ಯೋಗದ ವಿವಿಧ ಭಂಗಿಗಳು

Date: 11-09-2023

Location: ಬೆಂಗಳೂರು


''ಯೋಗವು ವ್ಯಕ್ತಿಯ ಮನಸ್ಸು, ಶಕ್ತಿ ಮತ್ತು ಭಾವನಾತ್ಮಕ ಮಟ್ಟಗಳ ಮೇಲೆ ಕೆಲಸ ಮಾಡುತ್ತದೆ, ಹೀಗಾಗಿ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ,” ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು ತಮ್ಮ ''ಯೋಗ...ಯೋಗಾ'' ಅಂಕಣದಲ್ಲಿ ''ವಿವಿಧ ಆಸನಗಳ'' ಕುರಿತು ತಿಳಿಸಿದ್ದಾರೆ.

ವೀರಭದ್ರಾಸನ

ಈ ಭಂಗಿಯು ತೋಳುಗಳು, ಭುಜಗಳು, ತೊಡೆಗಳು ಮತ್ತು ಬೆನ್ನಿನ ಮಾಂಸಖಂಡಗಳು ಒಂದೇ ಮಟ್ಟಿನಲ್ಲಿ ಇವುಗಳಿಗೆ ಶಕ್ತಿ ಹೆಚ್ಚಿಸುವುದು. ಈ ಭಂಗಿಗೆ ಶಿವ ಅವತಾರವಾದ ಶೂರ ವೀರಭದ್ರ ಎಂದು ಹೆಸರಿಸಲಾಗಿದೆ. ಶೂರ ವೀರಭದ್ರನ ಕತೆಯು ಉಪನಿಷತ್ತಿನ ಎಲ್ಲ ಕತೆಗಳಲ್ಲಿರುವಂತೆ ನಮ್ಮ ಜೀವನಕ್ಕೆ ನೀತಿಯ ಮೌಲ್ಯವನ್ನು ಹೆಚ್ಚಿಸುತ್ತದೆ.

ವೀರ - ಪೌರುಷ, ಯೋಧ, ಪರಾಕ್ರಮ:
ಭದ್ರ- ಒಳ್ಳೆಯ, ಉತ್ತಮವಾದ : ಆಸನ- ಭಂಗಿ

ವೀರಭದ್ರಾಸನವನ್ನು ಮಾಡುವ ವಿಧಾನ:

ವೀರಭದ್ರಾಸನವು ಒಂದು ಬಹಳವಾದ ವಿನಯಶೀಲವಾದ ಯೋಗದ ಭಂಗಿಯಾಗಿದೆ ಮತ್ತು ಇದು ಒಬ್ಬರ ಯೋಗಾಭ್ಯಾಸಕ್ಕೆ ಸುಂದರತೆ ಹಾಗೂ ಸುಲಲಿತೆಯನ್ನು ಕೂಡಿಸುತ್ತದೆ.

3 ರಿಂದ 4 ಅಡಿಯಷ್ಟು ನಿಮ್ಮ ಕಾಲುಗಳನ್ನು ಅಗಲಿಸಿ ನೇರವಾಗಿ ನಿಂತುಕೊಳ್ಳಿರಿ,
ನಿಮ್ಮ ಬಲ ಪಾದವನ್ನು 90 ಡಿಗ್ರಿಗಳಷ್ಟು ಹೊರಗಡೆಗೆ ತಿರುಗಿಸಿ ಹಾಗೂ ನಿಮ್ಮ ಎಡ ಪಾದವನ್ನು 15 ಡಿಗ್ರಿಗಳಷ್ಟು ಒಳಗಿರಿಸಿ

 

ಗಮನಿಸುವ ಅಂಶ: ಬಲಪಾದದ ಹಿಮ್ಮಡಿಯು ಎಡ ಪಾದದ ಮಧ್ಯಕ್ಕೆ ಹೊಂದಿಕೊಂಡಿದೆಯೇ ?
ಎರಡೂ ತೋಳುಗಳನ್ನು ಅಕ್ಕಪಕ್ಕದಿಂದ ಭುಜದವರೆವಿಗೂ ತಂದು ನಿಮ್ಮ ಕೈಗಳು ಮೇಲ್ಭಾಗಕ್ಕೆ ತೋರುವಂತಿರಲಿ.
ಗಮನಿಸುವ ಅಂಶ: ನಿಮ್ಮ ಕೈ ಗಳು ಭೂಮಿಗೆ ಸಮಾನಾಂತರದಲ್ಲಿವೆಯೇ ?
ಉಸಿರನ್ನು ಹೊರಗೆ ಬಿಡುತ್ತಾ ನಿಮ್ಮ ಬಲ ಮಂಡಿಯನ್ನು ಬಾಗಿಸಿ

