Poem

ಮುಳ್ಳಿನ ನೋಟ

ಗಂಡನಿಲ್ಲದೆ ಗುಹೆಯೊಳಗೆ ಹ್ಯಾಂಗಿರಲವ್ವ
ನಂದೊಂಚೂರು ತಪ್ಪಿಲ್ಲ ಒಪ್ಪಲ್ಯಾಂಗವ್ವ

ಬೆಳಗು ಬರದ ಇರುಳಲ್ಲವ್ವ
ನಿದಿರೆ ಇರದೆ ಸೊರಗಿದೆನವ್ವ
ನಿಂದೆ ಮಾತಿಗೆ ಬೆದರಿದೆನವ್ವ
ಮಂದಿ ಮುಖವ ನೋಡಿಲ್ಲವ್ವ

ಕೆಟ್ಟ ದೃಷ್ಟಿ ಬಿದ್ದಿತು ಮೈಮೆಲವ್ವ
ಚರ್ಮದ ಹೊದಿಕೆ ಕೆಂಪಗವ್ವ
ಕೆಂಜಗ ಮೈಗೆ ಬೆಂಕಿ ತಾಗೈತವ್ವ
ನೋಡೋರೊಳಗ ಹ್ಯಾಂಗಿರಲವ್ವ

ಮಾತು ಬಾಳ ಮೆತ್ತಗೈತವ್ವ
ಮನಿಸಿಗೆ ಬಾಳ ನಟ್ಟೈತವ್ವ
ಬಂಧು ಬಳಗದ ಅರಿವಿಲ್ಲವ್ವ
ಮತಿಹೀನರಲ್ಲಿ ಹ್ಯಾಂಗಿರಲವ್ವ

- ಹನುಮಂತ ಸೋಮನಕಟ್ಟಿ

ಹನುಮಂತ ಸೋಮನಕಟ್ಟಿ

ಹನುಮಂತ ಸೋಮನಕಟ್ಟಿ ಅವರು ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕಾವ್ಯ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author