Poem

ಕವಿತೆಗಳು ಸುಮ್ಮನೆ ಹುಟ್ಟುವುದಿಲ್ಲ

ಅದಕ್ಕೊಂದು ಪ್ರೀತಿ ಇರಬೇಕು.
ಸರಸ, ಮಿಲನ, ನಶೆ ಏರಿಸುವ ಅವನ ನೋಟ ಮೇಲು ದನಿಯ ಮಾತುಗಳು
ಹೀಗೆ ಏನಾದರೊಂದು
ಅನುಭವಬೇಕು

ಕವಿತೆ ಸುಮ್ಮನೆ ಹುಟ್ಟುವುದಿಲ್ಲ
ಅದಕ್ಕೆ ಅವನು ಸೃಷ್ಟಿಸುವ ವಿರಹ , ಅದ್ಕಂಟಿದ ವಿಷಾಧವಾದರೂ ಬೇಕೇ ಬೇಕು
ನೋವು ಆರಿದ ಮೇಲು ಕಲೆಯೊಂದು ಉಳಿಸಿ ಹೋಗುವ ಗಾಯದ ಹಾಗೆ
ನೆನಪುಗಳ ಇರಿತಕ್ಕೆ ಘಾಸಿ ಗೊಳ್ಳುತ್ತಲೇ ಇರಬೇಕು ಮನಸ್ಸು

ಕವಿತೆಗಳು ಸುಮ್ಮನೆ ಹುಟ್ಟುವುದಿಲ್ಲ
ಅದಕ್ಕೊಂದು ಬಾಳಲಿ ಎದುರಾಗುವ ಅಸಹಾಯಕತೆ ,ಅಧೈರ್ಯ, ಒಳಗೆ ಕುದಿಯುವ ಆಕ್ರೋಶ, ಪ್ರಶ್ನಿಸುವ ಹುಕಿ
ಇರಲೇಬೇಕು.

ಕವಿತೆಗಳು ಸುಮ್ಮನೆ ಹುಟ್ಟುವುದಿಲ್ಲ
ಕಡೆಗೆ ಬರೆಯಲು ಏನು ಇಲ್ಲದಾಗ
ನಿರ್ಲಿಪ್ತತೆಯಾದರು ಆವರಿಸಿಕೊಳ್ಳಬೇಕು.
ನಿರ್ಲಿಪ್ತತೆ ಎನ್ನುವುದು ಇದ್ದು ಸತ್ತಂತ ಸ್ಥಿತಿ.

ಬದುಕಿದ್ದು ಸತ್ತಂತ ಸ್ಥಿತಿಯಾದರೂ ಬೇಕು ಕವಿತೆಗೆ
ಯಾಕೆಂದರೆ....
ಕವಿತೆಗಳು ಸುಮ್ಮನೆ ಹುಟ್ಟುವುದಿಲ್ಲ.

- ಸುಮ ಮಂಜುನಾಥ್

ವಿಡಿಯೋ
ವಿಡಿಯೋ

ಸುಮ ಮಂಜುನಾಥ್

ಸುಮ ಮಂಜುನಾಥ್ ಮೂಲತಃ ಶಿವಮೊಗ್ಗದವರು. ಪ್ರಸ್ತುತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಓದುವುದು, ವೀಣೆ ನುಡಿಸುವುದು ಹಾಗೂ ಕತೆ ಕವನ ಲೇಖನ ಬರೆಯುವಿಕೆ ಅವರ ಹವ್ಯಾಸವಾಗಿದೆ.

More About Author