Story

ಮೂರು ತಾಸಿನ ಕನಸು

ಕತೆಗಾರ, ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಆಸಕ್ತಿ ಕ್ಷೇತ್ರವಾಗಿದ್ದು, ಪ್ರಸ್ತುತ ಅವರು ಬರೆದಿರುವ ʻಮೂರು ತಾಸಿನ ಕನಸು' ಕತೆ ನಿಮ್ಮ ಓದಿಗಾಗಿ.

ಸಚಿನ್ ತನ್ನ ರೂಮ್ ನಿಂದ ಹೊರಡುವ ಹೊತ್ತಿಗೆ ತುಂತುರು ಮಳೆ ಶುರುವಾಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ತನ್ನ ರೂಮಿನಿಂದ ಐದು ನಿಮಿಷ ನಡಿಗೆಯ ದೂರದಲ್ಲಿದ್ದುದ್ದರಿಂದ ಆರಾಮ ನಡೆದರಾಯಿತು ಎಂದುಕೊಂಡಿದ್ದ. ಅನೇಕ ದಿನಗಳಿಂದ ತನ್ನ ಊರಿಗೆ ಹೋಗಿಲ್ಲ ಕಾರಣ ತೂಕದ ಬ್ಯಾಗುಗಳನ್ನು ಸಿದ್ಧ ಮಾಡಿಕೊಂಡು ಹೊರಗೆ ಬಂದು ನಿಂತ. ಮೂರು ಗಂಟೆಯ ಪ್ರಯಾಣ ರೈಲು ತಪ್ಪಿದರೆ ಮತ್ತೆ ಕಾಯುವುದು ಯಾರು ಎಂದು ತನ್ನ ಬೆನ್ನಿಗೆ ಬ್ಯಾಗನ್ನು ಹಾಕಿಕೊಂಡು ರೈಲು ನಿಲ್ದಾಣದ ಕಡೆಗೆ ಹೊರಟೇ ಬಿಟ್ಟ.

ತುಂತುರು ಮಳೆಯಲ್ಲಿ ತನ್ನ ಬ್ಯಾಗನ್ನು ಹಾಕಿಕೊಂಡು ನಿಲ್ದಾಣದ ಒಳಗೆ ಬಂದ. "ವಿಶ್ವಮಾನವ ರೈಲು ಕೆಲವೇ ನಿಮಿಷಗಳಲ್ಲಿ ಎರಡನೆಯ ಪ್ಲಾಟ್ ಫಾರ್ಮ್ ನಿಂದ ಹೊರಡಲಿದೆ" ಎಂಬ ಶಬ್ದವು ಆತನ ಕಿವಿಗೆ ಬಿತ್ತು. ಅವಸರದಲ್ಲಿ ನಡೆದು ತನ್ನ ಸೀಟು ಹುಡುಕಿ ಕುಳಿತುಕೊಂಡು ಮುಖ ಒರಸಿಕೊಂಡ. ಸ್ವಲ್ಪ ಹೊತ್ತು ಹೊರಗೆ ನೋಡುತ್ತಿದ್ದಂತೆ ರೈಲು ಹೊರಟೆ ಬಿಟ್ಟಿತು. "ಕೊನೆಗೂ ಊರಿನ ಕಡೆಗೆ ಹೊರೆಟನಲ್ಲ" ಎಂದು ತನ್ನ ಮನಸ್ಸಿನಲ್ಲಿ ಹೇಳಿಕೊಂಡ. ಈ ರೈಲು ಗಾಡಿಯಲ್ಲಿ ಹೆಚ್ಚಿನ ಜನರು ಇರಲಿಲ್ಲ. ಮೂರು ಗಂಟೆಯ ಪಯಣವನ್ನು ಕತೆ, ಕವನಗಳನ್ನು ಬರೆದು ತನ್ನ ಬ್ಯಾಗಿನಿಂದ ವಸ್ತುಗಳನ್ನು ತೆಗೆದುಕೊಂಡ. ಆತನಿಗೆ ಅನೇಕ ದಿನಗಳಿಂದ ಬರೆಯಲು ಸಮಯ ಸಿಗದೇ ಈ ಪಯಣದಲ್ಲಿ ಬರವಣಿಗೆ ಮಾಡೋಣ ಎಂದು ತನ್ನ ಬರಹವನ್ನು ಆರಂಭಿಸಿದನು.

ಈತನು ಹಾಸನದ ಮಲೆನಾಡು ತಾಂತ್ರಿಕ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಕೆಲಸದ ಒತ್ತಡದಿಂದ ಅವನ ಬರಹಗಳಿಗೆ ಸಮಯ ಸಿಗದ ಕಾರಣ ಹೀಗೆ ಒಂದು ಕವನನಾದರೂ ಬರೆದು ಮುಂದಿನ ಕವಿಗೋಷ್ಠಿಯಲ್ಲಿ ವಾಚನ ಮಾಡಿನೋವೆಂದು ತನ್ನ ಬರವಣಿಗೆ ಪ್ರಾರಂಭಿಸಿದ. ರೈಲುಗಾಡಿಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕೆಂಗೇರಿಗೆ ಬಂದು ತಲುಪಿತು ಈ ನಿಲ್ದಾಣದಲ್ಲಿ ತುಂಬಾ ಜನ ಹತ್ತಿದರು ಭೋಗಿಯ ತುಂಬಾ ಜನವೋ ಜನ.

ಅಮ್ಮ ಮದುವೆಯ ವಿಷಯವನ್ನು ಕರೆ ಮಾಡಿ ಬೇಗ ಮದುವೆಯಾಗಿ ಎಂದು ಹೇಳುತ್ತಿರುವ ವಿಷಯದ ಮೇಲೆ ಒಂದು ಕವನ ಬರೆಯೋಣ ಎಂದುಕೊಂಡು ಕವನವನ್ನು ಬರೆಯಲು ಆರಂಭಿಸಿದನು. ಕವನಕ್ಕೆ ಬೇಕಾಗುವ ಸಾಲುಗಳನ್ನು ಜೋಡಿಸುತ್ತಿರುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ತನ್ನ ಮಗಳ ಜೊತೆಯಲ್ಲಿ ಬಂದು ಎದುರಿನ ಸೀಟಿನಲ್ಲಿ ಕುಳಿತು ಇತರ ಬ್ಯಾಗುಗಳನ್ನು ಜೋಡಿಸುತ್ತಿದ್ದರು.

"ಕೊಡಿ, ನಾನೇ ಇಡುತ್ತೇನೆ" ಎಂದು ಅವರ ತೂಕದ ಬ್ಯಾಗುಗಳನ್ನು ತೆಗೆದುಕೊಂಡು ಸೀಟಿನ ಮೇಲೆ ಇರುವ ಮನಗೂವ ಜಾಗದಲ್ಲಿ ಸಾಹಸಭೀಮನ ಹಾಗೆ ಮೇಲೆ ಏರಿ ಅವರ ಬ್ಯಾಗುಗಳನ್ನು ಜೋಡಿಸಿ, ಕೆಳಗೆ ಇಳಿದು ಬಂದೇ. ಆ ಹುಡುಗಿ ಮುಗುಳುನಗೆ ನೀಡದೆ ಹಿಂದೆ ಸರಿದು ನಿಂತಳು. ಆಕೆಯ ತಂದೆ "ಥ್ಯಾಂಕ್ಸ್" ಹೇಳಿದರು. ಭೀಮನಿಗೆ ಯಶಸ್ಸು ಸಿಕ್ಕಾಗ ಆತನು ಆಚರಣೆ ಮಾಡುವ ಹಾಗೆ ಕೃತಜ್ಞತೆಯನ್ನು ಸ್ವೀಕರಿಸಿಕೊಂಡು ತನ್ನ ಜಾಗದಲ್ಲಿ ಕುಳಿತುಕೊಂಡ.

ಕವನ ಮುಂದೇನು ಎಂದು ಯೋಚಿಸುತ್ತಿರುವ ಸಮಯದಲ್ಲಿ ಆಕೆಯ ತಂದೆ "ಸಿಹಿ, ಹೋಗಿ ಕೈ ತೊಳೆದುಕೊಂಡು ಬಾ, ತಿಂಡಿ ಮಾಡುವೆ" ಎಂದರು. ಅವರ ಮಾತುಗಳನ್ನು ಕೇಳಿದ ನಂತರ ಆಕೆಯ ಹೆಸರು ಸಿಹಿ ಎಂದು ತಿಳಿಯಿತು. ಸಿಹಿಯು ಕುಳ್ಳಗೆಯೂ ಅಲ್ಲದ ತೆಳ್ಳಗೆ

ನೋಡಲು ಸುಂದರವಾಗಿ ಇದ್ದಳು. ಆಕೆ ವಾಶ್ ರೂಮಿಗೆ ಹೋಗಿ ಕೈ ತೊಳೆದುಕೊಂಡು ತನ್ನ ತಂದೆ ನೀಡಿದ ಉದ್ದಿನ ವಡೆಯನ್ನು ತಿನ್ನಲು ಪ್ರಾರಂಭ ಮಾಡಿದಳು.

ರೈಲು ಗಾಡಿಯ ಶಬ್ದ ಮಾಡಿಕೊಂಡು ಕಾಡು, ಗುಡ್ಡ, ಬೆಟ್ಟ, ನದಿ, ಗದ್ದೆಗಳ ಮಾರ್ಗವಾಗಿ ಓಡಾಡುತ್ತಿತ್ತು. ತಂದೆ ನೀಡಿದ ತಿಂಡಿಯನ್ನು ತಿಂದು ಕೈ ತೊಳೆದುಕೊಂಡು ಬಂದಳು. ಅಷ್ಟರಲ್ಲಿ ಆಕೆಯ ತಂದೆ ಚೀಟಿನ ಉದ್ದಕ್ಕೂ ಮಲಗಿದ್ದರು ಈಕೆ ತನ್ನ ಬ್ಯಾಗಿನಲ್ಲಿ ಇದ್ದ ಪುಸ್ತಕವನ್ನು ತೆಗೆದು ಓದಲು ಆರಂಭಿಸಿದಳು.

ಆಕೆಯನ್ನು ನೋಡುತ್ತಾ ಕುಳಿತಿದ್ದ ಸಚಿನ್ ಮತ್ತೆ ಬರೆಯವಣಿಗೆಯನ್ನು ಮುಂದುವರಿಸಿದ. ಆತನಿಗೆ ಒಂದು ಸಾಲು ಕೂಡ ಮನಸ್ಸಿನಲ್ಲಿ ಬರುತ್ತಿರಲಿಲ್ಲ, ತನ್ನ ಕಣ್ಣುಗಳಿಂದ ಮತ್ತೆ ಆಕೆಯನ್ನು ನೋಡಲು ಆರಂಭಿಸಿದ. ಈತನ ನೋಟಕ್ಕೆ ಅವಳು ಮಂದಹಾಸ ನೀಡಿದಳು. ಕಣ್ಣಂಚಿನಿಂದ ಅವಳು ಓದುವ ಪುಸ್ತಕದ ಮುಖ್ಯ ಪುಟವನ್ನು ಓದಿದ. "ಸಿಹಿಯ ಮುತ್ತುಗಳು" ಸಿಸಿತೆಯನ್ನು ಸುಲಭವಾಗಿ ಓದಿದ. ಚಿಕ್ಕ ಅಕ್ಷರಗಳಿಂದ ಹೆಸರನ್ನು ಪ್ರಯತ್ನ ಪೂರ್ವಕವಾಗಿ "ಸಿಹಿ ಎಂ.ಸಿ" ಎಂದು ಓದಿಕೊಂಡು, "ಓ ಇದು ಇವಳದೇ ಪುಸ್ತಕವಿರಬೇಕು... ನಾನು ಏನನ್ನೂ ಬರೆಯುತ್ತಿದ್ದೀನಲ್ಲಾ ಆತನು ನನ್ನ ಪುಸ್ತಕ ನೋಡಲ್ಲಿ ಎಂದು ಹಾಗೆ ಕುಳಿತಿರಬೇಕು... ಈ ಪುಸ್ತಕವು ಕಳೆದ ವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಿಡುಗಡೆ ಆಗಿರುವ ಪುಸ್ತಕ. ಸಿಹಿ ಎಂದರೆ ಯಾರು ಆಂಟಿ ಎಂದಿಕೊAಡಿದೆ, ಇವಳು ಎಳಸು ಹುಡುಗಿ. ಆ ದಿನ ಆಕೆ ಅವಳ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಾರದೇ ನನ್ನಗೆ ಯಾರು ಈ ಲೇಖಕಿ ಎಂದು ಕಾಡುವ ಹಾಗೆ ಮಾಡಿದಳು. ಈ ದಿನ ಆಕೆ ನನ್ನ ಮುಂದೆ ಕುಳಿತಿದ್ದಾಳೆ. ಈಕೆ ಎಳಸು ಹುಡುಗಿ" ಎಂದು ಮನಸ್ಸಿನಲ್ಲಿ ಯೋಚಿಸಿಕೊಂಡ.

ಅಷ್ಟರಲ್ಲಿ ಮೊಬೈಲ್ ಶಬ್ದ ಮಾಡಿತು. ಅವನು ಕರೆಯನ್ನು ಸ್ವೀಕರಿಸಿದ. ಆ ಕಡೆಯಿಂದ ಅಮ್ಮ ಕರೆ ಮಾಡಿ "ಮಗ ರೈಲು ಸಿಕ್ತಾ... ಬೇಗ ಬಾ, ಎರಡು-ಮೂರು ಜಾತಕ ಬಂದಿದೆ ಅದರಲ್ಲಿ ಒಂದು ಆಯ್ಕೆ ಮಾಡಿಕೊ ನಿನ್ನ ಮದುವೆ ಮಾಡಿಸುವೆ" ಎಂದಳು.

"ಹೂಂ"

"ಇನ್ನೂ ಅಕ್ಕಿಹೆಬ್ಬಾಳಿನ ಕುವೆಂಪು ನಗರದಲ್ಲಿ ಒಬ್ಬಳು ಇದ್ದಾಳೆ ಆಕೆಯೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಗೂ ಒಳ್ಳೆಯ ಸಂಬಳವಿದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದಾಳೆ. ವರ್ಷಕ್ಕೆ ಸುಮಾರು 12 ಲಕ್ಷ ಸಂಬಳಕ್ಕೆ ಆಯ್ಕೆಯಾಗಿದ್ದಾಳೆ. ಅವಳ ಜಾತಕವೂ ನಿನ್ನ ಜಾತಕವೂ ಸೇರುತಿದೆ".

"ಇನ್ನೊಬ್ಬಳು ಹರಿಹರಪುರದ ನಿಮ್ಮ ಮೇಷ್ಟ್ರು ಸತೀಶ್ ಅವರ ಸ್ನೇಹಿತರ ಮಗಳು ಆಕೆಯೂ ನೋಡಲು ಚಂದ ಇದ್ದಾಳಂತೆ, ಆಕೆಯ ವಿವರವನ್ನು ಕಳಿಸಿದ್ದೇನೆ ಎಲ್ಲವನ್ನು ಒಮ್ಮೆ ನೋಡು" ಅಮ್ಮ ಕರೆ ಮಾಡಿ ಎಲ್ಲಾ ಜಾತಕಗಳ ಬಗ್ಗೆ ಮಾಹಿತಿ ನೀಡಿದಳು. ಅಮ್ಮನ ಜೊತೆಯಲ್ಲಿ ಮಾತನಾಡಿ ಮುಗಿಯುವಷ್ಟರಲ್ಲಿ ರೈಲು ಗಾಡಿಯು ರಾಮನಗರ ನಿಲ್ದಾಣಕ್ಕೆ ತಲುಪಿತು.

ಮತ್ತೆ ಬರೆಯಲು ಆರಂಭಿಸಿದನು. ಇವನು ಬರೆಯುತ್ತಿದ್ದನ್ನು ನೋಡಿದ ಸಿಹಿ ಸಂದಿಗ್ಧದಲ್ಲಿರುವಾಗಲೇ ಎದುರುಗಡೆಯಿಂದ ಮೆತ್ತಗಿನ ಮಾತು "ಏನೋ ಗಂಭೀರವಾಗಿ ಬರೆಯುತ್ತಿದ್ದೀರಿ". ಅವನು ನಗು ಮುಖದಲ್ಲಿ ಆಕೆಯ ಕಡೆ ನೋಡಿದ. ರೈಲು ಗಾಡಿಯ ಶಬ್ದವು ಹೆಚ್ಚಾಗಿದ್ದ ಕಾರಣಕ್ಕಾಗಿ ಅವಳ ಮಾತುಗಳನ್ನು ಕೇಳಲು ಅವನು ಮುಂದಕ್ಕೆ ಬಾಗಿದನು. ಮಂದ ಬೆಳಕಿನಲ್ಲಿ ಅವಳ ಕಣ್ಣುಗಳು ಹೊಳೆಯುವಂತೆ ಅವನಿಗೆ ಭಾಸವಾಯಿತು.

"ಮುಂದಿನ ವಾರ ಬೆಂಗಳೂರಿನಲ್ಲಿ ಒಂದು ಕವಿಗೋಷ್ಠಿ ಇದೆ ಅದಕ್ಕೆ ಕವಿತೆ ಬರೆಯುತ್ತಿದ್ದೇನೆ" ಯಾವುದೋ ಗುಂಗಿನಿಂದ ಹೊರ ಬಂದಂತೆ ಹೇಳಿದ.

"ನೀವು ಕವಿಯ ಹಾಗಾದರೆ" ಎಂದಳು.

"ಹಾಗೇನು ಇಲ್ಲ ಸಮಯ ಸಿಕ್ಕಲ್ಲಿ ಸ್ವಲ್ಪ ಬರೆಯುವೆ" ಎಂದ.

"ಅಂದಹಾಗೆ ನೀವು ಯಾವ ಪುಸ್ತಕ ಓದುತ್ತಿದ್ದೀರಿ" ಆತನು ಕೇಳಿದ.

"ನನ್ನದೇ... ಕವನ ಸಂಕಲನ" ಎಂದಳು.

"ಕಳೆದ ವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಿಡುಗಡೆ ಆದ ಪುಸ್ತಕ ಅಲ್ಲವೇ, ಆ ದಿನ ನೀವೇ ಇರಲಿಲ್ಲ" ಎಂದ.

"ನನ್ನ ಕಾರ್ಯಕ್ರಮದ ದಿನವೇ ನನ್ನ ಪರೀಕ್ಷೆ ಇದ್ದ ಕಾರಣಕ್ಕೆ ನಾನು ಕಾರ್ಯಕ್ರಮಕ್ಕೆ ಬರಲಿಲ್ಲ" ಎಂದಳು.

"ಹೌದು... ಆ ಕಾರ್ಯಕ್ರಮಕ್ಕೆ ನಾನು ಬಂದಿದ್ದೆ. ಒಂದು ಕವನವು ಕೂಡ ವಾಚನ ಮಾಡಿದ್ದೆ" ಎಂದ.

"ಹೂಂ" ಅವರ ತಾತ್ಕಾಲಿಕ ಪ್ರತಿಕ್ರಿಯೆ. ಇಬ್ಬರ ಮನಸ್ಸುಗಳು ಹತ್ತಿರವಾದವು.

ಆತನು ತಾನು ಬರೆಯುತ್ತಿದ್ದ ಮದುವೆಯ ಕವಿತೆಯನ್ನು ನಿಲ್ಲಿಸಿ ಪ್ರೀತಿ-ಪ್ರೇಮದ ಬಗ್ಗೆ ಬರೆಯೋಣವೆಂದು ಬೇರೆ ಹಾಳೆಯನ್ನು ಎತ್ತಿಕೊಂಡ. ಆಕೆಯ ನೋಟವು ಇವನಿಗೆ ಹೊಸ ಸ್ಪೂರ್ತಿ ನೀಡಿದ ಹಾಗೆ ಕಾಣುತ್ತಿತ್ತು. ಆಕೆಯ ಕಣ್ಣುಗಳನ್ನು ನೋಡುತ್ತಾ ಆಕೆಗಾಗಿ ಒಂದು ಕವನ ಬರೆಯೋಣವೆಂದು ಕವನ ಬರೆಯಲು ಆರಂಭ ಮಾಡಿದನು.

ಇವನು ಬರೆಯುವುದನ್ನು ನೋಡಿದ ಸಿಹಿ "ನೀವು ಬರೆಯುವ ಗುಂಗಿನಲ್ಲಿದ್ದಂತಿದೆ... ಬರೆದು ಬಿಡಿ... ಗುಂಗು ಮುಗಿಯುವ ಮೊದಲೇ ಬರೆದು ಬಿಡಿಸಬೇಕು" ಹುಮ್ಮಸ್ಸಿನಲ್ಲಿ ಹೇಳಿದಳು. ಅವನು ಬರೆಯುವುದನ್ನು ಮುಂದುವರೆಸಿದನು.

"ಪಯಣದಲ್ಲಿ ಒಬ್ಬಳು ಗೆಳತಿ ಸಿಕ್ಕಿದಳು..." ಎಂಬ ಸಾಲುಗಳಿಂದ ಕಾವ್ಯಾನ ಬರೆಯಲು ಆರಂಭಿಸಿದರು. ಕವನವು ಕೊನೆ ಸಾಲಿಗೆ ಬರುವ ಅಷ್ಟರಲ್ಲಿ ಅವಳು ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸಿದಳು.

"ಇನ್ನೂ ಅವಳ ಪುಸ್ತಕವನ್ನು ನಾನು ಓದಿಲ್ಲ... ನಾನು ಇಳಿಯುವ ಅಷ್ಟರಲ್ಲಿ ಪುಸ್ತಕ ಕೇಳಿ ಪಡೆಯುವೆ... ಅವಳು ಹೇಗೆ ಬರೆದಿದ್ದಾಳೆಂದು ಓದಿ ನೋಡುವೆ... ಆಗ ಅವಳ ಬರಹದ ಬಗ್ಗೆ ನನಗೂ ತಿಳಿಯುತ್ತದೆ" ಇಂದು ತನ್ನ ಮನಸ್ಸಿನಲ್ಲಿ ಯೋಚನೆ ಮಾಡಿಕೊಂಡನು.

ಬೆಂಗಳೂರಿಗೆ ಹೋದ ದಿನದಿಂದಲೂ ಒಂದು ಪುಸ್ತಕ ಓದದ ಸಚ್ಚಿನ್ ಗೆ ಈ ಪುಸ್ತಕ ಓದಲೇಬೇಕು ಎಂಬ ಹೊಸ ಆಸಕ್ತಿ ಮೂಡಿತು. ಇವನ ಆಸಕ್ತಿ ನೋಡಿದ ಸಿಹಿಯು ಇವಳ ಪರಮವಶಳಾಗಿದಳು. ಪುಸ್ತಕ ಓದಿ ಮುಗಿಸಿ ಹಾಡಿನ ಗುಂಗಿನಲ್ಲಿ ಸ್ವರಗಳನ್ನು

ಹೇಳುತ್ತಿದ್ದಳು. ಆ ಸ್ವರಗಳಿಗೆ ತನ್ನ ಸ್ವರಗಳನ್ನು ಸಚ್ಚಿನ್ ಸೇರಿಸಿ ಹೊಸ ಹಾಡನ್ನೇ ಹೇಳಿದನು.

ಇನ್ನು ಹೊರಗೆ ಬಿಸಿಲಿನ ಮಳೆ ಬಂದಿತ್ತು. ಮಳೆಯಲ್ಲಿ ಕಾಮನಬಿಲ್ಲು ಮೂಡಿತು. ಈತನಿಗೆ ತನ್ನ ಊರಿನಲ್ಲಿ ಹರಿಯುವ ಹೇಮಾವತಿ ನದಿ ಬಯಲಿನ ಹೊಲ-ಗದ್ದೆಗಳಲ್ಲಿ ನವಿಲು ಕಾಮನಬಿಲ್ಲನ್ನು ನೋಡಿ ನಡೆಯುವ ದೃಶ್ಯವ ಕಣ್ಣಿನ ಮುಂದೆ ಬಂತು. ಆಕೆಯನ್ನು ಕರೆದು ಕಾಮನಬಿಲ್ಲನ್ನು ತೋರಿಸಿದನು. ಕಾಮನಬಿಲ್ಲು ನೋಡಿದ ತಕ್ಷಣ ಆಕೆಯ ಬಾಯಿಂದ ಕೇಲ ಪದಗಳು ಹೊರ ಬಂದವು. ಅದನ್ನು ಕೇಳುತ್ತಾ ಆಕೆಯ ಸುಂದರ ಮುಖ ನೋಡಿಕೊಂಡು ಕುಳಿತನು. ಅಷ್ಟರಲ್ಲಿ ರೈಲುಗಾಡಿಯೋ ಚನ್ನಪಟ್ಟಣ ನಿಲ್ದಾಣಕ್ಕೆ ಬಂದು ಸೇರಿತು.

ಆಕೆಯ ಸೌಂದರ್ಯ ಸವಿಯುತ್ತ ಕವನಗಳೆಲ್ಲವನ್ನು ಬರೆದು ಮುಗಿಸಿದನು. ತನ್ನ ಎಲ್ಲಾ ವಸ್ತುಗಳನ್ನು ಬ್ಯಾಗಿಗೆ ಹಾಕಿ ಒಂದು ಧ್ಯಾನಸ್ಥದಿಂದ ಆಕೆಯನ್ನು ನೋಡುತ್ತಾ ಕುಳಿತುಕೊಂಡನು. ಅಷ್ಟರಲ್ಲಿ ಚನ್ನಪಟ್ಟಣ ನಿಲ್ದಾಣದಿಂದ ರೈಲುಗಾಡಿ ಹೊರಟೆ ಬಿಟ್ಟಿತು.

ಮಲಗಿದ್ದ ತಂದೆಯು ಎದ್ದು ಕುಳಿತಿದ್ದರು. ಅವರಿಗೆ ಈತನ ಪರಿಚಯ ಮಾಡಿಸಿದಳು.

"ಅಪ್ಪ ಇವರು ಕೂಡ ಕವಿಯಂತೆ" ಎಂದಳು.

