ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ

Date: 06-07-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಕೊಲಂಬಿಯಾ ಮೂಲದ ಕಂಟೆಂಪೊರರಿ ಆರ್ಟ್ ಕಲಾವಿದೆ ಡೋರಿಸ್ ಸಾಲ್ಸೆದೊ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಡೋರಿಸ್ ಸಾಲ್ಸೆದೊ (Doris Salcedo)
ಜನನ: 1958
ಶಿಕ್ಷಣ: ಬಗೋಟಾ ಯೂನಿವರ್ಸಿಟಿ, ಕೊಲಂಬಿಯಾ; ನ್ಯೂಯಾರ್ಕ್ ಯೂನಿವರ್ಸಿಟಿ, ನ್ಯೂಯಾರ್ಕ್
ವಾಸ: ಬಗೋಟಾ, ಕೊಲಂಬಿಯಾ
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಕಾನ್ಸೆಪ್ಚುವಲ್ ಆರ್ಟ್, ಇನ್ಸ್ಟಾಲೇಷನ್ಸ್

ಡೊರಿಸ್ ಸಾಲ್ಸೆದೊ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಲಂಡನ್ನಿನ ಟೇಟ್ ಗ್ಯಾಲರಿಗೆ ಸೇರಿದ ಟರ್ಬೈನ್ ಹಾಲ್‌ನ ನೆಲದ ಉದ್ದಕ್ಕೂ ಅಗೆದು ಬಿರುಕು ಮೂಡಿಸಿದ್ದರವರು. ಒಂದೆಡೆ ಸಣ್ಣ ಗೀರಿನಿಂದ ಆರಂಭವಾಗುವ ಈ ಬಿರುಕು ಹಾಲಿನ ಇನ್ನೊಂದು ತುದಿಯಲ್ಲಿ (ಒಟ್ಟು ಬಿರುಕಿನ ಉದ್ದ 548ಅಡಿ) ದೊಡ್ಡ ತೆರವೇ ಆಗಿತ್ತು! ಶಾಶ್ವತವಾದ ಗ್ಯಾಲರಿ ಕಟ್ಟಡದಲ್ಲಿ ಇಂತಹದೊಂದು ಕೃತಿಯ ಮೂಲಕ ವೀಕ್ಷಕರನ್ನು ದಂಗುಬಡಿಸಿದ್ದ ಡೋರಿಸ್ ಪೋಸ್ಟ್ ಕೊಲೋನಿಯಲ್ ಸಾಂಸ್ಕೃತಿಕ ಬಿರುಕುಗಳನ್ನು ತೆರೆದು ತೋರಿಸಿದ್ದಲ್ಲದೇ ಆಧುನಿಕತೆಯ ಚರಿತ್ರೆಯ ಜೊತೆಜೊತೆಗೇ ಜನಾಂಗೀಯ ತಾರತಮ್ಯದ ಚರಿತ್ರೆಕೂಡಾ ಸಾಗಿಬಂದಿದೆ, ಆದರೆ ಅದು ಹೇಳದೆ ಕತ್ತಲಿನಲ್ಲಿರಿಸಿರುವ ಕಥೆ ಅಷ್ಟೇ ಎಂದು ಹೇಳಿದ್ದರು. ಅವರ ಈ Shibboleth (2007) ಕಲಾಕೃತಿ ಇಂದು ಜಗತ್ಪ್ರಸಿದ್ಧ.

ಮನುಕುಲದ ಚರಿತ್ರೆಯಲ್ಲಿ ಕತ್ತಲೆಯಲ್ಲಿ ಉಳಿದಿರುವ ದುಃಖ, ಆಕ್ರಂದನಗಳಿಗೆ ಬಾಯಿ ಕೊಡುವ ಡೋರಿಸ್ ಇದನ್ನೆಲ್ಲ ಸ್ವತಃ ಅನುಭವಿಸಿದವರು. ಕೊಲಂಬಿಯಾದ ರಕ್ತರಂಜಿತ ಅಂತಃಕಲಹಕ್ಕೆ ಸಾಕ್ಷಿಯಾದವರು. ಅದೂ ಅಂತಿಂತಹ ಅಂತಃಕಲಹ ಅಲ್ಲ. AUCಯಂತಹ ಬಲಪಂಥೀಯ ಅರೆಸೈನಿಕಪಡೆ-Farc ಎಂಬ ಎಡಪಂಥೀಯ ತೀವ್ರಗಾಮಿಗಳು-ಸರ್ಕಾರಿ ಸೇನೆ-ಕೊಲಂಬಿಯನ್ ಮಾದಕ ದ್ರವ್ಯ ಕಾರ್ಟೆಲ್ – ಈ ನಾಲ್ಕು ಶಕ್ತಿಗಳ ನಡುವೆ 52ವರ್ಷಗಳ ಕಾಲ ನಡೆದ ಅಂತಃಕಲಹದಲ್ಲಿ 2,60,000ಜನ ತೀರಿಕೊಂಡಿದ್ದಾರೆ, ಅಸಂಖ್ಯ ಜನ ಕಾಣೆಯಾಗಿದ್ದಾರೆ, 70ಲಕ್ಷಕ್ಕೂ ಮಿಕ್ಕಿ ಜನ ವಲಸೆ ಹೋಗಿ ಸ್ಥಾನಾಂತರಗೊಂಡಿದ್ದಾರೆ. ಸ್ವತಃ ಡೋರಿಸ್ ಅವರ ಕುಟುಂಬಿಕರಲ್ಲೇ ಹಲವರು ಇದಕ್ಕೆ ತುತ್ತಾಗಿದ್ದಾರೆ. ಹಾಗಾಗಿ ಅವರ ಕಲಾಕೃತಿಗಳಲ್ಲಿರುವ ವಿಷಾದ ಗಾಢವಾದುದು.

ಈಗ ಸುಧಾರಿಸಿಕೊಳ್ಳುತ್ತಿರುವ ಕೊಲಂಬಿಯಾದಲ್ಲಿ ಈ ಕತ್ತಲ ದಿನಗಳ ಬಗ್ಗೆ ಹಲವಾರು ಕತೆಗಳಿವೆ, ಇಂತಹದೊಂದು ಯುದ್ಧ ನಡೆದಿತ್ತೆಂಬುದನ್ನೇ ನಿರಾಕರಿಸುವ ಕತೆಗಳೂ ಇವೆ. ಹಾಗಾಗಿ ತನಗೆ ಕಲಾವಿದೆಯಾಗಿ ಆ ಯುದ್ಧಕಾಲದ ಅಪರಾಧಗಳು ಮಹತ್ವದವು ಎನ್ನುತ್ತಾರವರು. ಅವರ ಇನ್ನೊಂದು ಅಂತಹದೇ ಮಹತ್ವದ ಕಲಾಕೃತಿ Farc ನಿಂದ ಸಂಗ್ರಹಿಸಿದ 37ಟನ್ ತೂಕದ ರೈಫಲ್‌ಗಳು, ಪಿಸ್ತೂಲುಗಳು, ಗ್ರನೇಡ್ ಲಾಂಚರ್‌ಗಳನ್ನು ಸರ್ಕಾರದ ಮಿಲಿಟರಿಗೆ ಸೇರಿದ ಕುಲುಮೆಯಲ್ಲಿ ಕರಗಿಸಿ, ಆ ಲೋಹವನ್ನು ನೆಲಕ್ಕೆ ಹಾಸುವ ಟೈಲ್‌ಗಳಾಗಿ ಪರಿವರ್ತಿಸಿ, ಬಗೋಟಾದ ಅಧ್ಯಕ್ಷೀಯ ಅರಮನೆಗೆ ಸಮೀಪ ಇರುವ ಗ್ಯಾಲರಿಗೆ ಹಾಸಿದ್ದು. ಈ ಇಡಿಯ ಪ್ರಕ್ರಿಯೆಗೆ ಕೆಲಸ ಮಾಡಿದವರೂ ಆ ಹಿಂಸೆಗೆ ತುತ್ತಾದವರೇ. ಆ ಕಲಾಕೃತಿಯ ಹೆಸರು Fragments (2018). ಅದನ್ನು ಡೋರಿಸ್ ಹೀಗೆ ವಿವರಿಸುತ್ತಾರೆ “This project is anti-monument. A monument is a way of forgetting something, of making it invisible, weapons and war are not something that should be celebrated.” ಇದರ ಉಳಿದ ಟೈಲ್‌ಗಳನ್ನು ಶಾಂತಿ ಸಂಧಾನ ನಡೆದ ಕ್ಯೂಬಾದಲ್ಲಿ ಮತ್ತು ವಿಶ್ವಸಂಸ್ಥೆಯ ನ್ಯೂಯಾರ್ಕ್ ಮುಖ್ಯಾಲಯದ ಹೊರಭಾಗದಲ್ಲಿ ಹಾಸಲಾಗುವುದೆಂದು ಅವರು ಹೇಳಿದ್ದರು.

