ಪ್ರಾಚೀನ ಭಾರತದಲ್ಲಿ ಲೋಹ ತಂತ್ರಜ್ಞಾನ

Author : ಟಿ. ಆರ್. ಅನಂತರಾಮು

Pages 80

₹ 65.00




Year of Publication: 1999
Published by: ಬ್ಯಾಲದಕೆರೆ ಪ್ರಕಾಶನ
Address: ಜಿ. ನಾಗತಿಹಳ್ಳಿ ಅಂಚೆ, ಬೆಳ್ಳೂರು ಹೋಬಳಿ, ನಾಗಮಂಗಲ ತಾ., ಮಂಡ್ಯ ಜಿಲ್ಲೆ

Synopsys

ಭವ್ಯ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಭಾರತದಲ್ಲಿ ತಂತ್ರಜ್ಞಾನವು ಉನ್ನತ ಮಟ್ಟದಲ್ಲಿ ಬೆಳೆದಿರುವುದನ್ನು ಕಾಣಬಹುದು. ಖಗೋಳ, ಗಣಿತ, ವಿಜ್ಞಾನ, ವಿಶೇಷವಾಗಿ ವೈದ್ಯವಿಜ್ಞಾನದಲ್ಲಿ ಪ್ರಾಚೀನ ಭಾರತೀಯರು ಪಡೆದ ನೈಪುಣ್ಯ ಹಿರಿಮೆ, ಗರಿಮೆಗಳು ಲೋಕವಿಖ್ಯಾತವಾಗಿವೆ. ಹಾಗೆಯೇ ಲೋಹ ತಂತ್ರಜ್ಞಾನದಲ್ಲೂ ನಮ್ಮವರ ಸಾಧನೆ ಅತ್ಯುನ್ನತ ಮಟ್ಟದ್ದು. ವಿಶೇಷವಾಗಿ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚುವುದು, ಅದನ್ನು ಸಂಸ್ಕರಿಸುವುದು, ತಾಮ್ರವನ್ನು ಬೇರೆ ಬೇರೆ ಲೋಹಗಳಿಗೆ ಬೆರೆಸಿ ಮಿಶ್ರಲೋಹವನ್ನು ತಯಾರಿಸುವುದು, ತವರ, ಸತುವು- ಈ ಒಂದೊಂದು ಲೋಹವನ್ನು ಕುರಿತು ಪ್ರಾಚೀನರು ಪಡೆದಿದ್ದ ಜ್ಞಾನ ಬೆರಗುಹುಟ್ಟಿಸುತ್ತದೆ.

ಈ ಕೃತಿಯಲ್ಲಿ ಇನ್ನೊಂದು ವಿಶೇಷವಿದೆ. ವೇದ ಸಾಹಿತ್ಯದಲ್ಲಿ ಬರುವ ಕಬ್ಬಿಣಕ್ಕೆ ಸಂಬಂಧಿಸಿದ ಶಬ್ದಗಳ ಸಂಕ್ಷಿಪ್ತ ಕೋಶವನ್ನು ಕೊಟ್ಟಿದೆ. ಹಾಗೆಯೇ ಲೋಹ ತಂತ್ರಜ್ಞಾನ ನಡೆದು ಬಂದ ದಾರಿಯ ಬಗ್ಗೆ ಅತ್ಯಂತ ಉಪಯುಕ್ತ ಮಾಹಿತಿಯೂ ಇದೆ. ಲೋಹ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಪ್ರಚಲಿತವಿದ್ದ ಪ್ರಾಚೀನ ಗ್ರಂಥಗಳ ಉಲ್ಲೇಖವೂ ಈ ಕೃತಿಯಲ್ಲಿ ಲಭ್ಯ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books