"ಹೂಂ... ನಿನ್ನ ಹಾಗೆ ಸಾಹಿತ್ಯದ ಆಸಕ್ತಿ ಅವರಿಗೂ... ಒಳ್ಳೆ ಜೊತೆ ನಿನಗೆ ಸಿಕ್ಕಿದ್ದು... ಊರು ಬರುವವರೆಗೆ ಎಷ್ಟು ಬೇಕಾದರೂ ಮಾತನಾಡಿಕೊಳ್ಳಬಹುದು" ಎಂದಳು.

ರೈಲು ಗಾಡಿಯ ನಿಧಾನವಾಗಿ ಚಲಿಸಿತು. ಕುತೂಹಲ ತಡೆಯಲಾರದೆ ಸಿಹಿಯು ಅವನು ಬರೆದಿದ್ದ ಕವನ ಕೇಳಿ ಪಡೆದುಕೊಂಡಳು. ತನ್ನ ಕವನ ಸಂಕಲವನ್ನು ಆತನ ಕೈಗಿಡುತ್ತಾ "ಓದಿ ಅಭಿಪ್ರಾಯ ಹೇಳಿ" ಎಂದಳು. ಭೋಜಿಯ ತುಂಬ ಏಕತಾನತೆಯ ಗಾಳಿಯ ಸದ್ದು, ಉಳಿದಂತೆ ಮೌನ, ಇಬ್ಬರ ಕೃತಿಗಳು ಪರಸ್ಪರ ಮನೋ ಭೂಮಿಕೆಯಲ್ಲಿ ಗೀರನ್ನು ಮೂಡುಸುತ್ತಿದ್ದವು.

ಇಬ್ಬರು ಓದುವುದನ್ನು ಆರಂಭ ಮಾಡಿದರು. ಸಚಿನ್ ಬರೆದಿರುವ ಕವನಗಳು ಆಕೆಯ ಸೌಂದರ್ಯ ವರ್ಣಿಸುವಹಾಗೆ ಇವೆ ಎಂಬ ವಿಷಯವು ಅರಿಯಿತ್ತು. ಈ ಮೂರು ಗಂಟೆಯ ಪಯಣದಲ್ಲಿ ಅನೇಕ ಕನಸುಗಳನ್ನು ಆತನು ಮೂಡಿಸಿದ್ದಾನೆ ಎಂದು ಆಕೆಗೆ ಅರ್ಥವಾಯಿತು. ಈ ಕವನಗಳಿಂದ ಎಳೆಯು ಹುಡುಗಿಯ ಮನದಲ್ಲಿ ಪ್ರೀತಿ ಎಂಬ ಹೊಸ ಭಾವನೆಗಳು ಆರಂಭವಾಗುತ್ತಿದ್ದವು. ಆಕೆಗಾಗಿ ಬರೆದಿರುವ ಕವನಗಳನ್ನು ಹೃದಯದ ಹತ್ತಿರ ಆಗುವ ರೀತಿಯಲ್ಲಿ ಓದುತ್ತಾ ಪ್ರೀತಿ ಎಂಬ ಹೊಸ ಅಧ್ಯಯನವನ್ನು ತನ್ನ ಮನದಲ್ಲಿ ಆರಂಭಿಸಿದಳು. ಹಿತ ಕಡೆ ಸಚಿನ್ ಆಕೆಯ ಕವನ ಸಂಕಲವನ್ನು ಓದಿ ಮುಗಿಸಿದನು. ಆತನ ಒಂದು ಕವನವನ್ನು ಅರ್ಧಕ್ಕೆ ನಿಲ್ಲಿಸಿದಳು. ಕಾರಣವೇನೆಂದರೆ ಆ ಕವನದಲ್ಲಿ ಎರಡು ಹೃದಯಗಳು ಇನ್ನು ಸೇರಿಲ್ಲ ಆದುದರಿಂದ ಆ ಕವನವನ್ನು ಅರ್ಧಕ್ಕೆ ನಿಲ್ಲಿಸಿ ಅವನ ಹಾಳೆಗಳನ್ನು ಹಿಂದಿರುಗಿಸಿದಳು. ಆ ಕವನವನ್ನು ತೋರಿಸಿ ''ಇನ್ನೂ ಕೆಲವು ಸಾಲುಗಳು ಕವನದಲ್ಲಿ ಇಲ್ಲ" ಎಂದಳು.

"ಆ ಕವನಕ್ಕೆ ಇನ್ನೂ ಕೊನೆ ಹಂತ ಸಿಕ್ಕಿಲ್ಲ" ಎಂದ.

"ಅಪೂರ್ವ ಕವನ" ಎಂದಳು.

"ಅಂದ್ರೆ" ಗೊತ್ತಿರುವುದನ್ನು ಗೊತ್ತಿಲ್ಲದ ಹಾಗೆ ನಟನೆ ಮಾಡಿದನು.

"ಕವನವು ಪೂರ್ಣಗೊಂಡಿಲ್ಲ ಆ ಕಾರಣಕ್ಕೆ ಇದು ಅಪೂರ್ಣ ಕವನ" ಎಂದಳು.

"ಹೌದು" ಇನ್ನು ಅಷ್ಟರಲ್ಲಿ ರೈಲು ಗಾಡಿಯು ಮದ್ದೂರು ನಿಲ್ದಾಣ ಬಂದು ಸೇರಿತು.

