Poem

ಹಿಂಸೆ ಮತ್ತು ಪ್ರೀತಿ

ಈ ಮಣ್ಣಿನಲ್ಲಿ ನೀವು ಕೊಟ್ಟ ಹಿಂಸೆ
ನಮ್ಮ ಎದೆಯಲ್ಲಿ ಮಾಯದ ಗಾಯವಾಗಿದೆ.
ಬೆನ್ನ ಮೇಲೆ ಹಾಕಿದ ಅನ್ಯಾಯದ ಬರೆಗಳು
ಕೀವು ರಕ್ತವಾಗಿ ಸೋರಿವೆ.

ಇದರ ಸಂಕಟ ಹೇಳಲು ಶಬ್ದಗಳೇ ಇಲ್ಲ.
ಇದ್ದರೂ ನಾಲಿಗೆಯನು ಕೊಯ್ದು ಬಿಟ್ಟಿದ್ದೀರಿ.
ಎದೆ ಸೀಳುವ ಮೂಕ ದನಿ ಎತ್ತಿದರೂ
ನಿಮ್ಮ ಕಿವುಡು ಕಿವಿಗಳಿಗೆ ಕೇಳಿಸುವುದೇ ಇಲ್ಲ.

ಮನುಷ್ಯತ್ವ ಇಲ್ಲದ ಈ ನೆಲದ ಕತ್ತಲ ಕೂಪದಲಿ
ಬುದ್ಧಿಭ್ರಮಣೆಯಾಗಿ ಬೀದೀಲಿ ಅರೆಜೀವ ಆದೆವು.
ಕೊನೆಗೆ ಅಂಬೇವಾಡದ ಬೆಳಕು ಜೀವ ತುಂಬುತ್ತದೆ
ಮೈಮನ ಬೆಂಕಿಯಾಗಿ ಕ್ರೌರ್ಯ ಘನೀಭವಿಸಿ
ನಿಮ್ಮನ್ನು ನಾಶಪಡಿಸುತ್ತದೆ.

ಆಗ ಮನುಷ್ಯತ್ವದ ಸುಂದರ ಪಕ್ಷಿ
ಹೊಸ ಯುಗದ ಪ್ರೀತಿಯ ಪದ ಹಾಡುತ್ತದೆ.
ಆ ಕಾಲಕ್ಕೆ ನಿಮ್ಮ ಮನಸ್ಸು
ನಮ್ಮನ್ನು ಪ್ರೀತಿಸುತ್ತದೆ.

- ಬಾನಂದೂರು ಕೆಂಪಯ್ಯ

ವಿಡಿಯೋ
ವಿಡಿಯೋ

ಬಾನಂದೂರು ಕೆಂಪಯ್ಯ

ಬಾನಂದೂರು ಕೆಂಪಯ್ಯ ಅವರು ಜೀವದನಿಯ ಹಾಡುಗಾರರಾಗಿದ್ದಾರೆ. ಕವಿತೆಗಳ ರಚನೆ ಮತ್ತು ಹಾಡುಗಾರಿಕೆ ಅವರ ಹವ್ಯಾಸವಾಗಿದೆ.

More About Author