Poem

ಚಂದ್ರನು ನನ್ನ ಮಾಮನೇ?

ಇದೋ ಒಂದು ತುತ್ತು, ಇನ್ನೊಂದು
ಮತ್ತೊಂದು ಎಂದು ಉನಿಸುತ್ತಿಯಲ್ಲ
ಅವ್ವ, ಆ ಚಂದ ಮಾಮನ ತೋರಿಸುತ್ತ

ಆಕಾಶದಲಿ ಹೊಳೆವ, ಕುಣಿವ
ಚಂದ್ರನನ್ನು ನೋಡು ಅನ್ನುತ್ತಿ ಅವ್ವ
ಮತ್ತೆ ಮತ್ತೆ ಮತ್ತೆ ಕೈ ತುತ್ತು ನೀಡುತ್ತಿ

ಚಂದ್ರ ನನ್ನ ಮಾಮ ಅನ್ನುತ್ತ
ಮತ್ತೊಂದು ತುತ್ತು ಬಾಯಿಗೆ
ಅವ್ವ ಹಾಗಾದರೆ ಚಂದ ನಿನ್ನ ತಮ್ಮನೇ?

ನನ್ನ ಮಾಮನಾದರೆ ಚಂದ
ಯಾಕೆ ಬರಲ್ಲ ನನ್ನ ಭೇಟಿಗೆ
ಇಷ್ಟವಿಲ್ಲವೇನು ನಮ್ಮನೆ ಅವನಿಗೆ?

ಖಾಲಿ ಆಯ್ತು ಅನ್ನದ ಬಟ್ಟಲು
ಚಂದ ಮಾಮನ ಹೆಸರು ಹೇಳಲು
ಬಲು ಜಾಣೆ ನೀನು ಅನ್ನ ಉನಿಸಲು

ಗೊತ್ತು ಉನಿಸುವ ಹುನ್ನಾರ ನನಗೂ
ಮಹಾ ಜಾಣ ನಿನ್ನ ಹಾಗೆ ನಾನೂ
ಆಸೆ ನೋಡಲು ಚಂದಮಾಮನ ದಿನವೂ

- ಮಾಲಾ ಮ ಅಕ್ಕಿಶೆಟ್ಟಿ

ಮಾಲಾ ಮ. ಅಕ್ಕಿಶೆಟ್ಟಿ

ಕವಯತ್ರಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿ. ಅವರ ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author