Poem

ಕಾಲವೆಂಬ ಔಷಧ

ಸಂಜೆಯಾಗುತ್ತಿದ್ದಂತೆ ನೆನಪುಗಳು ಕಾಡುತ್ತವೆ
ಖುಷಿಯ ನೆನಪು, ದುಃಖದ ನೆನಪು, ನಾನಾತರಹ ನೆನಪು..
ಒಂದರ ನಂತರ ಒಂದರಂತೆ ಬೆಂಬಿಡದೆ ಕಾಡುತ್ತವೆ
ನೆನಪುಗಳ ಹಾವಳಿಗೆ ತತ್ತರಿಸುವುದು ಮನವು..

ಕಾಲವೇ ಮರೆಸುವುದು ಎಲ್ಲವನ್ನೂ
ಎನ್ನುವ ನಂಬಿಕೆಯ ಮೇಲೆ
ಸಮಾಧಾನಗೊಂಡಿವುದು ಮನವು
ಕಾಲವೆಂಬ ಔಷಧ ಮತ್ತೊಂದಿಲ್ಲ

ಎಂತಹದೇ ಇರಲಿ ಸಮಸ್ಯೆ
ಮರೆಸುವುದು ಎಲ್ಲವನ್ನೂ ಕಾಲ
ಇಂದಿನ ಸೋಲಿನಿಂದ, ನಿರಾಶೆರಾಗಬೇಡಿ
ಜೀವಕ್ಕೆ ಕುತ್ತು ತಂದುಕೊಳ್ಳಬೇಡಿ

ಕಾಲವೇ ಔಷಧಿಯಾಗಿರುವಾಗ
ನಿನ್ನೆಯ ಹಾಳು ನೆನಪುಗಳ ಗೊಡವೆ ಏಕೆ ?
ಕಾಲದೊಂದಿಗೆ ಹೆಜ್ಜೆ ಹಾಕಿ
ಸಾಗಲಿ ಬದುಕಿನ ದಾರಿ ನಾಳೆಯ ಭರವಸೆಯೊಂದಿಗೆ

ನಿಮ್ಮಿಷ್ಠಕ್ಕೆ ನೀವು ಬದುಕಿ
ಉತ್ತರ ಕೊಡುವುದು ಕಾಲವೇ ಎಲ್ಲದ್ದಕ್ಕೂ.

✍️ - ರಾಜೇಸಾಬ ಕೆ. ರಾಟಿ, ಬೆದವಟ್ಟಿ

ರಾಜೇಸಾಬ ಕೆ. ರಾಟಿ

ಕವಿ ರಾಜೇಸಾಬ ಕೆ.ರಾಟಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆದವಟ್ಟಿಯವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆದವಟ್ಟಿ ಸರಕಾರಿ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶಿರೂರದಲ್ಲಿ ಪೂರೈಸಿದ್ದಾರೆ. ನಂತರ ಕುಕನೂರದಲ್ಲಿ ಪಿಯುಸಿ ಮುಗಿಸಿ ನಂತರ ಕೊಪ್ಪಳ ಜಿಲ್ಲೆಯ ಮಂಗಳೂರದಲ್ಲಿ ಡಿ.ಎಡ್.‌ ಮುಗಿಸಿ ಯಲಬುರಗಾದಲ್ಲಿ ತಮ್ಮ ಬಿ.ಎ ಪದವಿ ಪಡೆದರು. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತದ್ದಾರೆ.

ಕೃತಿ: ನೆನಪುಗಳ ಮೆರವಣಿಗೆ.

More About Author