ಶತಮಾನ ಕಳೆದು, ಭಾಷೆ ಹಲವಾಗಿ, ಸಂಬಂಧಗಳು ಕಾಲ್ಪನಿಕವಾದರೂ
ಅಮ್ಮ ಎಂಬ ಬಂಧನ ಬದಲಾಗಲಿಲ್ಲ
ಹಾಗೂ ಬದಲಾಗುವುದಿಲ್ಲ.
ಪ್ರತಿಯೊಂದು ತಾಯಿಯ ಬದುಕಿನಲ್ಲಿ ತನ್ನ ಮಗಳ ಪುಟಗಳು
ಅಂತ್ಯವಿಲ್ಲದ ಸಾಗರದಷ್ಟು
ಅದೇ ರೀತಿ ಮಗಳಿಗೂ ಸಹಾ
ಇಂದಿನ ಸಾಲಿನಲ್ಲಿ ಮಗಳು ಅವಳ ತಾಯಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಸಾಲುಗಳನ್ನು ಹೊಂದಿದೆ.
(ಓದುವಾಗ ಈ ಮಾದರಿಯನ್ನು ಪ್ರಯತ್ನಿಸಿ, ಪ್ರತಿಯೊಂದು ತಾಯಿಯ ಬದುಕಿನಲ್ಲಿ ಪ್ರತಿಯೊಂದು ತಾಯಿಯ ಬದುಕಿನಲ್ಲಿ ತನ್ನ ಮಗಳ ಪುಟಗಳು ಅಂತ್ಯವಿಲ್ಲದ ಸಾಗರದಷ್ಟು)
ಪ್ರಾರಂಭದ ಅದ್ಭುತ (ಹುಟ್ಟು)
ಜೀವನ ಎಂಬ ಮೂರಕ್ಷರ, ತಾಯಿ ಎಂಬ ಎರಡಾಕ್ಷರವ ಪರಿಚಯಿಸಿದೆ
ಅಮೃತ ಮಿಂಚಿದ ಕ್ಷೀರ, ದೇಹದ ಪ್ರತಿ ನಾಡಿಯಲ್ಲೂ ಹರಿದಿದೆ
ಶಶಿಯನ್ನು ವರ್ಣಿಸುವ ಮಾತಿನಿಂದ, ಉಣಿಸಿದ ಮುದ್ದಿನ ಮುದ್ದು ಹಸಿವ ತಣಿಸಿದೆ
ಹೆಗಲ ಪ್ರೀತಿಯ ತೊಟ್ಟಲಿನಲಿ, ಸುಖ ಸಂಪತ್ತಿನ ನಿದ್ದೆ ತಂಪಾಗಿದೆ
ಸಮಯ ಕಳೆದಂತೆ(ಮದುವೆಯ ಪ್ರಸಂಗ)
ಬಣ್ಣಬಣ್ಣದ ಸಂಭ್ರಮದ ಮನೆ, ಹೊಸ ನಗುವಿಗೆ ನಾಂದಿಯಾಗಿದೆ
ಸಾವಿರಾರು ಜನರ ಆಶೀರ್ವಾದದ, ಪುಷ್ಪಗಳು ಜಲಪಾತದಂತೆ ಸುರಿಸಿದೆ
ಗಂಡನಿಗೆ ಒಳ್ಳೆಯ ಹೆಂಡತಿಯಾಗಲೂ, ಶೃಂಗರಿಸಿದೆ ತೇರು ಸಿದ್ಧವಾಗಿದೆ
ಬದುಕಿನ ಎರಡನೇ ಅಧ್ಯಯದಲಿ, ಅಮ್ಮನ ಪುಟಗಳು ಬರಿ ನೆನಪಾಗಲಿದೆ
ಕೊನೆಯ ಕ್ಷಣ(ಅಂತ್ಯ)
ನದಿ ತನ್ನ ಹಾದಿ(ದಾರಿ) ಮರೆತ ಹಾಗೆ, ಭವಿಷ್ಯ ನನನ್ನು ಮರೆತಿದೆ
ನಿರತವಾಗಿ ಸಾಗುವ ಸಮಯ, ಮುಕ್ತಾಯದ ಗಳಿಗೆ ಪ್ರಕಟಿಸಿದೆ
ಕೊನೆಗಾಲದ ಕೊನೆಯ ಆಸೆ, ಇಂದು ತಿಳಿಸಬೇಕೆಂದು ಆತೊರೆದಿದೆ
ದೇವನೆ ಮರುಜನ್ಮವ ಕರುಣಿಸು, ತಾಯಿಯನ್ನು ಮಗಳಾಗಿ ಧಾರೆಯೇರಿಸು
ಮಾಡಬೇಕಾದ ಕೆಲಸ ಬಾಕಿಯಿದೆ
- ಅಜಯ್ ಕುಮಾರ್ ಗೌಡ
ವಿಡಿಯೋ
ವಿಡಿಯೋ
ಅಜಯ್ ಕುಮಾರ್ ಗೌಡ
ಅಜಯ್ ಕುಮಾರ್ ಗೌಡ ಮೂಲತಃ ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿ. ನಗರದ ಖಾಸಗಿ ಕಚೇರಿಯಲ್ಲಿ ಗುಣಮಟ್ಟ ಪರಿಶೀಲನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕಥೆ ಹಾಗೂ ಕವನವನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದಾರೆ.