ಷಟ್ಕರ್ಮವಿಧಿ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 70

₹ 205.00




Year of Publication: 2009
Published by: ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531, ಹೊಳಲ್ಕೆರೆ ತಾಲ್ಲೂಕು

Synopsys

‘ಷಟ್ಕರ್ಮವಿಧಿ’ ಯೋಗ ಸಾಧಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಯವರ ಕೃತಿ. ಈ ಕೃತಿಯಲ್ಲಿ ಯೋಗದ ಪ್ರಾಚೀನತೆಯ ಜೊತೆಗೆ ಅದರ ಮಹತ್ವವನ್ನು ವಿವರಿಸುತ್ತಾ ಯೋಗದ ರೀತಿ ರಿವಾಜುಗಳನ್ನು ವಿಶ್ಲೇಷಿಸಿದ್ದಾರೆ. ನಾವು ನೂರು ವರ್ಷ ನೋಡುತ್ತೇವೆ: ನಾವು ನೂರು ವರ್ಷ ಜೀವಿಸುತ್ತೇವೆ. ನಾವು ನೂರು ವರ್ಷ ಕೇಳುತ್ತೇವೆ, ನಾವು ನೂರು ವರ್ಷ ಮಾತನಾಡುತ್ತೇವೆ, ನಾವು ನೂರು ವರ್ಷ ಸುಖಿಗಳಾಗಿಯೂ ಸ್ವಾವಲಂಬಿಗಳಾಗಿಯೂ ಜೀವನಸುಖವನ್ನನುಭವಿಸುತ್ತೇವೆ. ಇದು ವೇದವಾಣಿ, ನಮ್ಮ ಪ್ರಾಚೀನ ಋಷಿಮುನಿಗಳ ಅಮೃತವಾಣಿ, ಈ ಕೆಚ್ಚಿನ ಅಂತರ್ವಾಣಿಗೆ ಅವರು ತಮ್ಮ ನಿತ್ಯ ಜೀವನದಲ್ಲಿ ಅನುಷ್ಠಾನದಲ್ಲಿಟ್ಟುಕೊಂಡಿದ್ದ ಯೋಗಸಾಧನೆ, ಸದಾಚಾರ, ನಿತ್ಯ ನಿಯಮಗಳೇ ಕಾರಣ, ಆದರೆ ಇಂದು ನಮ್ಮ ಸ್ಥಿತಿ ಏನಾಗಿದೆ. ಮೂವತ್ತು ವರ್ಷ ಕಳೆದು ಮೂವತ್ತೊಂದಕ್ಕೆ ಕಾಲಿಡುವ ಮೊದಲೇ ಇನ್ನೇನು ನಮ್ಮ ಕಥೆಯೆಲ್ಲಾ ಮುಗಿದುಹೋಯಿತು ಎಂಬ ಉದ್ಗಾರವು ನಮ್ಮ ಆಧುನಿಕ ಯುವಕ-ಯುವತಿಯರ ಮುಖದಿಂದ ಹೊರಡುತ್ತದೆ. ಇದೇಕೆ ಇದಕ್ಕೆ ನಾವಿಂದು ನಿತ್ಯ ಜೀವನದಲ್ಲಿ ಅನುಸರಿಸಿಕೊಂಡು ಬರುತ್ತಿರುವ ಆಚಾರವಿಚಾರ, ಆಹಾರ ವಿಹಾರ, ನಡೆ ನುಡಿಗಳೇ ಕಾರಣ. ಇದೆಂತಹ ವಿಪರ್ಯಾಸ ಎನ್ನುತ್ತಾರೆ ರಾಘವೇಂದ್ರ ಸ್ವಾಮಿಗಳು. ಈ ಮಾತುಗಳೊಂದಿಗೆ ಎಚ್ಚರಿಕೆಯೊಂದಿಗೆ ಆರೋಗ್ಯಕ್ಕಾಗಿ ನಾವು ಮಾಡಬಹುದಾದ ಹಲವು ಯೋಗಾಸನಗಳನ್ನು ಪರಿಚಯಿಸಿದ್ದಾರೆ.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books