Poem

ಗೆಳತಿ

ಬಿತ್ತು ನಿನ್ನ ಮ್ಯಾಲ ನನ್ನ ನೆದರ
ಹಾರೆ ಹೋಯ್ತು ನನ್ನ ಖಬರ
ಏನು ಹೇಳು ನಿನ್ನ ಹೆಸರ
ಕೇಳೆ ನೀನೇ ನನ್ನ ಉಸಿರ

ಮಿಂಚಿನಂತೆ ಹೊಳೆವ ಕಣ್ಣ
ಬಳ್ಳಿಯಂತೆ ಬಳುಕುವ ನಡು ಸಣ್ಣ
ಸಿಹಿಜೇನಿನಂತೆ ತುಟಿಗಳ ಬಣ್ಣ
ಅದ ನೋಡಿ ನನ್ನೊಳಗಿಲ್ಲ ನಾನ

ಕೆನ್ನೆ ತುಂಬ ಸೇಬು ಹಣ್ಣ
ಕಡುಗಪ್ಪು ಕೇಶರಾಶಿ ಬಣ್ಣ
ನಿನ್ನ ನಡಿಗೆ ಎಂತ ಚೆನ್ನ
ಕಣ್ಣ ಕಾಡಿಗೆ ಕರಿಯಿತೆನ್ನ

ಇನ್ನೂ ನಾನು ನೀನು ಜೋಡ
ಹೂಂ ಅಂತ ಅಣಿಮಾಡ
ಕಟ್ಟೋಣ ನಮ್ಮದೇ ಗೂಡ
ಹಾಡೋಣ ಪ್ರೀತಿ ಹಾಡ

ಗಾಯತ್ರಿ ಹುಳ್ಳಿ

ವಿಡಿಯೋ
ವಿಡಿಯೋ

ಗಾಯತ್ರಿ ಹುಳ್ಳಿ

ಕವಯತ್ರಿ ಗಾಯತ್ರಿ ಕೆಂಚಪ್ಪ ಹುಳ್ಳಿ. ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬೆಟಗೇರಿ ಅಂಚೆಯ ಮೋರನಹಳ್ಳಿಯವರು. ಬಿ.ಎಸ್.ಸಿ. ಪದವೀಧರರು. ಜೀವ ತೇವದ ಭಾವಲೋಕ-ಇವರ ಕವನ ಸಂಕಲನ.

More About Author