ವೈವಿಧ್ಯಮಯ ಬರಹಗಳ ಸಂಗಮ 'ಲೇಖನ ವಿಹಾರ'


"ಅವಶ್ಯಕತೆ ಅರಿತು ಬರುವವನೇ ನಿಜವಾದ ಸ್ನೇಹಿತ, ಸ್ನೇಹ ಅತಿಮಧುರ ಗೆಳೆತನ ಸುಮಧುರ ಬಂಧನ, ಹೆದರಿಕೆಗೆ ಹೆದರಿಕೆ ಹುಟ್ಟಿಸುವಷ್ಟು ಧೈರ್ಯ ಬೆಳೆಸಿಕೊಳ್ಳಬೇಕು, ಸಾಧನೆಯ ಹಾದಿಯಲ್ಲಿ ನಿಮಗೆ ನೀವೇ ಪ್ರೇರಣೆ, ನಂಬಿಕೆ ಪರ್ವತವನ್ನು ಕದಲಿಸಬಲ್ಲದು, ಆತ್ಮವಿಶ್ವಾಸ ಯಶಸ್ಸಿನ ಮೆಟ್ಟಿಲು, ಗುರಿ ತಲುಪಲು ಬದ್ಧತೆ ಮುಖ್ಯ, ಮಾನವ ಜೀವನವೇ ಸವಾಲು ಇವು ವ್ಯಕ್ತಿತ್ವ ವಿಕಸನ ಕುರಿತ ಲೇಖನಗಳು," ಎನ್ನುತ್ತಾರೆ ಅಂಶಿ ಪ್ರಸನ್ನಕುಮಾರ್. ಅವರು ಮೊಹಮ್ಮದ್ ಅಜರುದ್ದೀನ್ ಅವರ ‘ಲೇಖನ ವಿಹಾರ’ ಕೃತಿ ಕುರಿತು ಬರೆದ ವಿಮರ್ಶೆ.

ಮೊಹಮ್ಮದ್ ಅಜರುದ್ದೀನ್ ಅವರ ಲೇಖನ ವಿಹಾರ ಕೃತಿಯು ವೈವಿಧ್ಯಮಯ ಬರಹಗಳ ಸಂಗಮವಾಗಿದೆ.

ವ್ಯಕ್ತಿತ್ವ ವಿಕಸನ, ವ್ಯಕ್ತಿ ಚಿತ್ರಣ, ಸ್ಥಳ ಪರಿಚಯ, ಜಾನಪದ ಕಲೆ, ಹಬ್ಬಹರಿದಿನಗಳು, ಮಕ್ಕಳ ದಿನಾಚರಣೆ, ರಂಗಭೂಮಿ ಹಾಗೂ ಪರಿಸರ ಹೀಗೆ ವಿವಿಧ ವಿಷಯಗಳನ್ನು ಕುರಿತ 28 ಲೇಖನಗಳು ಇಲ್ಲಿವೆ.

ಅವಶ್ಯಕತೆ ಅರಿತು ಬರುವವನೇ ನಿಜವಾದ ಸ್ನೇಹಿತ, ಸ್ನೇಹ ಅತಿಮಧುರ ಗೆಳೆತನ ಸುಮಧುರ ಬಂಧನ, ಹೆದರಿಕೆಗೆ ಹೆದರಿಕೆ ಹುಟ್ಟಿಸುವಷ್ಟು ಧೈರ್ಯ ಬೆಳೆಸಿಕೊಳ್ಳಬೇಕು, ಸಾಧನೆಯ ಹಾದಿಯಲ್ಲಿ ನಿಮಗೆ ನೀವೇ ಪ್ರೇರಣೆ, ನಂಬಿಕೆ ಪರ್ವತವನ್ನು ಕದಲಿಸಬಲ್ಲದು, ಆತ್ಮವಿಶ್ವಾಸ ಯಶಸ್ಸಿನ ಮೆಟ್ಟಿಲು, ಗುರಿ ತಲುಪಲು ಬದ್ಧತೆ ಮುಖ್ಯ, ಮಾನವ ಜೀವನವೇ ಸವಾಲು ಇವು ವ್ಯಕ್ತಿತ್ವ ವಿಕಸನ ಕುರಿತ ಲೇಖನಗಳು.

ಮನರಂಜನೆ ಜೊತೆಗೆ ಸಾಮಾಜಿಕ ಸಂದೇಶ ಸಾರುವ ರಂಗಭೂಮಿ, ನೇಪಥ್ಯಕ್ಕೆ ಸರಿಯುತ್ತಿರುವ ತೊಗಲುಗೊಂಬೆಯಾಟ, ಜಾನಪದ ಸಂಪತ್ತು ಮೂಡಲಪಾಯ ಯಕ್ಷಗಾನ, ಕಣ್ಮರೆಯತ್ತ ಸೂತ್ರದ ಗೊಂಬೆಯಾಟ ಇವು ಕಲೆಗೆ ಸಂಬಂಧಿಸಿದವು.

ಇದಲ್ಲದೇ ಸರ್ ಎಂ. ವಿಶ್ವೇಶ್ವರಯ್ಯ, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಸಾಹಿತಿಗಳಾದ ಎ.ಎನ್‌. ಮೂರ್ತಿರಾವ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಸಿದ್ದಲಿಂಗಯ್ಯ, ನವಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್, ರೆಬೆಲ್ ಸ್ಟಾರ್ ಅಂಬರೀಶ್ ಅವರ ವ್ಯಕ್ತಿಚಿತ್ರಣವಿದೆ.

ರಕ್ಷಾ ಬಂಧನ, ಗಣೇಶ ಚತುರ್ಥಿ, ಮಕ್ಕಳ ದಿನ, ಪರಿಸರ ದಿನ ಕುರಿತ ಲೇಖನಗಳು, ಹೊಸಹೊಳಲು ಲಕ್ಷ್ಮೀನಾರಾಯಣ ದೇವಾಲಯ, ಗೋವಿಂದನಹಳ್ಳಿದೇವಾಲಯಗಳು, ಮಿರ್ಲೆ ಗ್ರಾಮದ ಇತಿಹಾಸ, ಚುಂಚನಕಟ್ಟೆ ಜಲಪಾತ ಕುರಿತ ಸ್ಥಳ ಪರಿಚಯ ಕೂಡ ಇದೆ. ಮೈಸೂರಿನ ಸೊಡರು ಪ್ರಕಾಶನ ಪ್ರಕಟಿಸಿದ್ದು, ಹೊಳಲು ಶ್ರೀಧರ ಅವರ ಮುನ್ನುಡಿ, ಎಚ್.ಆರ್. ಪೂರ್ಣಚಂದ್ರ ತೇಜಸ್ವಿ ಅವರ ಬೆನ್ನುಡಿ ಇದೆ.

- ಅಂಶಿ ಪ್ರಸನ್ನಕುಮಾರ್
ಕನ್ನಡಪ್ರಭ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರು
ಮೈಸೂರು

MORE FEATURES

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...