
ಕವಿ ಸಂತೋಷ ಕಾಖಂಡಕಿ ಅವರು ಬರೆದ ಕವಿತೆಯ ಸಾಲುಗಳು...
ಸಿಗಲಾರದ ಗೆಳತಿ ಅವಳು
ಪ್ರೇಯಸಿಯಾಗಿಲ್ಲ ಸ್ನೇಹಿತೆಯಾಗಿ
ನೊಂದ ಜೀವಕ್ಕೆ ಮದ್ದು ಎಂದು ಅರಿತವ ಅವನು
ಅವಳಿಗೆ ಅವನೇ ನೋವು ಎಂದು ಅರಿವುರಷ್ಟರಲಿ ಅವಳೇ ಕೈ ಜಾರಿ ಹೊರಟು ಹೋಗಿದ್ದಳು......!
ಯಾರಿಗೂ ಸ್ನೇಹಕ್ಕಾಗಿ ಭಿಕ್ಷೆ ಬೇಡದವನು
ಆಕೆಯ ಪ್ರಾಣಕ್ಕೂ ಮಿಗಿಲು ಎಂದವನು
ದೂರದ ಕನಸು ಆಕಾಶದ ಹಿಮ ಅವಳು
ನನಸಾಗದ ಕನಸು ಕೈಯಲ್ಲಿ ಕರಗುವ ಹಿಮ ಅವಳು....!
ಆಕೆಯದೇನು ತಪ್ಪಿಲ್ಲ ಇಲ್ಲಿ ಎಲ್ಲವೂ ದೂರದ ವಿಧಿಯಾಟ
ಹಾ..... ಮತ್ತೆ ಹೇಳುವೆ ಮನೆಯ ಕನಸಿಗೆ ದೂರ ಸರಿದವಳು ದೂರದ ಊರಿಗೆ ಹೆಜ್ಜೆ ಹಾಕಿದವಳು.....!
ಮತ್ತೆ ಮತ್ತೆ ಅವನು ಬಯಸಿದರು ಬಾರದವಳು ಈ ಭಾರವಾದ ಹೃದ್ಯಕ್ಕೆ ಸ್ನೇಹದ ದೀಪ ಹಚ್ಚಲಾಗದವಳು.....
ಎಲ್ಲಿದರೂ ಆಕೆಗೆ ನಗುವು ಕೊನೆಯಾಗದರಲಿ ....
ಆಕೆಯ ಕನಸು ನನಸಾಗುತಿರಲಿ.......!
ನೆನಪಾದರೆ ಮಾತನಾಡಿಸಲು ನೆಪ ಬೇಕಿಲ್ಲ
ನೆನಪಿಗೆ ಬಾರದಷ್ಟು ಕ್ರೂರಿ ನಾನಲ್ಲ
ಎಂದಿಗೂ ನಿನ್ನ ಸ್ನೇಹ ನನಗೆ ಅಮರ ಅಜರಾಮರ....!
ಸಂತೋಷ ಕಾಖಂಡಕಿ
ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.
ಪ್ರಶಸ್ತಿಗಳು: ರಾಷ್ಟ್ರೀಯ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
More About Author