Poem

ಹೊಂಗಿರಣ

ಮುನ್ನ ಬೆಳಗಿನ
ಹೊಂಗಿರಣ
ವಸುಂದರೆಯ ಮೇಲೆ
ಹಾಸಿತ್ತು.

ಚಿಗುರೆಲೆಗಳ ಮೇಲೆ
ಸೂಸಿತ್ತು
ಪಲ್ಲವಿಸಿತ್ತು ತಳಿರು
ಪಕ್ಷಿಗಳ ನಲಿವು
ಪುಷ್ಪಮಂಜರಿ ಸೊಗಸು
ಸೊಗಸಿನ ಸುಮoಗಲ
ದವಬಿಂದು ತಂಪಿನ
ಹೊಳಪು. ಆಹಾ

ಎಷ್ಟೊಂದು ಶ್ರೀಮಂತ
ಎಷ್ಟೊಂದು ಧೀಮಂತ
ಒತ್ತಡದ ಧಾವಂತಕ್ಕೆಲ್ಲಿ
ಧನ್ಯತೆಯ ಧ್ಯಾನ,ಇಲ್ಲ
ಚಿಗುರುವ ಸಂಭ್ರಮ.

ಮುನ್ನ ಬೆಳಗಿನ ಹೊಂಗಿರಣ
ವಸುಂಧರೆಯ ಮೇಲೆ
ಹಾಸಿತ್ತು.
ಅದು ಪದ್ಯವಾಗುವ

ಚಿನ್ನಮಯ ಸಂವಾದ
ಅಲ್ಲೇ ಉತ್ತುಂಗ ಶಿಖರದ ಶಿಖರದ
ಭವ್ಯತೆಯು ಇತ್ತು.

ಅದೇ ಚಲನೆಯ
ರಥ ಶ್ರುತಿ.
ಮುನ್ನ ಬೆಳಗಿನ ಹೊಂಗಿರಣ
ವಸುಂಧರೆಯ ಮೇಲೆ
ಹಾಸಿತ್ತು.

ಚಿಗುರೆಲೆಗಳಿಗೆ
ಸೂಸಿತ್ತು.

- ಸುಲಭಾ ಜೋಶಿ ಹಾವನೂರ.

ವಿಡಿಯೋ
ವಿಡಿಯೋ

ಸುಲಭಾ ಎಲ್. ಹಾವನೂರ

ಕವಯತ್ರಿ ಸುಲಭಾ ಎಲ್. ಹಾವನೂರ ಅವರು 1954 ಆಗಸ್ಟ್ 21 ರಂದು ಜನಿಸಿದರು. ಸ್ನಾತಕೋತ್ತರ ಪದವೀಧರೆ. ’ನಾವೂ ನೀವು ಕೂಡಿದಾಗ’ ಕವನ ಸಂಕಲನ ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸೇವೆಗೆ ’ರತ್ನಮ್ಮ ಹೆಗ್ಗಡೆ ಪ್ರಶಸ್ತಿ’ ಲಭಿಸಿದೆ.

More About Author