ಹಾರುವ ಹಕ್ಕಿ ನಾನಾದರೂ ಬರಿದೆ ಹಾರುತಿರಲಾರೆ ಹಾಗಂತ ಆಗಸದ ಮಧ್ಯವೆಲ್ಲೊ ನಿಂತುಬಿಡಲಾರೆ.
ಹಾರಿಹೋಗುವ ತವಕದಷ್ಟೇ ಇಳಿಯಲೂ ಕವಡೆ ಹಾಕಬೇಕು; ಆಯಮೆಚ್ಚಿನ ಕೊಂಬೆ , ಕೋಳುಹೆಂಚಿನ ಮನೆ , ಇಲ್ಲವಾದಲ್ಲಿ ಯಾವುದೋ ನೀರತೊಟ್ಟಿ.
ಹುಳುಹುಪ್ಪಡಿಗಳೇನು ಸುಮ್ಮನೆ ಬಂದಾವೇ? ಕಂಡಲೆಲ್ಲ ಝಾಂಡಾಊರಿ ಕಾಯಬೇಕು.
ದಿನದ ಗುಟುಕಿಗೊಂದೊಂದು ಕಥೆ. ಮನೆಯಿಲ್ಲವೆಂದಲ್ಲ ; ಬದುಕು ಸಾಗಬೇಕು. ಕಣ್ಣನಿಡಬೇಕು.
ಅವರಿವರ ಮನೆ ಅಂಗಳದಲ್ಲೋ., ಮಂದಿ ಎಸೆವ ಹಣ್ಣಮೇಲೋ .
ಕತ್ತಲಾಗುವುದರೊಳಗೆ ಹಿಡಿವೆ ಗೂಡ ಉಳಿದದ್ದು ನಾಳೆಗೆ.
-ಕಾತ್ಯಾಯಿನಿ ಶರತ್
ಕಾತ್ಯಾಯಿನಿ ಶರತ್ ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದು, ಕವನ ಬರವಣಿಗೆಯಲ್ಲಿ ತನ್ನನು ತೊಡಗಿಸಿಕೊಂಡಿದ್ದಾರೆ.
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಲಲಿತಾ ಸಿದ್ದಬಸವಯ್ಯ - ಪ್ರೀತಿಗೊಂಡು
Punch Line
Gandhada Beedu
©2025 Book Brahma Private Limited.