ್ರೇಣಿ (ಪ್ರೈಮರಿ ರೈಟರ್ಸ್) ಬರಹಗಾರರು ಕಡಿಮೆಯೆ. ನಾನು ಕಂಡುಕೊಂಡಂತೆ ಮೂಡ್ನಾಕೂಡು ಚಿನ್ನಸ್ವಾಮಿಯವರು ಪ್ರಥಮ ಶ್ರೇಣಿ ಬರಹಗಾರರಲ್ಲಿ ಒಬ್ಬರು. ನದಿಯಿಂದ ಮೊಗೆದ ನೀರಿಗೂ, ನಲ್ಲಿಯಿಂದ ಬಂದ ನೀರಿಗೂ ವ್ಯತ್ಯಾಸವಿರುತ್ತದೆ. ಚಿನ್ನಸ್ವಾಮಿಯವರು ಧಮ್ಮವನ್ನು ರಸವತ್ತಾದ ಭಾಷೆಯಲ್ಲಿ ಕಥೆಯನ್ನು ಸರಾಗವಾಗಿ ಓದಿಕೊಂಡು ಹೋಗುವಂತೆ ತುಲನಾತ್ಮಕವಾಗಿ ಬರೆಯುತ್ತಾ ಹೋಗುತ್ತಾರೆ.

ಪಾಲಿ ಪಾರಿಭಾಷಿಕ ಪದಗಳನ್ನು ಸುಲಭ ಕನ್ನಡಕ್ಕೆ ತಂದಿರುವುದು ವಿಶೇಷ ಸಂಗತಿ. ಪುರುಷಸೂಕ್ತದ ಮಂತ್ರಗಳನ್ನು ವಿಮರ್ಶಿಸುತ್ತಾ, ಛಾಂದೋಗ್ಯೋಪನಿಷತ್ ವಾಕ್ಯಗಳನ್ನು ಉಧೃತಗೊಳಿಸುತ್ತಾ ತಮ್ಮ ಮಾತುಗಳಿಗೆ ಅರ್ಥವನ್ನು ತುಂಬುತ್ತಾರೆ. ಸಂದರ್ಭ ಬಂದಾಗ ಬುದ್ಧನ ಜಾತಕ ಕಥೆಗಳನ್ನೇ ಪ್ರಶ್ನಿಸುತ್ತಾರೆ. ಇದು ಒಬ್ಬ ಶ್ರೇಷ್ಠ ಚಿಂತಕನ ನಿರ್ಭಿತ ಉದಾನ(ಉದ್ಧಾರ) ವಾಗುತ್ತದೆ. ಬುದ್ಧರ ಬಗ್ಗೆ ಅರಿಯಬೇಕೆಂದರೆ, ಬೌದ್ಧಧರ್ಮವನ್ನು ಅಚ್ಛಗನ್ನಡದಲ್ಲಿ ತಿಳಿದುಕೊಳ್ಳಬೇಕೆಂದರೆ ಧಮ್ಮಯಾನವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಇದೊಂದು ಶ್ರೇಷ್ಠ ಗ್ರಂಥ. ಈ ಧಮ್ಮಯಾನವು ಎಲ್ಲರ ಬದುಕಿನ ಸುಂದರಯಾನವಾಗಲಿ ಎಂದು ಹಾರೈಸಿದ್ದಾರೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books