Poem

ಮಡಿಕೇರಿ ಇದು ಹುಷಾರಾಗಿ ಬನ್ನಿ

ಮಡಿಕೇರಿ ಇದು ಹುಷಾರಾಗಿ ಬನ್ನಿ...
ಮಳೆಗಾಲ ಶುರುವಾಗಿದೆ ಕೊಡೆ ಜೊತೆಗೆ ತನ್ನಿ
ಮೈ ಮನ ನೆನೆಯಲಿ, ತನುವೆಲ್ಲಾ ಶುಚಿಯಾಗಲಿ
ಮೈತಾಕಿದ ಹನಿಗಳು ಚಂದದ ಹಾಡಗಲಿ

ಸುರಿವ ಮಳೆಗೆ ಹೊಸತು ಭಾವ ಬಂದು ಹಸಿರು ಚಿಗುರಲಿ
ಮನ ಮೋಡದ ಮರೆಯಲ್ಲಿ ಅಡಗಿ ಕುಳಿತ ಕವನ ಹಾಡಾಗಲಿ
ಹನಿ ಹನಿ ಸೇರಿ ಸಾಗರ ಸೇರುವ ಮಳೆಹನಿಗಳ ನಾಡಲ್ಲಿ
ಕವಿತೆಗಳ ಸವಿ ಮೈ ಮನ ಸೂರೆಗೊಳ್ಳಲಿ

ಚಂದವಿದು ಮಂದಾರ ಹನಿಗಳ ಮಳೆಗಾಲ ನಮ್ಮೂರಲ್ಲಿ
ಸನ್ನೆ ಮಾಡದೆ ಗಾಳಿ ಬೀಸಿ ,ಮಂಜು ಮುಸುಕಿದ ಮುಂಜಾವಲಿ
ನೇಸರನು ಮರೆಯಾದನು ನಾಚಿ, ಚಳಿ ಮಳೆಯಲಿ
ಹರಿದ ಹನಿಗಳು ನದಿಯಾಗಿ ಹೋಸ ಭಾವ ತರಲಿ

ಸೋನೆ ಮಳೆಯಲಿ ಮಡಿಕೇರಿ ವಧುವಾಗಲಿ
ಮರ ಸಾಲುಗಳು ತಲೆದೂಗಿ ಮಳೆ ತೋರಣ ಕಟ್ಟಲಿ
ಪ್ರಕೃತಿ ಹಸಿರುಟ್ಟು ಆಮಂತ್ರಣ ನೀಡಲಿ,
ನಾವು ನೀವು ಮದುವೆಯ ದಿಬ್ಬಣಕ್ಕೆ ಸಾಕ್ಷಿಯಾಗಲಿ

ಮಳೆ ಜೊತೆಗೆ ನದಿಗಳು ತುಂಬಿ ತುಳುಕಿ ಸಂಗೀತವಾಗಲಿ
ನಮ್ಮ ಕರುನಾಡ ಮನೆ ಮನಗಳಲ್ಲಿ ಹಸಿರು ತುಂಬಲಿ
ಮಳೆಯ ಕಾರಣ ಸವಿದ ಬಿಸಿ ಕಾಪಿ ಹೊಸ ಭಾವ ತರಲಿ
ಬರೆದ ಕವನ ಕವಿತೆಗಳು ಮಳೆಯೊಂದಿಗೆ ಸಮ್ಮಿಲನವಾಗಲಿ.

- ಹೇಮಂತ್ ಪಾರೇರಾ

ವಿಡಿಯೋ
ವಿಡಿಯೋ

ಹೇಮಂತ್ ಪಾರೇರಾ

ಹೇಮಂತ್ ಪಾರೇರಾ ಅವರು ಮೂಲತಃ ಮಡಿಕೇರಿಯ ವಿಶಾಲ್ ನಗರದವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಕವನ ಬರವಣಿಗೆ ಹಾಗೂ ಕವನ ವಾಚನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author