ಮಾನವ ಸಂಬಂಧಗಳ ಒಂದೊಳ್ಳೆಯ ಪ್ರಸ್ತುತಿ `ಇಷ್ಟುಕಾಲ ಒಟ್ಟಿಗಿದ್ದು'


"ಪ್ರಕೃತಿಯ ಅಂಶಗಳಿಂದ ಮಾಡಿದ ದೇಹದಲ್ಲಿ ಇರುವ ಜೀವಕೋಶಗಳು ಎರಡು ಮೂರು ತಿಂಗಳಿಗೊಮ್ಮೆ ಸಾಯುತ್ತಿರುತ್ತವೆ. ಅವುಗಳ ಜಾಗದಲ್ಲಿ ಹೊಸ ಜೀವಕೋಶಗಳು ಹುಟ್ಟುತ್ತವೆ. ಇದು ನಿರಂತರ ಪ್ರಕ್ರಿಯೆ. ನಮ್ಮ ಕಥೆಗಳೂ ಹಾಗೆಯೇ..," ಎನ್ನುತ್ತಾರೆ ಮಹೇಶ ಅರಬಳ್ಳಿ. ಅವರು ಎನ್. ಸಂಧ್ಯಾರಾಣಿ ಅವರ ‘ಇಷ್ಟುಕಾಲ ಒಟ್ಟಿಗಿದ್ದು’ ಕೃತಿ ಕುರಿತು ಬರೆದ ವಿಮರ್ಶೆ.

ಕಥೆಯಲ್ಲಿ ಬದುಕು, ಬದುಕಲ್ಲಿ ಕಥೆ, ಬದುಕೇ ಕಥೆ, ಕಥೆಯೇ ಬದುಕು, ಮುಗಿಯದ ಕಥೆ, ಮುಗಿಸಲಾಗದ ಕಥೆ - ಹೀಗೆ ಏನು ಹೇಳಿದರೂ ಸರಿಯೆನ್ನಿಸುವ ಕಥನವೇ ಎನ್. ಸಂಧ್ಯಾರಾಣಿಯವರ ಕಾದಂಬರಿ “ಇಷ್ಟುಕಾಲ ಒಟ್ಟಿಗಿದ್ದು…”

ಪ್ರಕೃತಿಯ ಅಂಶಗಳಿಂದ ಮಾಡಿದ ದೇಹದಲ್ಲಿ ಇರುವ ಜೀವಕೋಶಗಳು ಎರಡು ಮೂರು ತಿಂಗಳಿಗೊಮ್ಮೆ ಸಾಯುತ್ತಿರುತ್ತವೆ. ಅವುಗಳ ಜಾಗದಲ್ಲಿ ಹೊಸ ಜೀವಕೋಶಗಳು ಹುಟ್ಟುತ್ತವೆ. ಇದು ನಿರಂತರ ಪ್ರಕ್ರಿಯೆ. ನಮ್ಮ ಕಥೆಗಳೂ ಹಾಗೆಯೇ…

ನಾವಂದುಕೊಳ್ಳುವ ಜೀವನ ಕೇವಲ ನಮ್ಮದಲ್ಲವಲ್ಲ. ಮೇಲ್ನೋಟಕ್ಕೆ ಅದೊಂದು ಪ್ರತಿಕ್ರಿಯೆ. ಬದುಕಿನ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ. ಅನೇಕ ಪಾತ್ರಧಾರಿಗಳು, ಒಂದಿಬ್ಬರು ಸೂತ್ರಧಾರಿಗಳು, ಸೂಜಿದಾರದಿಂದ ಹೊಲಿದ ಸಂಬಂಧಗಳು. ಬಟ್ಟೆ ಹರಿದರೂ ಹೊಲಿಗೆ ಉಳಿಸುವ ದಾರದೆಳೆಗಳು.

ಪ್ರಮುಖರಾದವರು ಇಷ್ಟು ಕಾಲ ಒಟ್ಟಿಗಿದ್ದು ಈಗ ವಿಮುಖರಾದಾಗ ಉಳಿದ ಅದೇ ದಾರದೆಳೆಯಲ್ಲಿ ಮತ್ತೊಂದು ಕುಲಾವಿ ಹೊಲಿದುಕೊಳ್ಳಬೇಕು. ನಾವೇ ಮಕ್ಕಳಾಗಿ ಬೆಚ್ಚಗೆ ಧರಿಸಬೇಕು. ಬಿಡಲಾಗದ್ದನ್ನು ಕಳಚಿಕೊಳ್ಳಲಾಗುವುದಿಲ್ಲ. ಬಿಟ್ಟ ನಂತರ ಕಟ್ಟಿಕೊಂಡದ್ದೇ ಸುಳ್ಳು ಅನಿಸುತ್ತದೆ. ಒಮ್ಮೆಯಾದರೂ… ಬಿಡಬೇಕಾದಾಗ ಬಿಟ್ಟು ಮುಂದೆ ಹೋಗಬೇಕು. ತಿರುಗಿ ನೋಡಿದರೂ ಪರವಾಗಿಲ್ಲ. ನೋಡುವ ನೋಟ ಬದಲಾಗಿದ್ದರೆ ಚಿಂತೆಯಿಲ್ಲ.

ನಾವಂದುಕೊಳ್ಳುವ ಜೀವನ ಕೇವಲ ನಮ್ಮದಲ್ಲ. ಅದು ನಮ್ಮ ಸುತ್ತಮುತ್ತಲಿನವರ ಬದುಕಿನ ಸಣ್ಣ ಸಣ್ಣ ಅಂಶಗಳ ಮೊತ್ತ. ಅವರ ಬದುಕಿಗೂ ನಾವು ಒಂದು ಅಂಶ. ಅವರು ಬೇಡವೆಂದರೂ…

ಮಾನವ ಸಂಬಂಧಗಳ ಒಂದೊಳ್ಳೆಯ ಪ್ರಸ್ತುತಿ “ಇಷ್ಟುಕಾಲ ಒಟ್ಟಿಗಿದ್ದು…” ಕಾದಂಬರಿ.

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...