ಶಿಶುಪ್ರಾಪ್ತಿಗೆ ವಿನೂತನ ವಿಧಾನಗಳು

Author : ಸಿ. ಅನ್ನಪೂರ್ಣಮ್ಮ

Pages 80

₹ 27.00




Year of Publication: 2007
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌, ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001.

Synopsys

ಶಿಶುಪ್ರಾಪ್ತಿಗೆ ವಿನೂತನ ವಿಧಾನಗಳು ಲೇಖನ ಬರಹದ ಪುಸ್ತಕವನ್ನು ಲೇಖಕಿ ಸಿ. ಅನ್ನಪೂರ್ಣಮ್ಮ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಡಾ|| ಸಿ. ಅನ್ನಪೂರ್ಣಮ್ಮನವರು ಬರೆದ "ಶಿಶುಪ್ರಾಪ್ತಿಗೆ ವಿನೂತನ ವಿಧಾನಗಳು" ಎಂಬ ಈ ಕಿರು ಹೊತ್ತಿಗೆ ಕನ್ನಡ ವೈದ್ಯವಿಜ್ಞಾನ ಬರವಣಿಗೆಗಳಲ್ಲೇ ಅಪೂರ್ವವಾದುದು. ಕೃತಕವಾಗಿ ಮಕ್ಕಳನ್ನು ಪಡೆಯುವ ಹಲವಾರು ವೈದ್ಯಕೀಯ ವಿಧಾನಗಳು ವಿಶ್ವಾದ್ಯಂತ ಬಳಕೆಯಲ್ಲಿದ್ದರೂ ಅವುಗಳ ಬಗ್ಗೆ ನಿಖರ ಹಾಗೂ ವಿಸ್ತೃತವಾದ ಮಾಹಿತಿ ಕನ್ನಡ ಓದುಗರಿಗೆ ಇಷ್ಟರವರೆಗೆ ಲಭ್ಯವಿರಲಿಲ್ಲ. ಪ್ರಸ್ತುತ ಕೃತಿಯಿಂದಾಗಿ ಆ ಕೊರತೆ ನೀಗಿದೆ ಎಂದು ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಸಿ. ಅನ್ನಪೂರ್ಣಮ್ಮ
(07 July 1928)

ವೈದ್ಯಕೀಯ ವಿಜ್ಞಾನ ಬರಹಗಾರ್ತಿ ಅನ್ನಪೂರ್ಣಮ್ಮ ಅವರು 1928 ರ ಜುಲೈ 17 ರಂದು ಜನಿಸಿದರು. ತಂದೆ ಚನ್ನಕೇಶವ ಶಾಸ್ತ್ರಿ, ತಾಯಿ ಮೀನಾಕ್ಷಮ್ಮ. ಎಂ.ಬಿ.ಬಿ.ಎಸ್ ಶಿಕ್ಷಣ ಪೂರೈಸಿದ ನಂತರ ನಾಗಪುರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎಸ್.) ಪದವಿ ಪಡೆದರು. ನಂತರ ಪ್ರತಿಷ್ಠಿತ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ಆನಂತರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ತಮಿಳುನಾಡಿನಲ್ಲಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ’ಹದಿಹರೆಯದ ಹೆಣ್ಣು, ಹೊಸ ಜೀವದ ಹುಟ್ಟು, ಋತುಚಕ್ರ, ಶಿಶುಪ್ರಾಪ್ತಿಗೆ ವಿನೂತನ ವಿಧಾನಗಳು, ಶಿಶು ನಿರೀಕ್ಷೆಯಲ್ಲಿ ಸ್ತ್ರೀರಕ್ಷೆ, ವೈದ್ಯರೊಂದಿಗೆ ಮಾತುಕತೆ 1 ಹಾಗೂ 2 ಸಂಪುಟ, ಪ್ರೌಢ ಮಹಿಳೆ, ಮಗು-ಒಂದು ಅದ್ಭುತಸೃಷ್ಟಿ, ತಾಯಿಲೋಕ, ಸ್ತನ್ಯಪಾನದ ಶ್ರೇಷ್ಠತೆ, ...

READ MORE

Related Books