Story

ಮಾತೃಭೂಮಿಯ ಸ್ನೇಹ-ಸಂದೇಶ

ಮಂದಾರ ಅವರು ಮೂಲತಃ ಜಯನಗರದ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಅವರ ಕತೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಪ್ರಸ್ತುತ ಅವರ ‘ಮಾತೃಭೂಮಿಯ ಸ್ನೇಹ-ಸಂದೇಶ’ ಕತೆ ನಿಮ್ಮ ಓದಿಗಾಗಿ...

ಸ್ನೇಹಾ ಕನಾ೯ಟಕದ ಬೆಳಗಾವಿಯ ಹುಡಗಿಯಾದರೂ ಅವಳಪ್ಪ ಮಹೇಶ ಅವಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸಿದ್ದರು. ಶ್ರೀಮಂತ ಮನೆತನದ ಒಬ್ಬಳೇ ಮಗಳು. ಅವಳು ಸ್ವಲ್ಪ ಸ್ವತಂತ್ರ್ಯವಾಗಿಯೇ ವತಿ೯ಸುತ್ತಿದ್ದಳು. ಕನ್ನಡದ ಬಗ್ಗೆಯಾಗಲಿ, ಕನ್ನಡತನದ ಅರಿವು ಕಡಿಮೆಯೇ ಅಂತ ಹೇಳಬಹುದು. ಇದೇ ರೀತಿ ಅವಳು‌ ಮುಂದೆ ಸಾಫ್ಟವೇರ್ ಕೂಡ ಓದಿದಳು. ಅವಳಿಗೆ ಈ ಹೊಸ‌ ಹೊಸ ಲೋಕದ ಆಕಷ೯ಣೆ, ಅಂದದ ಹುಡಗಿ,ಅದರಲ್ಲೂ ಇಂಗ್ಲೀಷ್ ಮಾಧ್ಯಮ ಓದಿದ್ದರಿಂದ ಸ್ವಲ್ಪ ಬುದ್ಧಿ, ಜ್ಞಾನ ಕಡಿಮೆನೆ. ಹೀಗೆ ಅವಳ ಜೀವನದಲ್ಲಿ ಸುಹಾಸ್ ಅನ್ನೋ ವ್ಯೆಕ್ತಿ ಅವಳ ಮನಸ್ಸನ್ನೂ ಕಂಪನಿಯಲ್ಲಿ ಕೆಡಸುವಲ್ಲಿ ಪ್ರಯತ್ನಪಟ್ಟ. ಆದರೆ ಆಕೆಗೆ ನಾನೂ ಸುಸಿಕ್ಷಿತೆ. ಹಾಗೇ ನಾನೂ ಏನೇ ಮಾಡಿದರೂ ಸರಿಯೇ ಎಂದುಕೊಂಡಿದ್ದಳು. ಹಾಗೇ ಸುಹಾಸ್ನ ಸ್ನೇಹ ಬೆಂಗಳೂರಲ್ಲಿ ತಳ ಊರಲೂ ಎರಡೇ ಹೆಜ್ಜೆ ಎಂದು ಅವಳು ಭಾವಿಸಿದಳು.ಅವನೂ ಮಧ್ಯಮ ವಗ೯ದವನಾದ್ರೂ ಶ್ರೀಮಂತನಂತೆ ವತಿ೯ಸುತ್ತಿದ್ದ. ಅವನಿಗೆ ಸ್ನೇಹಾಳಂತ ಒಳ್ಳೆಯ‌ ಶ್ರೀಮಂತ ಮನೆತನ ಹಾಗೂ ಹೆಣ್ಣೆಂದರೆ ಹೇಳಿಕೊಂಡು ಬಿದ್ದಿರಲೂ ಸ್ನೇಹಾ ಹೇಳಿ ಮಾಡಿಸಿದವಳು, ಹಾಗೆಯೇ‌ ಬೇರೆ‌ ಬೇರೆ ಹುಡಗಿಯರ ಜೊತೆ ಅಫೇರ್ ಕೂಡ ಇಟ್ಟುಕೊಂಡಿದ್ದ. ಆ ವಿಷಯ ಪೆದ್ದಿ ಸ್ನೇಹಾಳಿಗೆ ಗೊತ್ತೆಯಾಗಲಿಲ್ಲ. ದಿನೇ ದಿನೇ ಅವರಿಬ್ಬರ ಸ್ನೇಹ‌ ಹತ್ತಿರವಾಗತೊಡಗಿತು. ಆದರೆ ಸುಹಾಸ್ ಗೆ ಹೇಗಾದರೂ ಮಾಡಿ ಒಂದು ದಿನ ಇವಳನ್ನು ಅನುಭವಿಸಬೇಕು ಅಂತ ಹೊಂಚು ಹಾಕಿದ್ದ. ಇನ್ನೇನು ಮಾಚ್೯ 17 ಅವಳ ಹುಟ್ಟುಹಬ್ಬ. ಒಂದು ಸರಿಯಾದ ಸಮಯ ಅಂತ‌ ಹೊಂಚು ಹಾಕಿದ. ಫ್ರೆಂಡ್ಸ‌ ಮುಂದೆ ಅವಳ ಪಾಟಿ೯ನ ಜೋರು ಮಾಡಿದ. ಈ ವಿಷಯ‌ ಸ್ನೇಹಾಳ ತಂದೆತಾಯಿಗೆ ಗೊತ್ತೆಯಿರಲಿಲ್ಲ. ಆದರೆ ಇವಳ ಫೋಟೋಗಳು ಅಮೇರಿಕಾದಲ್ಲಿರುವ ಅವಳ ಸ್ನೇಹಿತೆ ಲತಾಗೆ ಎಲ್ಲಾನೂ ವಾಟ್ಸಪ್ಪನಲ್ಲಿ ಗೊತ್ತಾಗುತ್ತಿತ್ತು. ಈ ಕಡೆ ಲತಾ ಕೂಡ ಬಹುಶ: ತಂದೆತಾಯಿಗಳಿಗೆ ಹೇಳಿದ್ದಿರಬಹುದು ಅಂದುಕೊಂಡಿದ್ದಳು. ಲತಾಳ ಗಂಡ ಅನೀಶ್ ತುಂಬಾ ಹೃದಯವಂತ. ಅಮೇರಿಕಾದಲ್ಲಿ ಒಳ್ಳೆಯ ಬಿಸಿನೆಸ್ಮನ್. ಸ್ನೇಹಾಲತಾರ ಗೆಳೆತನದ ಬಗ್ಗೆ ತುಂಬಾನೇ ಗೊತ್ತಿತ್ತು. ಈ ಕಡೆ ಸುಹಾಸ್ ಅವಳನ್ನು ರಾತ್ರಿ ಫೋನ್ ಮಾಡಿ ಹೋಟೇಲ್ ಒಂದಕ್ಕೆ ಸ್ನೇಹಿತರ ಮುಂದೆ ಪರಿಚಯ ಹಾಗೂ ಎಂಗೇಜಮೆಂಟನ್ನು ಮಾಡಿಕೊಳ್ಳುವುದರ ಬಗ್ಗೆ ಚಚೆ೯ ಮಾಡೋಣ ಅಂತ ಬರಹೇಳಲೂ ಪ್ರಯತ್ನಿಸಿದ. ಆಕೆಗೆ ಅವನ ಬಗ್ಗೆ ತುಂಬಾ ನಂಬಿಕೆ ಇಟ್ಟಿದ್ದೇ ಅಂದು ತಪ್ಪಾಯಿತು. ರೂಂ ಗೆ‌ ಬರತ್ತಾ ಇದ್ದ ಹಾಗೇ ಕತ್ತಲಾಯಿತು ಬಾಗಿಲು ಮುಚ್ಚಿಬಿಟ್ಟ. ಕ್ಷಮಿಸು ಸ್ನೇಹಾ ಕರೆಂಟ್ ಹೋಯ್ತು ಅಂತ‌ ಹೇಳಿದ. ಸ್ನೇಹಾ ನಸುನಕ್ಕಳು.

ಸ್ನೇಹಾ: ಏನಿದು ಸುಹಾಸ್ ಫ್ರೆಂಡ್ಸ ಎಲ್ಲಿ ಅಂತ ಕೇಳಿದಳು.
ಸುಹಾಸ್: ಬೆಳಗ್ಗೆ ಬರುತ್ತಾರೆ ಅಂತ ಹೇಳಿದ. ಅಲ್ಲಿವರೆಗೂ ನೀನೂ ಇಲ್ಲೇ ಇರು ಅಂತ ಹೇಳಿದ.