ಮದ್ದೂರು ರೈಲ್ವೆ ನಿಲ್ದಾಣದಲ್ಲಿ ಹತ್ತು ನಿಮಿಷ ರೈಲು ನಿಲ್ಲುವುದೆಂದು ತಿಳಿದ ಸಚಿನ್ ಹೊರಗೆ ಹೋಗಿ ಮದ್ದೂರು ಖ್ಯಾತಿಯ ವಡೆಗಳನ್ನು ತಂದನು. ಈಗ ತಾನೆ ಮಾಡಿದ ಕಾರಣಕ್ಕೆ ವಡೆಗಳು ತುಂಬಾ ಬಿಸಿ-ಬಿಸಿಯಾಗಿದ್ದವು. ಸಿಹಿ ತನ್ನ ತಂದೆಯನ್ನೇ ಮರೆತು ಬಿಸಿ ವಡೆಗಳನ್ನು ಸೇವಿಸಿದರು. ಈ ಪಯಣದಲ್ಲಿ ಇಬ್ಬರು ತುಂಬಾ ಆತ್ಮೀಯತೆಯನ್ನು ಬೆಳೆಸಿಕೊಂಡರು. ಎರಡು ಹೃದಯಗಳದು ಪ್ರೀತಿ ಎಂಬ ಚಿಗುರು ಮೂಡಿತು ಆದರೆ ಇಬ್ಬರೂ ಹೇಳಿಕೊಳ್ಳುವ ಮನೋಭಾವನೆ ಇಲ್ಲದೆ ಸಾಹಿತ್ಯದ ಚರ್ಚೆಗಳನ್ನು ಮಾಡುತ್ತಾ ಕುಳಿತಿದ್ದರು. ಅಷ್ಟರಲ್ಲಿ ರೈಲು ಗಾಡಿಯು ಮದ್ದೂರು ನಿಲ್ದಾಣದಿಂದ ಹೊರಟೆ ಬಿಟ್ಟಿತು.

"ಇನ್ನು ಎರಡು ನಿಲ್ದಾಣ ಬಂದರೆ ನಾನು ಹಿಡಿಯುವ ಸ್ಥಳ ಬರುತ್ತದೆ" ಎಂದ.

"ನೀವು ಮೈಸೂರಿಗೆ ತಾನೇ ಹೋಗುತ್ತಿರುವುದು" ಎಂದಳು.

"ಇಲ್ಲ ರೀ... ನಮ್ಮದು ಅಕ್ಕಿಹೆಬ್ಬಾಳು ನೇರವಾದ ರೈಲು ನಮ್ಮ ಊರಿಗೆ ಇಲ್ಲದ ಕಾರಣ ಪಾಂಡವಪುರದಲ್ಲಿ ಇಳಿದು ಬಸ್ಸಿನ ಮೂಲಕ ಕೃಷ್ಣರಾಜಪೇಟೆಗೆ ಹೋಗಿ ಅಲ್ಲಿಂದ ಮತ್ತೊಂದು ಬಸ್ಸಿನಲ್ಲಿ ಊರಿಗೆ ಹೋಗುವೆ" ಎಂದನು.

"ಹೌದ...! ನಾನು ಮೈಸೂರಿನವಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವೆ, ಅಲ್ಲಿ ನನ್ನ ಜೊತೆ ತಂದೆಯವರು ಇದ್ದಾರೆ ನನಗೆ ಅಮ್ಮನ ಪ್ರೀತಿ ಗೊತ್ತಿಲ್ಲ ಯಾಕೆಂದರೆ ನನಗೆ ಅಮ್ಮ ಇಲ್ಲ, ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡರು" ತನ್ನ ಹಳೆಯ ದಿನಗಳ ಬಗ್ಗೆ ಆತನಿಗೆ ಸಂಪೂರ್ಣವಾಗಿ ಹೇಳಿದಳು.

ಸುಮಾರು ಸಮಯ ಸಾಹಿತ್ಯ ಜೀವನದ ಬಗ್ಗೆ ಮಾತನಾಡಿದರು. ಹೀಗೆ ಮಾತಾಡುತ್ತಾ ಸಮಯದಲ್ಲಿ ಮಲಗಿದ್ದ ತಂದೆ ಎಚ್ಚರಗೊಂಡರು. ಮೈಸೂರಿನಲ್ಲಿರುವ ನೆನಪುಗಳನ್ನು ಹೇಳುವ ಸಂದರ್ಭದಲ್ಲಿ "ನನ್ನ ಮಗಳಿಗೆ ನನ್ನ ಪ್ರಾಣ ಸ್ನೇಹಿತನ ಮಗನ ಜೊತೆಯಲ್ಲಿ ಮದುವೆ ಮಾಡಬೇಕೆಂದು ಚಿಕ್ಕ ವಯಸ್ಸಿನಲ್ಲೇ ತೀರ್ಮಾನ ಮಾಡಿದ್ದೇವೆ. ಆ ಕಾರಣಕ್ಕೆ ಒಂದು ತಿಂಗಳು ರಜೆ ಹಾಕಿ ಊರಿಗೆ ಹೋಗುತ್ತಿದ್ದೇವೆ" ಎಂದು ಸಿಹಿಯ ತಂದೆ ಹೇಳಿದರು.

ಈ ಮದುವೆಯ ವಿಷಯ ಸಿಹಿಗೂ ಗೊತ್ತಿರಲಿಲ್ಲ. ಈಗ ತಾನೆ ಚಿಗುರಿದ ಪ್ರೀತಿಗೆ ಹೊಸ ಕಹಿ ಬಂದಿತ್ತು. ಗಿಡ ಹುಟ್ಟುವ ಮೊದಲೇ ಸತ್ತ ಹಾಗೆ ಕಂಡಿತು. ಸಿಹಿ ತಂದೆಯ ಮಾತು ಕೇಳಿ ಹೆಚ್ಚಾಗಿ ಮಾತನಾಡದೆ ಮೌನಿಯಾಗಿ ಕುಳಿತುಕೊಂಡಳು. ಆಕೆಯ ಮೌನಕ್ಕೆ ಇವನು ಕೂಡ ಮೌನನಾಗಿ ಸುಮ್ಮನೆ ಕುಳಿತುಕೊಂಡನು. ಅಷ್ಟರಲ್ಲಿ ಸಕ್ಕರೆನಾಡು ಮಂಡ್ಯಕ್ಕೆ ರೈಲುಗಾಡಿಸುತ್ತದೆ.

"ಇನ್ನು ಕೆಲವೇ ಹೊತ್ತಿನಲ್ಲಿ ಪಾಂಡುಪುರ ಬರುತ್ತದೆ" ಎಂಬ ಮಾತು ಸಿಹಿಯ ತಂದೆ ಹೇಳಿದರು.

"ಹೌದು ಸರ್" ಎಂಬ ನುಡಿ ಬಿಟ್ಟರೆ ಬೇರೆ ಏನನ್ನು ಹೇಳದೆ ಮೌನಿಯಾಗಿ ಕುಳಿತುಕೊಂಡ.

ರೈಲು ಗಾಡಿಯು ಮಂಡ್ಯದಿಂದ ಹೊರಟಿತು. ಎರಡು ಹೃದಯಗಳು ಕೂಡ ಮೌನಿಗಳಾಗಿ ಕುಳಿತಿದ್ದವು. ಯಾರೂ ಕೂಡ ಮಾತನಾಡಲಿಲ್ಲ. ರೈಲುಗಾಡಿ ಶಬ್ದ ಬಿಟ್ಟರೆ ಬೇರೆ ಯಾವುದೇ ಶಬ್ದ ಬರುತ್ತಿರಲಿಲ್ಲ. ಇಬ್ಬರ ಮನಸ್ಸಿನಲ್ಲಿ ಯಾವುದೋ ರೀತಿಯ ತಳಮಳ. ಮೂರು ಗಂಟೆಯಲ್ಲಿ ಹುಟ್ಟಿದ ಪ್ರೀತಿಯು ಮೂರೇ ನಿಮಿಷದಲ್ಲಿ ಕಳೆದು ಹೋದ ನೋವು ಇಬ್ಬರ ಮನದಲ್ಲಿತ್ತು. ಸುಮಾರು 10 ನಿಮಿಷ ಕಳೆಯಿತು ಪಾಂಡುಪುರ ರೈಲು ನಿಲ್ದಾಣ ಬಂತು. ಸಚಿನ್ ತನ್ನ ಬ್ಯಾಡ್ ಮತ್ತು ವಸ್ತುಗಳನ್ನು ತೆಗೆದುಕೊಂಡು ಬಾಗಿಲ ಬಳಿ ಬಂದನು. ಸಿಹಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಈತನು ಯಾವುದೇ ಸಂದೇಶ ನೀಡದೆ ಬಾಗಿಲ ಬಳಿ ನಿಂತನು. ಸಿಹಿಯ ತಂದೆ ದೂರದಿಂದ ಅವನಿಗೆ ಕೈ ತೋರಿಸಿ ಟಾಟಾ ಮಾಡಿದರು.

"ಹುಟ್ಟಿದ ಪ್ರೀತಿಯು ಮರವಾಗಲಿಲ್ಲ ಗಿಡದಲ್ಲೇ ಸತ್ತು ಹೋಯಿತಲ್ಲ, ಹೃದಯಗಳು ಸೇರುವ ಮುನ್ನವೇ ಕನ್ನಡಿ ಹಾಗೆ ಹೊಡೆದು ಹೋಯಿತಲ್ಲ" ಎಂಬ ಸಾಲುಗಳು ಇಬ್ಬರ ಮನದಲ್ಲೂ ಬರುತ್ತಿತ್ತು. ಪಾಂಡವಪುರ ರೈಲು ನಿಲ್ದಾಣಕ್ಕೆ ರೈಲು ಗಾಡಿಯು ಬಂದು ಸೇರಿತು. ರೈಲು ಚಲಿಸುವ ವಿರುದ್ಧ ದಿಕ್ಕಿನಲ್ಲಿ ಕಣ್ಣೀರ ಅಂಚಿನಲ್ಲಿ ಕೀರು ನೀರು ಹಾಕಿಕೊಂಡು ರೈಲ್ವೆ ನಿಲ್ದಾಣದಿಂದ ಹೊರ ನಡೆದನು. ಸಿಹಿ ಇರುವ ರೈಲು ಗಾಡಿಯು ಮೈಸೂರಿನತ್ತ ವೇಗವಾಗಿ ಚಲಿಸಿತು.



ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.

ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.

ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ

More About Author