ಇಷ್ಟುಕಾಲ ಒಟ್ಟಿಗಿದ್ದು...

Author : ಸಂಧ್ಯಾರಾಣಿ

Pages 200

₹ 250.00
Year of Publication: 2022
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

ಲೇಖಕಿ ಸಂಧ್ಯಾರಾಣಿ ಅವರ ಕಾದಂಬರಿ ಇಷ್ಟುಕಾಲ ಒಟ್ಟಿಗಿದ್ದು...ಕಥೆಯ ಹಿನ್ನೆಲೆ ತಲೆತಲಾಂತರಗಳ ಹೆಣ್ಣುಜೀವಗಳ ಬದುಕು. ಅದು ಬಾಯಿಮಾತಿನ ಕಥೆ, ಪುರಾಣ ಅಥವಾ ಅಜ್ಜಿಯಿಂದ ಮೊಮ್ಮಗಳಿಗೆ ಹರಿದು ಬಂದ ನೆನಪು. ಕಥೆಯ ಆವರಣ ಇರುವುದು ಇಂದಿನ ದಿನಮಾನದಲ್ಲಿ. ಬೆಂಗಳೂರಿನ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ನಾಲ್ಕು ಜನ ಸ್ನೇಹಿತರ – ಗೌರಿ, ಇನಾಯ, ಅರುಂಧತಿ ಮತ್ತು ರಾಮಚಂದ್ರ – ಬದುಕು, ಬವಣೆ, ಬದಲಾವಣೆ ಕಾದಂಬರಿಯ ವಸ್ತು. ಅಷ್ಟೇ ಪ್ರಧಾನವಾಗಿರುವುದು ಅವರಲ್ಲಿ ಒಬ್ಬಳ ತಾಯಿಯ ಕಥೆ. ಅವಳೇ ಸರೋಜಿನಿ, ಭೂತ ಮತ್ತು ವರ್ತಮಾನಕ್ಕೆ ಕೊಂಡಿಯಾದವಳು.

ಕೃತಿಯಲ್ಲಿ ಲೇಖಕಿಯೇ ಹೇಳಿರುವಂತೆ, ಇಲ್ಲಿನ ಪಾತ್ರಗಳು ಮತ್ತು ನಾನು ಹಲವಾರು ದಿನ-ರಾತ್ರಿ ಸಹಬಾಳ್ವೆಯನ್ನು ನಡೆಸಿದ್ದೇವೆ, ಕಾದಂಬರಿಯ ಒಳಗೂ ಮತ್ತು ಹೊರಗೂ. ಹಾಗಾಗಿಯೇ ನನ್ನ ಮತ್ತು ಕಾದಂಬರಿಯ ಲೋಕದ ನಡುವಿನ ಗೆರೆ ಕೆಲವು ಕಡೆ ತೆಳುವಾಗಿದೆ, ಕೆಲವು ಕಡೆ ಅಳಿಸಿಯೇಹೋಗಿದೆ. ಇದನ್ನು ನಾನು ಕಾದಂಬರಿಯಲ್ಲೂ ಹಾಗೆಯೇ ಉಳಿಸಿಕೊಂಡಿದ್ದೇನೆ. ಒಂದು ರೀತಿಯಲ್ಲಿ ಇದು ಈ ಪಾತ್ರಗಳ ಪಯಣವೂ ಹೌದು, ಬರೆಯುವವಳಾಗಿ ನನ್ನ ಪಯಣವೂ ಹೌದು ಎಂದಿದ್ದಾರೆ.

About the Author

ಸಂಧ್ಯಾರಾಣಿ

ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಚಿನ್ನದ ಗಣಿ ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲವು ಇ-ಪತ್ರಿಕೆಗಳ ಅಂಕಣಕಾರ್ತಿಯಾಗಿರುವ ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಯಾಕೆ ಕಾಡುತಿದೆ ಸುಮ್ಮನೆ(ಅಂಕಣ ಬರಹಗಳು), ತುಂಬೆ ಹೂ (ಜೀವನ ಚರಿತ್ರೆ), ಪೂರ್ವಿ ಕಲ್ಯಾಣಿ  (ನಾಟಕ) ಮುಂತಾದವು. ರಾಷ್ಟ್ರ ಪ್ರಶಸ್ತಿ ವಿಜೇತ ನಾತೀಚರಾಮಿ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದರು. ...

READ MORE

Related Books