ಸ್ನೇಹಾ: ಮುಗ್ಧತೆಯಿಂದ ಹೂ ಎಂದಳು. ಅವಳ ನಸೀಬ್ ಚೆನ್ನಾಗಿತ್ತು. ಸುಹಾಸ್ ನಶೆ ಬರೋ ಔಷಧಿನ ತರಲಿಕ್ಕೆ ಹೋದ. ಆಗ ಲತಾಳ ಕರೆ ಬಂತು. ವಿಷಯನಾ ಖುಷಿಯಾಗೇ ಹೇಳಿದಳು. ಆದರೆ ತಾನೂ ಅವನು ಹೋಟೇಲ್ನಲ್ಲಿ ಇರುವುದಾಗಿ ಹೇಳಿದಳು. ಆಗ ಲತಾಗೆ ಷಾಕ್. ಹುಡಗರ ಬುದ್ಧಿ ಬಗ್ಗೆ ಚೆನ್ನಾಗಿ ಹೇಳಿದಳು. ನಿಶ್ಚಿತಾಥ೯ದ ಅಪ್ಪ ಅಮ್ಮನಿಗೇ ಸರ್ ಪ್ರೈಜ್ ಕೊಡುವುವಳಿದ್ದಳು. ವಿಷಯ ಗೊತ್ತಾಗಿ friend in need and freind in deed ಅಂತ ಗೊತ್ತಾಗಿ ಲತಾ ಚೆನ್ನಾಗಿ ಪಾಠ ಮಾಡಿದಳು ಫೋನ್ ನಲ್ಲಿ. ಆಗ ಜಾಗ ಖಾಲಿ ಮಾಡಿದ ಸ್ನೇಹಾ ತನುಶ್ರೀ ಎಂಬ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಳು. ಸುಹಾಸ್ ಈ ಕಡೆ ವಿಚಾರಿಸಿದ. ರಿಸೆಪ್ಷನ್ ಲ್ಲೂ ಕೇಳಿದ. ಅವರೂ ವೇಕೇಟ್ ಮಾಡಿಕೊಂಡು ಹೋದರು ಅಂತ‌ ಹೇಳಿದರು. ಫೋನ್ ಸ್ವಿಚ್ ಆಫ್ ಆಗಿದೆ. ಸುಹಾಸ್ಗೆ ಎಲ್ಲಿಲ್ಲದ ಕೋಪ. ಕೋಪದಲ್ಲಿ ಕಾರ್ ಡ್ರೈವ್ ಮಾಡಿಕೊಂಡು ಹೋಗುವಾಗ ಅಪಘಾತವಾಗಿ ಆಸ್ಪತ್ರೆ ಸೇರಿದ. ಈ ಕಡೆ ಸ್ನೇಹಾ ಲತಾಳ ಜೊತೆ ತನಗಾದ ನೋವು ಮರೆಯಲೂ ಲತಾಳ‌ ಜೊತೆ ಅಮೇರಿಕಾಕ್ಕೆ ಹೋಗಲೂ ಸಿದ್ಧತೆ‌ಮಾಡಿಕೊಂಡು ಹೊರಟಳು.

ಭಾಗ-2

ಈ ಕಡೆ ಸಂದೇಶ ತುಂಬಾ ಅಂದಗಾರ, ಚೆಂದಗಾರ. ಅಮೇರಿಕಾದಲ್ಲಿ ದೊಡ್ಡ ಬಿಸ್ನೆಸ್ ವೆಕ್ತಿಯ‌ ಮನೋಜ ಸರ್ ಮಗ. ಅವನಿಗೆ‌ ಹುಡಗೀರ‌ ಹುಚ್ಚು ಇರಲಿಲ್ಲ. ಆದರೆ ಪ್ರೀತಿ ಮಾಡಿ ಮದುವೆ‌ ಮಾಡಿಕೊಳ್ಳಬೇಕೆಂಬ‌ ಹಂಬಲವಿತ್ತು. ಅದು ಕನಾ೯ಟಕದ‌ ಹೆಣ್ಣನ್ನ. ಯಾಕೆಂದರೆ ಅವಳ‌ ತಾಯಿ ಭುವನಾ ಅಪ್ಪಟ ಕನ್ನಡತಿ. ಮನೆಯ‌ ತುಂಬಾ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ್ ಕಾರಂತ‌ ಎಲ್ಲರೂ ಮನೆಮಾತಾಗಿದ್ದರು. ಇವರ ಮನೆ ಕನ್ನಡ ಹಂಪಿಯ ದೇವಾಲಯವನ್ನು ಹೋಲುವ‌ ಮನೆಯಂತಿತ್ತು. ಇವನ ಆಸ್ತಿಗಾಗಿ ಅಮೇರಿಕಾದಲ್ಲಿ ಸುಮಾರು ಹುಡಗೀರೂ ಇವನ ಹಿಂದೆ ಬಿದ್ದರು. ಆದರೂ ಕನಾ೯ಟಕಕ್ಕೆ ಹೋಗಿ ಒಂದು ಹುಡಗಿಯನ್ನು ನೋಡಿ ಬರಲೂ ನಿಧ೯ರಿಸಿದರು. ಊರು ಗಂಡು ಮೆಟ್ಟಿದ ನಾಡು ಬೆಳಗಾವಿ.ಅಪ್ಪ ಅಮ್ಮ ಮುಂಚೆನೆ ಹೋಗಿದ್ದರು. ಆದರೆ ಸಂದೇಶ್ ಗೆ ಅವರ ಜೊತೆ‌ ಹೋಗಲಾಗಲೇ ಇಲ್ಲ. ಈ ಕಡೆ ಸ್ನೇಹಾ ಅಮೇರಿಕಾಕ್ಕೆ ಇಳಿಯುವುದಕ್ಕೂ ಸಂದೇಶ ಅಪ್ಪಾ ಅಮ್ಮನ ಅದೇ ಏರ್ ಪೋಟ್೯ನಲ್ಲಿ ಬಿಟ್ಟು ಬರಬೇಕಾದರೆ ಒಬ್ಬ ಫ್ರೆಂಡ್ನು ಸ್ವಗತಿಸಬೇಕಾಗಿತ್ತು, ಆದರೆ ಆ ಪ್ಲೈಟ್ 4 ತಾಸು ಲೇಟಾಗಿ ಬರುವುದಾಗಿ ತಿಳಿಯಿತು. ಅಲ್ಲೇ ಕಾಯುತ್ತಾ ಕುಳಿತರು. ಈ ಕಡೆ ಸ್ನೇಹಾ ಸಂದೇಶ್ ಪಕ್ಕದಲ್ಲೇ ಕುಳಿತು ಲತಾ ತನ್ನನ್ನು ರಿಸೀವ್ ಮಾಡಿಕೊಳ್ಳಲೂ ಬರಲೂ ಹೇಳಿದ್ದರಿಂದ ಕಾಯುತ್ತಾ ಕುಳಿತಿದ್ದಳು. ದಾರಿಯಲ್ಲಿ ಲತಾಳ ಕಾರ್ ಕೆಟ್ಟಿದ್ದರಿಂದ 2 ಗಂಟೆ ತಡವಾಗಬಹುದು ಅಂತ ಕಾಲ್ ಬಂದಿದ್ದರಿಂದ ಸ್ನೇಹಾ ಏರ್ ಪೋಟ್೯ನಲ್ಲೇ ಕಾಯಬೇಕಾಯ್ತು. ಸ್ನೇಹಾ ಸಂದೇಶ್ ಪಕ್ಕದಲ್ಲೇ ಕುಳಿತು ಅಮ್ಮನಿಗೆ ಕಾಲ್ ಮಾಡ್ತಾ " ಅಮ್ಮಾ ಕನಾ೯ಟಕ ನನಗೆ‌ ಮೋಸ ಮಾಡಿಬಿಡ್ತು, ಕನ್ನಡದ ಹುಡುಗರೇ ಸರಿ ಇಲ್ಲ, ನಾನೂ ಅಮೇರಿಕಾದಲ್ಲಿ ಒಂದಷ್ಟು ದಿನ ಕಳೆದು ಬರುವೆ. ಬಂದ ತಕ್ಷಣ‌‌ ನೀನೂ ಯಾರನ್ನೇ ತೋರಿಸಿದರೂ ಮದುವೆಯಾಗುವೆ ಅಂತ‌ ಅಳುತ್ತಾ ಕುಳಿತಿರುವುದನ್ನು ನೋಡಿ‌ ಸಂದೇಶ ಅತ್ಯಂತ ಕಾಳಜಿಯಿಂದ ವಿಚಾರಿಸಿಕೊಂಡ. ಅವನೂ ಲತಾಳ ಅಡ್ರೆಸ್ ಕೊಟ್ಟರೆ ತಲುಪಿಸುವುದಾಗಿ ಹೇಳಿದ. ಕಾರ್ ಬುಕ್ ಮಾಡಿ ಬರಲೂ‌ ಬೇಡ ಅಂತ‌ ಲತಾ ಸ್ನೇಹಾಗೆ ಹೇಳಿದ್ದಳು. ಸ್ನೇಹಾ ಈಗಾಗಲೇ ಹುಡಗರ ವಿಷಯದಲ್ಲಿ ಗರಂ ಇದ್ದಳು. ಸಂದೇಶ್ ಗೆ ಅವಳು ಹಿಂದೆ ಮುಂದೆ ನೋಡದೆ ಛೀ ಮಾರಿ ಹಾಕತೊಡಗಿದಳು. ಹೀಗಾಗಿ ಅಲ್ಲಿಂದ ಸಂದೇಶ ಜಾಗ ಖಾಲಿ ಮಾಡಿದ. ಇವಳೂ ಲತಾನ ಮನೆ‌ ಸೇರಿದಳು. ಆಗ ಅವಳಿಗಾದಷ್ಟೂ ಸಂತೋಷ ಹೇಳಕಾಗದೇ ಇರುವಷ್ಟು. ಅದೃಷ್ಠವಷಾತ್ ಲತಾಳ ಮನೆ ,ಸಂದೇಶನ ಮನೆ ಅಪಾಟ್೯ಮೆಂಟ್ ಎರಡೂ ಎದರು ಬದರು ಇದ್ದವು. ಒಮ್ಮೊಮ್ಮೆ ಭೇಟಿ ಯಾಗತೊಡಗಿಸಿತು ಸಂದಭ೯.ಸ್ನೇಹಾ ಮಾತ್ರ ಗುರ್ರ ಅಂತ ಇದ್ದಳು. ಒಮ್ಮೆ ಸ್ನೇಹಾ ಷಾಪಿಂಗ್ ಗೆ ಹೋದಾಗ ಪುಂಡರ ಅವಳ‌ ಮೇಲೆ ಧಾಳಿ ಮಾಡಿದರು. ಆಗ ಸಂದೇಶ ಕಣ್ಣಿಗೆ ಬಿದ್ದದ್ದೇ ತಡ ಫೈಟ್ ಮಾಡಿ ಮನೆಗೆ ಕರೆದುಕೊಂಡು ಬಂದ. ಈ ಕಡೆ ತಾಯಿ ಭುವನಾ ಹೇ ಸಂದೇಶ್ ಬೇಗ ಮನೆಗೆ ಬಾರೋ ಊರಿಗೆ‌ ಬಾರೋ ಅಂತ ಹೇಳ್ತಾ ಇದ್ದರು. ತವರಿಗೆ ತುಂಬಾ ದಿನದ ನಂತರ ಬಂದಿದ್ದ ಮಗಳನ್ನು ತಂದೆ ಕೃಷ್ಣ ಅವರು ಬಿಡಲೇ ಇಲ್ಲ. ಹೀಗಾಗಿ ಒಂದು ವಾರ, ಎರಡು ವಾರ ಕಳೀತಾನೇ ಇತ್ತು. ಮನೋಜ್ ತಂದೆ ಬೆಳಗಾವಿಯಲ್ಲಿ ತಮ್ಮ ಒಂದು ಬಿಸಿನೆಸ್ ತೆರೆಯಲು ಸೈಟ್ ಹುಡುಕಾಟದಲ್ಲಿದ್ದರು.

ಭಾಗ-3

ಲತಾ ಆಫೀಸ್ನಿಂದ ರಾತ್ರಿ ಬರುವುದಾಗಿ ಹೇಳಿದ್ದರು.ಈ ಕಡೆ ಸ್ನೇಹಾ ತಲೆಗೆ ಹೇಟು ಸಣ್ಣದಾಗಿ ಬಿದ್ದಿದ್ದರಿಂದ ಅಮ್ಮನ ಕೋಣೆಯಲ್ಲೇ ಮಲಗಿಸಿದ್ದ. ಎದ್ದಾಗ ಸ್ನೇಹಾಗೆ ಆಶ್ಚಯ೯.ಎಲ್ಲೆಂದರಲ್ಲಿ ಕನ್ನಡದ ಫೋಟೋ,ಹಾಡುಗಳು ಮೆಲ್ಲಗೆ ಪಿಸುಗುಡುವುವ ಹಾಡುಗಳು ಒಂದು ಕ್ಷಣ ಕೋಪ ಉಕ್ಕಿ ಬಂತು. ಆದರೆ‌ ಸಂದೇಶ ಸಹನೆ ಮೀರಲಿಲ್ಲ. ಆ ಕ್ಷಣಾನೇ ಒಬ್ಬ ಕೌನ್ಸಲರ್ ಹತ್ತಿರ ಕರೆದುಕೊಂಡು ಹೋಗಬೇಕೆಂದುಕೊಂಡ. ಆದರೆ ಅವಳು ಅವನನ್ನು ನಂಬುವ ಹಾಗೆ ಇರಲಿಲ್ಲ. ಅದಕ್ಕೆ ಸುಮ್ಮನಾದ.ಆದರೆ ಕನ್ನಡ, ಕನ್ನಡತನದ ಬಗ್ಗೆ ಆಕೆಗಿರುವ ಸಂಶಯಗಳನ್ನು ಹೋಗಲಾಡಸಲೇ ಬೇಕು ಅಂತ ತೀಮಾ೯ನ ಮಾಡಿದ. ಆಕೆಗೆ ಅವನ ಅಮ್ಮನ ಎಲ್ಲಾ ಜ್ಞಾನನಾ ಒಟ್ಟಾಗಿಸಿದ.ಕನ್ನಡವೆಂದರೆ ಬದುಕಿಗೆ ನಂಬಿಕೆ. ಸಹೃದಯಿತನ.ಜೀವಂತಿಕೆ. ಹೀಗೆ ಎಲ್ಲಾನೂ ವಿವರಣೆ ಕೊಡುತ್ತಾ ಹೋದ. ಕೇಳುತ್ತ ಕೇಳುತ್ತ‌ ಮಂತ್ರ ಮುಗ್ಧಳಾದಳು. ಕನ್ನಡ ತಾಯಿ ಭುವನೇಶ್ವರಿಯ ಸಾಕ್ಷಾತ್ ಕಂದಮ್ಮಳಂತೆ ಕೇಳುತ್ತ ಕೇಳುತ್ತ ಅವನ ತೊಡೆಯ ಮೇಲೆ ಮಲಗಿಕೊಂಡಳು. ಅಲ್ಲಿ ಶುರುವಾಯಿತು ನೋಡಿ ಅವರಿಬ್ಬರ ಸ್ನೇಹ. ಅಮೇರಿಕಾದಲ್ಲಿರುವ ಕನ್ನಡ ಬಳಗ ಸೇರಿಕೊಂಡಳು, ಹತ್ತು ಹಲವಾರು ವಿಷಯ‌ ತಿಳಿದುಕೊಂಡಳು. ಇವೆಲ್ಲಾ ವಿಚಾರಗಳು ಲತಾ ಸ್ನೇಹಾಳ ತಂದೆ ತಾಯಿಗೆ ತಿಳಿಸುತ್ತಿದ್ದಳು. ಹಾಗೆಯೇ ಅವಳಿಗೆ ಕನ್ನಡದ ಬಗ್ಗೆ ಮಿಂಚಿನ ಸಂಚಾರವಾಯಿತು.

ಭಾಗ-4

ಸುಮಾರು ಎರಡು ತಿಂಗಳ‌ ನಂತರ ಅವಳು ಊರಿಗೆ ಹೋದಳು. ತರಾತುರಿಯಲ್ಲಿ ಅವಳು ಕನಾ೯ಟಕದ ಬೆಳಗಾವಿಯವಳು ಅನ್ನೋ ವಿಚಾರ ಕೇಳದೆ ಹೋಗಿದ್ದನು ಸಂದೇಶ. ಸಂದೇಶ ಆಕೆಯನ್ನೇನು ಕಳುಹಿಸಿಕೊಟ್ಟ. ಆದರೆ ಆಕೆ ಅಮೇರಿಕದಿಂದ ಹೋದಾಗಿನಿಂದ ಅವನಿಗೆ ತಳಮಳ. ಈ ಕಡೆ ಸ್ನೇಹಾಗೂ ತಂದೆತಾಯಿನ ಭೇಟಿ ಮಾಡಿ ಎಕಾಂತದಲ್ಲಿದ್ದಾಗ ಸಂದೇಶನನ್ನು ನೆನಿಸಿಕೊಳ್ಳುತ್ತಿದ್ದಳು. ಫೋನ್ ಸಹವಾಹ ಬೇಡವಾಗಿತ್ತು. ಈ ಕಡೆ ಸಂದೇಶ್ ತಂದೆ ತಾಯಿನ ನೋಡಲು ಬೆಳಗಾವಿಗೆ ಬಂದನು. ಬಂದು ಈ ರೀತಿ ಅಂತ ಹೇಳಿದ. ಆಗ ಅಮ್ಮ ಭುವನಾಗೆ ಆಶ್ಚಯ೯. ಹಾಗೋ ಹೀಗೋ ಲತಾಳಿಂದ ಅವರ ನಂಬರ್ನ ತೆಗೆದುಕೊಂಡು, ಅವರ ಮನೆಗೆ ಭೇಟಿ ನೀಡಿದ್ದು ಆಯಿತು. ಹೀಗೆ ಮಹಾ ಸಮ್ಮೀಲನದಂತೆ ಜೊತೆಯಾದ ಸ್ನೇಹ ಸಂದೇಶನನ್ನು ನೋಡಿ ತನ್ನ ಪ್ರೀತಿಯನ್ನು ಹೇಳಿದರೆ ಅವನು ನನ್ನ ಬಗ್ಗೆ ಅಸಹ್ಯ ಪಡಬಹುದು ಅಂತ‌ ಮನಸ್ಸಲ್ಲೇ ಕೊರಗಿದಳು. ಆದರೆ ಸಂದೇಶಗೆ ಸ್ನೇಹಾಳ‌ಬಗ್ಗೆ ಪ್ರೀತಿ ಮೂಡಿತ್ತು, ತಾಯಿಗೆ ತಿಳಿಸಲೋ ಬೇಡವೋ ಎನ್ನುವುದು.ಹೀಗೆ ಇವೆರಡರ ಮನೋಜ ಸಂಸಾರ ದೀಡಿರನೆ ಮಧ್ಯ ಅಣ್ಣನ ಮಗಳ‌ ಮದುವೆ ನಿಶ್ಚಯವಾಯಿತು. ಮದುವೆಯಲ್ಲಿ ಭುವನಾ ಸಂದೇಶ ಎಲ್ಲರ ಮಧ್ಯೆ, ಕರುನಾಡ ತಾಯಿ ಅಂತ ಹಾಡು ಹಾಡಿ ಸಂಭ್ರಮಿಸುತ್ತಿದ್ದ ಸ್ನೇಹಾ ತನ್ನ ಜೊತೆ ತಂದೆ-ತಾಯಿನಾ ನೋಡಿದರು. ಅಲ್ಲಿ ಸಂದೇಶ ಸ್ನೇಹಾ ಮಾತುಕತೆಗಿಳಿದಾಗ ತಾಯಿ ಭುವನಾ ಯಾರಿವಳು ಎಂದು ಕೇಳಿದರು.ವಿಷಯ ತಿಳಿದು ಖುಷಿಯಾಯಿತು. ಆದರೆ ಭುವನಾ ಇವಳು ಕನ್ನಡದ ಬಗ್ಗೆ ಆಸಕ್ತಿಯಿಲ್ಲದ ಕಥೆ ಕೇಳಿದ್ದು, ಈ ಹಾಡನ್ನು ಹಾಡುತ್ತಿದ್ದುದು ಸ್ವಲ್ಪ ಗಲಿಬಿಲಿ ಆದರು. ಸಂದೇಶ ಕೂಡ ತಾಯಿಗೆ‌ ಹೇಗೆ ಹೇಳೋದು ಅಂತ‌ ಸುಮ್ಮನಾದರು. ಅವರಿಬ್ಬಳ ಆ ಸೆಳೆತ,ಮೋಹ‌ ಮುಂದುವರೆದೇ ಇತ್ತು. ಒಂದು ಸಾರಿ ಅಖಿಲ ಕನಾ೯ಟಕ ಕನ್ನಡ ಸಂಘದಲ್ಲಿ ಸ್ನೇಹಾ ಮತ್ತೆ ಭುವನಾಳ ಮತ್ತೆ ಸೇರಿದರು. ಸ್ನೇಹಾಳ ಕನ್ನಡದ ನಿರೂಪಣೆ, ಲವಲವಿಕೆ, ಅಪ್ಪಟ ಕನ್ನಡಕ್ಕಾಗಿ ಹೋರಾಟ ನಡೆಸಿ ಪ್ರಶಸ್ತಿ ಕೂಡ ತೆಗೆದುಕೊಂಡಿದ್ದಳು. ಆಗ ಭುವನಾ ಯೋಚಿಸಿ ಆಕಸ್ಮಾತ್ ಇವರಿಬ್ಬರೂ ಮದುವೆಯಾದರೆ ಕನಾ೯ಟಕದಲ್ಲಿ ಎಂತೆಂತಹ ಕೆಟ್ಟ ಬದಲಾವಣೆಗಳನ್ನು ತಿದ್ದಬಹುದು ಎಂದೆಲ್ಲಾ ಯೋಚನೆ‌ ಮಾಡಿದರು. ಆಗ ಇದೇ ಸರಿಯಾದ ಹುಡಗಿ ಎಂದು ನಿಶ್ಚಯ ಮಾಡಿದರು. ಸ್ನೇಹಾ ಸಂದೇಶ ಈಗ ಮಿಲನವಾದರು. ಹಾಲು-ಜೇನು ಒಂದಾದಂತೆ ಒಂದಾದರು. ಸಂದೇಶ್ ಗೆ ಒಂದು ಕಡೆ ಪ್ರೀತಿ ಮಾಡಿ ಮದುವೆಯಾಗಬೇಕು, ಕನ್ನಡದ ಹುಡಗಿನಾ ಮದುವೆಯಾಗಬೇಕು ಎರಡು ಕೈಯಲ್ಲಿ ಇದ್ದ ಸಂತೋಷ ಹೇಳತೀರದು. ಬಿಗಿದಪ್ಪಿ‌ಹೇಳಿದ " ಓ ನನ್ನ ಕನ್ನಡದ ಸ್ನೇಹ ಸಿಂಧೂ " ಜೊತೆಯಾಗೂ,ಬೆಳಕಾಗೋಣ ಕನ್ನಡನಾಡಿಗೆ ಅಂಣ ಹೇಳಿದರೆ. ಸ್ನೇಹ " ಓ ನನ್ನ ಸಂದೇಶ ಕನ್ನಡದ ಸುಸಂದೇಶ, ನೀಡು ನೀಡೋಣ ನಾಡಿಗೆ ಉತ್ತಮ ಸಂದೇಶ". ಹೀಗೆ ಜೊತೆಯಾದ ಸ್ನೇಹ‌ಸಂದೇಶರ ಪ್ರೇಮ ಕನ್ನಡ ನಾಡೇ ಮೆಚ್ಚುವಂತಿತ್ತು. ಅವರಿಬ್ಬರ ಮಿಲನಕ್ಕೆ ಕರುನಾಡು ತಲೆಬಾಗಿತು. ನ್ಯೂಸ್ ಚಾನೆಲ್ ದವರು ಇವರಿಬ್ಬರ ಸಂದಶ೯ನ ಮಾಡಿದಾಗ ಪುಟ್ಟ ಹೆಣ್ಣು ಮಗು ಕೈಯಲ್ಲಿತ್ತು ಹೆಸರು "ಕನ್ನಡ". ಹೀಗೆ ಮಾತೃಭೂಮಿಯ ಸ್ನೇಹ-ಸಂದೇಶವಾದಳು. ಸಂದೇಶನು ಸ್ನೇಹಾಳಲ್ಲಿ ಕನ್ನಡಮಯವಾದನು. ಮುಂದೆ ಕನಾ೯ಟಕದ ಭಾಷೆ ಅಭಿಯಾನ,ಯುವಕರ ಮಾತೃಭಾಷೆಯ ಸಂಸ್ಕ್ರತಿಯ‌ಅಭಿಯಾನ, ಮನೆಮನೆಗೂ ಉಚಿತ ಕನ್ನಡ ತರಬೇತಿ, ಉಚಿತ ಪ್ರವಾಸ‌ ಹೀಗೆ‌ ಹತ್ತು ಹಲವಾರು ಕಾರ್ಯಗಳನ್ನು ಮಾಡಿದರು. ಈ ಸಂದಭ೯ದಲ್ಲಿ ಒಬ್ಬ‌ ಹುಚ್ಚ ಭಿಕ್ಷೆ‌ಬೇಡಲೂ ಬಂದ ಅವನ ಗುರುತು ಕೇವಲ ಸ್ನೇಹಾಳಿಗೆ ಮಾತ್ರ ಸಿಕ್ಕಿತು.

- ಮಂದಾರ.

ಮಂದಾರ

ಮಂದಾರ ಅವರು ಮೂಲತಃ ಜಯನಗರದ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಅವರ ಕತೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.

More About Author