ನಿದ್ದೆಯಿಂದ ಎದ್ದು ಬಂದವನಿಲ್ಲಿ ಬುದ್ಧನೆಂದು ಸಾರಿದ ಚಾತುರಾರ್ಯ ಸತ್ಯಗಳಿಲ್ಲಿ ಮುಕ್ತಿಗೆ ಅಷ್ಟಾಂಗ ಮಾರ್ಗಗಳೆಂದ
ದೇಹವನ್ನು ದಂಡಿಸುತಲಿ ಆಸೆಯನು ಮರೆತನು ದುಃಖಕ್ಕೆ ಇದುವೇ ಮೂಲವೆನುತಲಿ ಜಾಗೃತರಾಗಿ ಎಂದನು
ಈ ಭೂಮಿಯೊಳು ನಾನು ದೇವರಲ್ಲವೆಂದನು ಮೈಮನದ ಶುದ್ಧಿಯೊಳು ತಾನು ದೇವದೂತನೆಂದನು
ದಯೆಯೇ ಧರ್ಮದ ಮೂಲವೆಂದನು ಹಿಂಸೆಯನು ಖಂಡಿಸುತಲಿ ಸಕಲ ಜೀವ-ಜಂತುಗಳ ಪ್ರೀತಿಸೆಂದನು ಧಮ್ಮ ಬೆಳಕು ಚೆಲ್ಲುತಲಿ
ಬೋಧಿವೃಕ್ಷದಡಿಯಲಿ ಜ್ಞಾನವನು ಪಡೆದ ಮಹಾಗುರುವೇ ಅವನು ಬದುಕ ಆ ಘೋರ ದುಃಖಕೆ ಮರುಗಿದನು ಈ ಸಂಜೀವಿನಿ ಮಹಾತ್ಮನು
- ರಾಜಶೇಖರ ನಾಗೂರ
ರಾಜಶೇಖರ ನಾಗೂರ ಅವರು ಮೂಲತಃ ಹುಬ್ಬಳ್ಳಿಯವರು. ಹಿರಿಯ ಪಶುವೈದ್ಯಾಧಿಕಾರಿಯಾಗಿ ವೃತ್ತಿನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ.
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಲಲಿತಾ ಸಿದ್ದಬಸವಯ್ಯ - ಪ್ರೀತಿಗೊಂಡು
Punch Line
Gandhada Beedu
©2025 Book Brahma Private Limited.