ಗಮನಿಸುವ ಅಂಶ: ನಿಮ್ಮ ಬಲ ಮಂಡಿ ಹಾಗೂ ಬಲಕೋನವು ನೇರ ರೇಖೆಯಲ್ಲಿದೆಯೇ ? ನಿಮ್ಮ ಮಂಡಿಯು ಬಲಕೋನದ ಮೇಲ್ಮುಖವಾಗದಂತೆ ಗಮನಿಸಿ.
ನಿಮ್ಮ ತಲೆಯನ್ನು ತಿರುಗಿಸಿ ನಿಮ್ಮ ಬಲಕ್ಕೆ ನೋಡಿರಿ.
ನೀವು ಯೋಗದ ಭಂಗಿಗೆ ಬರುತ್ತಿದಂತೆ ನಿಮ್ಮ ತೋಳುಗಳನ್ನು ವಿಸ್ತರಿಸಿ.
ನಿಮ್ಮ ಜಠರವನ್ನು ನವಿರಾದ ಪ್ರಯತ್ನದೊಂದಿಗೆ ಕೆಳಗಿಳಿಸಿ. ಈ ಯೋಗದ ಭಂಗಿಯಲ್ಲಿ ಧೀರತನದಿಂದ ಇರಿ. ಸಂತೋಷದಿಂದ ನಗುತ್ತಾ ಧೀರತೆಯಿಂದಿರಿ. ಕೆಳಗೆ ಬರುತ್ತಾ ಉಸಿರಾಟವನ್ನು ಮುಂದುವರಿಸಿ.
ಉಸಿರು ಒಳಗೆ ತೆಗೆದುಕೊಳ್ಳುತ್ತಾ ಮೇಲಕ್ಕೆ ಬನ್ನಿರಿ
ಉಸಿರು ಬಿಡುತ್ತಾ ನಿಮ್ಮ ಅಕ್ಕಪಕ್ಕದ ಕೈಗಳನ್ನು ಕೆಳಗಿಳಿಸಿ.
ಎಡ ಭಾಗದ ಯೋಗದ ಭಂಗಿಯನ್ನು ಪನರಾವರ್ತಿಸಿ ( ನಿಮ್ಮ ಎಡ ಪಾದವನ್ನು 90 ಡಿಗ್ರಿಗಳಷ್ಟಕ್ಕೆ ತಿರುಗಿಸಿ. ಹಾಗೂ ಬಲ ಪಾದವನ್ನು 15 ಡಿಗ್ರಿಗಳಿಗೆ ತಿರುಗಿಸಿ)

*ವೀರಭದ್ರಾಸನದ ಪ್ರಯೋಜನಗಳು:

1) ತೋಳುಗಳು, ಕಾಲುಗಳು
ಕೆಳಸೊಂಟವನ್ನು ದಷ್ಟಪುಷ್ಟವಾಗಿಸುತ್ತದೆ.

2) ಶರೀರದ ಶಕ್ತಿಯನ್ನು ಉತ್ತಮಗೊಳಿಸಲು ಹಾಗೂ ಸಮತೋಲನವಾಗಿರಿಸಲು ಸಹಾಯಕವಾಗುತ್ತದೆ.

3) ಮೇಜಿನ ಕೆಲಸವನ್ನು ಮಾಡುವವರಿಗೆ ಅನುಕೂಲಕರವಾಗುತ್ತದೆ.

4) ಭುಜಗಳು ಗಟ್ಟಿಯಾಗಿದ್ದಲ್ಲಿ ಬಹಳವಾಗಿ ಅನುಕೂಲವಾಗುತ್ತದೆ.

5) ಕಡಿಮೆ ಸಮಯದಲ್ಲಿ ಭುಜಗಳಲ್ಲಿನ ಒತ್ತಡವನ್ನು ಹೊರಹಾಕುತ್ತದೆ.

6) ಪವಿತ್ರವಾದ ,ಸ್ಥೈರ್ಯವಾದ ದೈವಾನುಗ್ರಹದ ಮತ್ತು ಶಾಂತಿಯ ಅನುಭವವನ್ನ ಕೊಡುತ್ತದೆ.

ಉಷ್ಟ್ರಾಸನ

ಉಷ್ಟ್ರ: ಒಂಟೆ
ಆಸನ : ಭಂಗಿ

ಮಾಡುವ ವಿಧಾನ:

ಮೊದಲು ನೇರವಾಗಿ, ಲಂಬವಾಗಿ ನಿಲ್ಲಬೇಕು. 2) ಅನಂತರ ಮೊಣಕಾಲೂರಿ ಕುಳಿತುಕೊಳ್ಳಬೇಕು. 3) ಉಸಿರನ್ನು ಹೊರಕ್ಕೆ ದೂಡುತ್ತಾ ನಿಧಾನವಾಗಿ ಹಿಂದಕ್ಕೆ ( ಸೊಂಟದ ಮೇಲಿನ ಶರೀರವನ್ನು) ಬಾಗಬೇಕು. ಈ ಸ್ಥಿತಿಯಲ್ಲಿ ಕತ್ತನ್ನು ಸಹ ಆದಷ್ಟು ಹಿಂದಕ್ಕೆ ಬಗ್ಗಿಸಬೇಕು.

ಉಷ್ಟ್ರಾಸನದ ಪ್ರಯೋಜನಗಳು:

1)ಉಷ್ಟ್ರಾಸನದಿಂದ ಬೆನ್ನು ಮತ್ತು ಕುತ್ತಿಗೆಯ ಭಾಗವು ನಮ್ಯತೆಯನ್ನು ಪಡೆಯುತ್ತದೆ.

2)ಈ ಆಸನದಿಂದಾಗಿ ದೇಹದ ಮೇಲ್ಭಾಗದಲ್ಲಿನ ರಕ್ತ ಸಂಚಾರವು ಸುಗಮವಾಗಿ, ಹೃದಯ, ಶ್ವಾಸಕೋಶ ಮತ್ತು ಮೆದುಳಿಗೆ ರಕ್ತ ಪರಿಚಲನೆ ಸುಗಮವಾಗುತ್ತದೆ.

3) ಇದರಿಂದ ದೃಷ್ಟಿಯೂ ಸುಧಾರಿಸುತ್ತದೆ.

4)ಇಷ್ಟೇ ಅಲ್ಲದೆ, ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಸುಧಾರಿಸುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

ಯೋಗದ ವಿವಿಧ ‘ಆಸನಗಳು’

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...