Poem

ಚಿಂಗಿಟ್ಟು ನಾರುವ ಚಿಂದಿ ಅರಿವೆಯವರು

ಗಿರಿಜೆಯ ಕುಚಗಳ ಕ್ಷೀರದಿಂದ
ಕ್ಷಿತೀಜರಾದವರು ನಾವು ಕಣ್ಣಿಗೆ
ಕಾಣಿಸುವವರಲ್ಲ ಮೂಗಿಗೆ ಕಾಣಿಸುವವರು

ದೇವಲೋಕದ ಗುರುಬಂದೇನು
ಬೇಕೆಂದಾಗ ಬಯಲಿಗೆ ಬಯಲಾಗಲೆಂದವರು
ನಾವು ಕಣ್ಣಿಗೆ ಕಾಣಿಸುವವರಲ್ಲ ಮೂಗಿಗೆ ಕಾಣಿಸುವವರು

ಆರ್‍ಯರಾಣೆಯಂತೆ ಮೌರ್‍ಯಮನೆಯನು ಕಟ್ಟಿ
ಭರತ ಖಂಡಕ್ಕೆ ಬದ್ಧರಾದವರು ನಾವು ಕಣ್ಣಿಗೆ ಕಾಣಿಸುವವರಲ್ಲ ಮೂಗಿಗೆ
ಕಾಣಿಸುವವರು

ಕುರು ಕುರುಂಬ ಕದಂಬರಾಗಿ ಕರುನಾಡಳಿತ
ಪ್ರಪ್ರಥಮರು ನಾವು ಕಣ್ಣಿಗೆ ಕಾಣಿಸುವವರಲ್ಲ
ಮೂಗಿಗೆ ಕಾಣಿಸುವವರು

ಗೋಲ ಸೊಲ್ಲೂರಿನ ಕಾಯಕರ್‍ಮದ
ಗೊಲ್ಲ ಸಿದ್ಧರು ನಾವು ಕಣ್ಣಿಗೆ ಕಾಣಿಸುವವರಲ್ಲ
ಮೂಗಿಗೆ ಕಾಣಿಸುವವರು

ಕೊಪ್ಪರಿಕೆ ಕನಕವನು ಬೀದಿಗಿಟ್ಟಂಚಿದ ಹಕ್ಕಬುಕ್ಕ ಕೃಷ್ಣಕನಕೊಡೆಯರು
ನಾವು ಕಣ್ಣಿಗೆ ಕಾಣಿಸುವವರಲ್ಲ ಮೂಗಿಗೆ ಕಾಣಿಸುವವರು

ಸಾಸಿರ ಸೈನ್ಯವ ಸಂಹರಿಸಿ ಸತ್ತರೂ ಸಾವಿಲ್ಲದ ಸಂಗೊಳ್ಳಿಯವರು ನಾವು ಕಣ್ಣಿಗೆ
ಕಾಣಿಸುವವರಲ್ಲ ಮೂಗಿಗೆ ಕಾಣಿಸುವವರು

ಇತಿ ಮೆಚ್ಚಿದ ನಾಡ ಜನತೆ ಮತ್ತೆ ನಾಡಾಳಲು
ಕಳುವಿಹರು ಕಣ್ಣಿಗೆ ಕಾಣಿಸುವವರಲ್ಲ ನಾವು
ಮೂಗಿಗೆ ಕಾಣಿಸುವವರು

ಸಂಗನಗೌಡ ಹಿರೇಗೌಡ

ವಿಡಿಯೋ
ವಿಡಿಯೋ

ಸಂಗನಗೌಡ ಹಿರೇಗೌಡ

ಸಂಗನಗೌಡ ಹಿರೇಗೌಡ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಬರಖೇಡದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ತತ್ವಪದಗಳ ಕಾವ್ಯ ಮೀಮಾಂಸೆ’ ವಿಚಾರದಲ್ಲಿ ಸಂಶೋಧನ ಕೈಗೊಂಡಿದ್ದಾರೆ. ಓದು, ಬರವಣಿಗೆ ಇವರ ಹವ್ಯಾಸ

More About Author