Poem

ಬೇಕು ಎನ್ನುವುದಕ್ಕೆ ಕೊನೆಯೇ ಇಲ್ಲ

ಇನ್ನೂ ಏನೋ ಬೇಕು ಎನಿಸಿದೆ
ಏನು ಎಂದು ಗೊತ್ತಿಲ್ಲ
ಮನಸ್ಸು ಏನೋ ಬಯಸುತ್ತಿದೆ
ಏನು ಎಂದೂ ಮನಸ್ಸಿಗೂ ಗೊತ್ತಿಲ್ಲ

ಏನೋ ಚಡಪಡಿಕೆ ಏನು ಎಂದು ತಿಳಿಯುತ್ತಿಲ್ಲ
ಏನು ಇರಬಹುದು ಎಂದು ಕೂಡ ಊಹಿಸಲಾಗುತ್ತಿಲ್ಲ
ಯಾವಾಗ ಗೊತ್ತಾಗುವುದೋ ಏನು ಎಂದು
ಎಲ್ಲಾ ಇದ್ದರೂ ಇಲ್ಲದುದ್ದರ ಕಡೆ ಚಡಪಡಿಕೆ

ಮಾನವನ ಮನಸ್ಥಿತಿಯೇ ಹೀಗೆ..
ಯಾವುದಕ್ಕೂ ತೃಪ್ತನಾಗಲಾರ ಮಾನವ
ಪಡೆದುಕೊಂಡಿದ್ದರ ಬಗ್ಗೆ
ತನ್ನಲ್ಲಿ ಇರುವುದರ ಬಗ್ಗೆ ತೃಪ್ತಿ ಖುಷಿ ಇಲ್ಲ

ಇಲ್ಲದಿದ್ದರ ಬಗ್ಗೆ ತಲೆಕೆಡಿಸಿಕೊಳ್ಳುವ
ಮನಸ್ಥಿತಿ ಈ ಮಾನವನದ್ದು
ಎಲ್ಲಾ ಪಡೆದುಕೊಂಡ ಮೇಲೆಯೂ
ಹುಟ್ಟಿನಿಂದ ಸಾವಿನವರೆಗೂ
ಇನ್ನು ಬೇಕು ಎನ್ನುವನು
ಬೇಕು ಎನ್ನುವುದಕ್ಕೆ ಕೊನೆಯೇ ಇಲ್ಲ ಮಾನವನಲ್ಲಿ.

- ರಾಜೇಸಾಬ ಕೆ. ರಾಟಿ, ಬೆದವಟ್ಟಿ

 

ವಿಡಿಯೋ
ವಿಡಿಯೋ

ರಾಜೇಸಾಬ ಕೆ. ರಾಟಿ

ಕವಿ ರಾಜೇಸಾಬ ಕೆ.ರಾಟಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆದವಟ್ಟಿಯವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆದವಟ್ಟಿ ಸರಕಾರಿ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶಿರೂರದಲ್ಲಿ ಪೂರೈಸಿದ್ದಾರೆ. ನಂತರ ಕುಕನೂರದಲ್ಲಿ ಪಿಯುಸಿ ಮುಗಿಸಿ ನಂತರ ಕೊಪ್ಪಳ ಜಿಲ್ಲೆಯ ಮಂಗಳೂರದಲ್ಲಿ ಡಿ.ಎಡ್.‌ ಮುಗಿಸಿ ಯಲಬುರಗಾದಲ್ಲಿ ತಮ್ಮ ಬಿ.ಎ ಪದವಿ ಪಡೆದರು. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತದ್ದಾರೆ.

ಕೃತಿ: ನೆನಪುಗಳ ಮೆರವಣಿಗೆ.

More About Author