
ಸನ್ಮನಗಳ ಸನ್ಮತಿಗಳ
ಸತ್ಸಂಗದ ಸನ್ಮಾರ್ಗದ
ಸದ್ಭಕ್ತಿಯ ಸನ್ಮಂಗಳದ ದೀಪ ಹಚ್ಚೋಣ ||
ಅವೈಜ್ಞಾನಿಕ ಅಪನಂಬಿಕೆ
ಅಜ್ಞಾನ ಅನೈಸರ್ಗಿಕ
ಅನಕ್ಷರತೆ ಅಪಹರಣತೆಯ ಅಳಿಸುವ ಹಣತೆ ಹಚ್ಚೋಣ ||
ಸಹೋದರ ಭಾವನೆ ಬಿತ್ತಿ
ಜಗದೋಳ್ ರಾಷ್ಟ್ರವ ಎತ್ತಿ
ರವಿ ಶಶಿಯಂತೆ ಬೆಳಗುವ ಬೆಳಕು ಹಚ್ಚೋಣ ||
ದುಷ್ಟ ದೌರ್ಜನ್ಯ
ಕಷ್ಟ ಕಾರ್ಪಣ್ಯ
ನಷ್ಟ ದೌರ್ಬಲ್ಯ ಭ್ರಷ್ಟರ ಸುಡುವತ್ತಿ ಹಚ್ಚೋಣ ||
ಹಬ್ಬದ ಪ್ರತೀಕ
ದೀಪದ ಕಾರ್ಯಕ
ಮನಸ್ಸುಗಳ ಸದ್ಬಳಕೆಯ ನಂದಾದೀಪ ಹಚ್ಚೋಣ ||
ವಿದ್ಯಾಕುಮಾರ ಮ ಬಡಿಗೇರ
ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕವಿ ವಿದ್ಯಾಕುಮಾರ .ಮ.ಬಡಿಗೇರ.ವೃತ್ತಿಯಲ್ಲಿ ಸ. ಕಿ.ಪ್ರಾ.ಶಾಲೆ ಹೆಬ್ಬಾಳದ ಪ್ರಾಧ್ಯಾಪಕರು.ತಬಲಾ ವಾದನ,ಪದಬಂಧ ರಚನೆ,ಕವನ ರಚನೆ, ನಾಟಕ ರಚನೆ ಇವರ ಹವ್ಯಾಸ.
ಶಿಕ್ಷಕ ರತ್ನ ಪ್ರಶಸ್ತಿ, ಮಕ್ಕಳು ಮೆಚ್ಚಿದ ಮೆಷ್ಟ್ರುವಿಶ್ವಕರ್ಮ ಅನರ್ಘ್ಯ ಸೇವಾ ರತ್ನ ಪ್ರಶಸ್ತಿ,ಸಾಹಿತ್ಯ ಶ್ರೀ-ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿದೆ. ಇವರು ಬರೆದ ಅನೇಕ ಕವನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸುಮಾರು ನೂರಕ್ಕೂ ಹೆಚ್ಚು ಕವಿಗೋಷ್ಠಿಯಲ್ಲಿ ಭಾಗವಹಿಸಿರುವ ಅನುಭವಿ.
ಪ್ರಕಟಿತ ಕೃತಿಗಳು
ಸುಧಾ ರಸಧಾರೆ - ಕವನ ಸಂಕಲನ 2013
ಹೃನ್ಮಣಿ - ಕವನ ಸಂಕಲನ 2015
More About Author