ಬುದ್ಧ-ಈ ಕೃತಿಯನ್ನು ಲೇಖಕ ಸಿ.ಎಚ್. ರಾಜಶೇಖರ ಅವರು ರಚಿಸಿದ್ದು, ಈ ಕೃತಿಯಲ್ಲಿ ಬುದ್ಧನಿಗೆ ಸೇರಿದ ಅತ್ಯುತ್ತಮ ಕಥೆಗಳನ್ನು ಸಂಕಲಿಸಲಾಗಿದೆ. ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ ಮತ್ತು ಇತರೆ ಕಥೆಗಳು ಇಲ್ಲಿದ್ದು, 25 ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟವಾಗಿದೆ. ಜಾತಕ ಕಥೆಗಳನ್ನು ಧರ್ಮಗ್ರಂಥವೆಂದು ಅಂಗೀಕರಿಸಲಾಗಿದೆ. ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ.