ಸಹಜ ಜೈವಿಕ ಕ್ರಿಯೆ ಋತುಚಕ್ರ

Author : ಸಿ. ಅನ್ನಪೂರ್ಣಮ್ಮ

Pages 56

₹ 15.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌, ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001

Synopsys

ಸಹಜ ಜೈವಿಕ ಕ್ರಿಯೆ ಋತುಚಕ್ರ ಆರೋಗ್ಯ ಬರಹದ ಪುಸ್ತಕವನ್ನು ಲೇಖಕಿ ಸಿ. ಅನ್ನಪೂರ್ಣಮ್ಮ ರಚಿಸಿದ್ದಾರೆ. ಈ ಪುಸ್ತಕದಲ್ಲಿ ನಮ್ಮಲ್ಲಿ ರೋಗದಿಂದ ನರಳುವವರಿಗಿಂತ ರೋಗವಿದೆ ಎನ್ನುವ ಭ್ರಮೆಯಿಂದ ನರಳುವವರೇ ಹೆಚ್ಚು. ಈ ಮಾತು ‘ಮಾಸಿಕ ಮುಟ್ಟಿ’ನ ವಿಚಾರದಲ್ಲಿ ಹೆಚ್ಚು ಅನ್ವಯವಾಗುತ್ತದೆ. ಋತುಕ್ರಿಯೆಯು ಸ್ತ್ರೀ ಶರೀರದ ಸಹಜ ಜೈವಿಕ ಕ್ರಿಯೆ. ಇದರ ಬಗ್ಗೆ ಇರುವ ಅಜ್ಞಾನ, ತಪ್ಪು ಕಲ್ಪನೆ ಅಗಾಧ. ಋತುಚಕ್ರದ ಬಗೆಗೆ ಕುತೂಹಲ, ತಪ್ಪು ಗ್ರಹಿಕೆಗಳು ಸಹಜವಾದರೂ ಇದನ್ನು ತನ್ನ ‘ಮುಟ್ಟಿನ ಬಗೆಗೆ ಇರುವ ಮೂಢನಂಬಿಕೆಯಿಂದ ತತ್ತರಿಸುತ್ತಿರುವವರ ತಳಮಳ, ಅಜ್ಞಾನ, ಭಯ ಇವುಗಳನ್ನು ಹೊಡೆದೋಡಿಸಿ ಅವರಿಗೆ ವೈಜ್ಞಾನಿಕ ಅರಿವನ್ನು ಮೂಡಿಸುವ ದಿಶೆಯಲ್ಲಿ ಈ ಪುಸ್ತಕ ಒಂದು ಪ್ರಾಮಾಣಿಕ ಪ್ರಯತ್ನ, ಗಹನವಾದ ವಿಚಾರಗಳನ್ನು ಇಲ್ಲಿ ಸರಳೀಕರಿಸಿ ವಿಶದಪಡಿಸಲು ಪ್ರಯತ್ನಿಸಲಾಗಿದೆ. ಈ ದಿಶೆಯಲ್ಲಿ ಈ ಕೃತಿಯು ವೈದ್ಯರಿಗೂ, ದಾದಿಯರಿಗೂ ಮತ್ತು ನಮ್ಮ ಸಮಾಜದ ಸೋದರಿಯರಿಗೂ ಮಾರ್ಗದರ್ಶಿಯಾಗಬಲ್ಲದೆಂಬ ನಂಬಿಕೆ ನಮ್ಮದು ಎಂದು ಪುಸ್ತಕದ ಕರಿತಾಗಿ ವಿವರಿಸಲಾಗಿದೆ.

About the Author

ಸಿ. ಅನ್ನಪೂರ್ಣಮ್ಮ
(07 July 1928)

ವೈದ್ಯಕೀಯ ವಿಜ್ಞಾನ ಬರಹಗಾರ್ತಿ ಅನ್ನಪೂರ್ಣಮ್ಮ ಅವರು 1928 ರ ಜುಲೈ 17 ರಂದು ಜನಿಸಿದರು. ತಂದೆ ಚನ್ನಕೇಶವ ಶಾಸ್ತ್ರಿ, ತಾಯಿ ಮೀನಾಕ್ಷಮ್ಮ. ಎಂ.ಬಿ.ಬಿ.ಎಸ್ ಶಿಕ್ಷಣ ಪೂರೈಸಿದ ನಂತರ ನಾಗಪುರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎಸ್.) ಪದವಿ ಪಡೆದರು. ನಂತರ ಪ್ರತಿಷ್ಠಿತ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ಆನಂತರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ತಮಿಳುನಾಡಿನಲ್ಲಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ’ಹದಿಹರೆಯದ ಹೆಣ್ಣು, ಹೊಸ ಜೀವದ ಹುಟ್ಟು, ಋತುಚಕ್ರ, ಶಿಶುಪ್ರಾಪ್ತಿಗೆ ವಿನೂತನ ವಿಧಾನಗಳು, ಶಿಶು ನಿರೀಕ್ಷೆಯಲ್ಲಿ ಸ್ತ್ರೀರಕ್ಷೆ, ವೈದ್ಯರೊಂದಿಗೆ ಮಾತುಕತೆ 1 ಹಾಗೂ 2 ಸಂಪುಟ, ಪ್ರೌಢ ಮಹಿಳೆ, ಮಗು-ಒಂದು ಅದ್ಭುತಸೃಷ್ಟಿ, ತಾಯಿಲೋಕ, ಸ್ತನ್ಯಪಾನದ ಶ್ರೇಷ್ಠತೆ, ...

READ MORE

Related Books