ಮಾಸ್ಟರ್ ಪೈಂಟರ್

Author : ಕೆ. ಪ್ರಭಾಕರ ರಾವ್

Pages 144

₹ 90.00
Year of Publication: 2012
Published by: ದುರ್ಗಾ ಬುಕ್ ಹೌಸ್
Address: ನಂ: 96/2, 2ನೇ ಮಹಡಿ 2ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ ಗೋವಿಂದರಾಜನಗರ ಬೆಂಗಳೂರು - 40

Synopsys

‘ಮಾಸ್ಟರ್ ಪೈಂಟರ್’ ಪ್ರಭಾಕರ ರಾವ್ ಅವರ ನಗೆ ಬರೆಹಗಳ ಸಂಗ್ರಹ. ನಿಧಾನವಾಗಿ ಒಂದೊಂದೇ ವಾಕ್ಯಗಳನ್ನು ಎರಡುರಡು ಬಾರಿ ಓದಿ ಮಧ್ಯೆ ಒಮ್ಮೊಮ್ಮೆ ಬ್ರೇಕ್ ತಗೊಂಡು ಓದಬೇಕು. ಪದಗಳನ್ನು ಜೋಡಿಸುವ ಪರಿ, ಶಬ್ದಗಳಲ್ಲಿ ಸಂದರ್ಭಕ್ಕೆ ಮೀರಿದ ವಿಶೇಷಾರ್ಥ ಹೊಳೆಯಿಸುವ ಬಗೆ, ಓದುಗರ ಮಂಡೆಗೆ ಹೊಕ್ಕದಿದ್ದರೆ ಹಣ್ಣು ಬಿಟ್ಟು ಸಿಪ್ಪೆ ತಿಂದಂತೆ ಆದೀತು ನಿಮ್ಮ ಪಾಡು ಎನ್ನುತ್ತಾರೆ ಲೇಖಕರು.

ಹಾಸ್ಯ ಒಂದು ಬೌದ್ಧಿಕ ಕಸರತ್ತು, ಶ್ಲೇಷೆ ಮತ್ತು ದ್ವಂದ್ವಾರ್ಥವನ್ನು ಧಾರಾಳವಾಗಿ ಬಳಸುವ ಇವರ ಹಾಸ್ಯ ಬಹುಬಾರಿ ಚಿಪ್ಪೋಳಡಗಿರುವ ಮುತ್ತು ಆರಿಸುವ ಕೆಲಸ ಓದುಗರದ್ದು. ಇಲ್ಲಿನ ಹೆಚ್ಚಿನ ಪ್ರಬಂಧಗಳು, ಘಟನಾವಳಿಗಳು ಈ ಎಲ್ಲ ತಮಾಷೆಗಳನ್ನು ಮೀರಿ ಅದರ ಆಚಿಗಿನದ್ದೇನನ್ನೋ ಸೂಚಿಸುವಂತಿದೆ.  ಅದು ನೀತಿ ಇರಬಹುದು, ವಿಷಾದ ಇರಬಹುದು, ಸತ್ಯ ದರ್ಶನವಿರಬಹುದು ಗಂಟೆಯ ಸದ್ದು ನಿಂತ ಮೇಲೂ ಗುಂಯ್ ಗುಡುತ್ತಲೇ ಇರುವಷ್ಟು ರಿಂಗಣ ಇಲ್ಲಿಯ ನಗೆ ಬರೆಹಗಳಲ್ಲಿದೆ.

 

About the Author

ಕೆ. ಪ್ರಭಾಕರ ರಾವ್

ಕನ್ನಡದ ಹಾಸ್ಯ ಬರಹಗಾರರು-ಕೆ. ಪ್ರಭಾಕರ ರಾವ್ . ಹಲವು ಪ್ರಬಂಧ ಹಾಗೂ ಕೃತಿಗಳನ್ನು ರಚಿಸಿದ್ದಾರೆ. 'ಮಾಸ್ಟರ್ ಪೈಂಟರ್' (ನಗೆ ಬರಹಗಳು) ಹಾಗೂ ಭಾರತೀಯ ಇತಿಹಾಸಕಾರರು (ಪರಿಚಯಾತ್ಮಕ ಲೇಖನಗಳು) ಅವರ ಪ್ರಕಟಿತ ಕೃತಿಗಳು ...

READ MORE

Related Books