ಆರಂಭದಲ್ಲಿ ಬಗೋಟಾದಲ್ಲೇ ಶಿಕ್ಷಣ ಪಡೆದ ಡೋರಿಸ್, ಬಳಿಕ ನ್ಯೂಯಾರ್ಕಿನಲ್ಲಿ ಸ್ನಾತಕ ಪದವಿ ಪಡೆದು, ಬಗೋಟಾಕ್ಕೆ ಮರಳಿ ಅಲ್ಲಿನ ವಿವಿಯಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು. ತನ್ನ 30ನೇ ವಯಸ್ಸಿನಲ್ಲಿ ಕಲಾವೃತ್ತಿ ಆರಂಭಿಸಿದ ಡೋರಿಸ್, 1985ರಲ್ಲಿ ಗೆರಿಲ್ಲಾಗಳು-ಸರ್ಕಾರದ ನಡುವೆ ಕದನದಲ್ಲಿ ಸಾವಿರಾರು ಮಂದಿಯನ್ನು ಸುಟ್ಟುಹಾಕಿದ್ದಕ್ಕೆ ಸಾಕ್ಷಿ ಆದರು. ಅದಕ್ಕೆ ಕಲಾತ್ಮಕವಾಗಿ ಡೊರಿಸ್ ಪ್ರತಿಕ್ರಿಯಿಸಿದ್ದು ಹೇಗೆಂದರೆ, ಬಗೋಟಾದ ಆಸ್ಪತ್ರೆಗಳಿಗೆ ಓಡಾಡಿ, ಅಲ್ಲಿ ಮೃತಪಟ್ಟವರ ಬೂಟುಗಳನ್ನು ಸಂಗ್ರಹಿಸಿ ತಂದು ಗೋಡೆಗಳಿಗೆ ನೇತುಹಾಕಿದ್ದು.

ಮರದ ಪೀಠೋಪಕರಣಗಳಿಗೆ ಕಾಂಕ್ರೀಟು ತುಂಬಿದ್ದು, ಕಟ್ಟಡಗಳನ್ನು ಅವುಗಳ ವಾಸಯೋಗ್ಯ ರೂಪದಿಂದ “ಅನ್‌ಹೋಮ್ಲಿ” ಮಾಡುವುದು…ಇಂತಹ ಕಲಾಕೃತಿಗಳ ಮೂಲಕ ಆಕ್ರಂದನಗಳಿಗೆ ರೂಪವನ್ನು ಕೊಡುವ ಅವರ ಪ್ರಯತ್ನಗಳನ್ನು ಕಲಾಜಗತ್ತು ಮಹತ್ವದ್ದೆಂದು ಪರಿಗಣಿಸಿದೆ. ಆಕೆ ತನ್ನ ಪ್ರತಿಯೊಂದೂ ಕಲಾಕೃತಿಗೆ ಸಾಕಷ್ಟು ಕ್ಷೇತ್ರಕಾರ್ಯ ಮಾಡುತ್ತಾರೆ. ತೊಂದರೆಗೀಡಾದ ನೂರಾರು ಮಂದಿಯನ್ನು ಸಂಪರ್ಕಿಸಿ, ಅವರ ನಷ್ಟ, ಆಘಾತಗಳನ್ನು ದೊಡ್ಡ ಗಾತ್ರದ ಸ್ಥಳ ನಿರ್ದಿಷ್ಟ ಇನ್ಸ್ಟಾಲೇಷನ್‌ಗಳ ಮೂಲಕ ವ್ಯಕ್ತಪಡಿಸುವುದು ಸ್ಥೂಲವಾಗಿ ಅವರ ವಿಧಾನ. 1999ರಲ್ಲಿ ಕೊಲಂಬಿಯನ್ ಪತ್ರಕರ್ತ ಜೈಮ್ ಗಾರ್ಜನ್ ಅವರ ಹತ್ಯೆಗೆ ಪ್ರತಿಕ್ರಿಯೆಯಾಗಿ, ಗಾರ್ಜನ್ ವಾಸಿಸುತ್ತಿದ್ದ ಊರಿನ ಗೋಡೆಗಳ ಮೇಲೆ ಹಲವು ಕಲಾವಿದರ ಸಹಕಾರದಿಂದ ಕವುಚಿ ಬಿದ್ದ ಗುಲಾಬಿಯ ಅಚ್ಚುಗಳನ್ನು ಮೂಡಿಸಿದ್ದು ಅವರ ಮೊದಲ ಸಾರ್ವಜನಿಕ ಹಸ್ತಕ್ಷೇಪ ಕಲಾಕೃತಿ. 2016ರಲ್ಲಿ ಕೊಲಂಬಿಯಾದ ಜನತೆ ಶಾಂತಿ ಒಪ್ಪಂದದ ವಿರುದ್ಧ ಮತ ಚಲಾಯಿಸಿದಾಗ, ಆಕೆ 2000 ಬಿಳಿ ಬಟ್ಟೆಗಳಲ್ಲಿ ಗಲಭೆಗೆ ಬಲಿಯಾದವರ ಹೆಸರುಗಳನ್ನು ಬೂದಿಯಿಂದ ಬರೆಸಿ, ಬಗೊಟಾದ ಬೊಲಿವರ್ ಸರ್ಕಲ್‌ಅನ್ನು ಅದರಿಂದ ಮುಚ್ಚಿದ್ದರು.

ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಉಂಟಾಗುವ ಆಘಾತಗಳು ಮತ್ತು ಅದರ ನೆನಪನ್ನು ಸೆರೆಹಿಡಿದು, ಅದಕ್ಕೊಂದು ಜಾಗತಿಕ ಭಾಷೆಯನ್ನೂ-ಧ್ವನಿಯನ್ನೂ ದಿನಬಳಕೆಯ ವಸ್ತುಗಳ ಮೂಲಕವೇ ಒದಗಿಸಿರುವುದು ಅವರ ಕಲಾಕೃತಿಗಳ ಹೆಚ್ಚುಗಾರಿಕೆ.

ಡೊರಿಸ್ ಸಾಲ್ಸೆದೊ ಅವರ ಇತ್ತೀಚೆಗಿನ ಝೂಮ್ ಮೀಟಿಂಗ್ ಉಪನ್ಯಾಸ (2021)

ಡೊರಿಸ್ ಸಾಲ್ಸೆದೊ ಅವರ ಸಾರ್ವಜನಿಕ ಶಿಲ್ಪಗಳು- ಒಂದು ಕಿರುಚಿತ್ರ:

ಚಿತ್ರ ಶೀರ್ಷಿಕೆಗಳು:
ಡೊರಿಸ್ ಸಾಲ್ಸೆದೊ ಅವರ Atrabiliarios (1993)

ಡೊರಿಸ್ ಸಾಲ್ಸೆದೊ ಅವರ Disremembered IV, 2015, silk thread and nickel plated steel

ಡೊರಿಸ್ ಸಾಲ್ಸೆದೊ ಅವರ La Casa Viuda VI (2015)

ಡೊರಿಸ್ ಸಾಲ್ಸೆದೊ ಅವರ Noviembre 6 y 7, 2002. 280 wooden chairs and rope; overall dimensions variable. Ephemeral public project, Palace of Justice, Bogotá, 2002

ಡೊರಿಸ್ ಸಾಲ್ಸೆದೊ ಅವರ Shibboleth, 2007. Concrete and steel

ಡೊರಿಸ್ ಸಾಲ್ಸೆದೊ ಅವರ Sumando Ausencias project, in Bogotá (2019)

ಡೊರಿಸ್ ಸಾಲ್ಸೆದೊ ಅವರ Sumando Ausencias, Plaza Bolivar, Bogota, (2016)

ಡೊರಿಸ್ ಸಾಲ್ಸೆದೊ ಅವರ Untitled, 1998. Wooden cabinet, concrete, steel, glass, and clothing

ಡೊರಿಸ್ ಸಾಲ್ಸೆದೊ ಅವರ Untitled, 2013, cloth shirts, metal rebars and plaster in 5 parts

ಡೊರಿಸ್ ಸಾಲ್ಸೆದೊ ಅವರ wordless yet harrowing (2015)

ಈ ಅಂಕಣದ ಹಿಂದಿನ ಬರೆಹಗಳು:
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್

ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್

ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್

ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ

ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್

ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್

‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್

ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್

ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್

ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್

“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...