Poem

ನಾನೇನು ಸೀತೆಯಲ್ಲವಲ್ಲ

ನಾನೇನು ಸೀತೆಯಲ್ಲವಲ್ಲ
ವನವಾಸದ ಕಡು ಬೇಗೆಯಲ್ಲಿ
ಕಲ್ಲು ಮುಳ್ಳುಗಳ ದಟ್ಟಡವಿಯಲ್ಲಿ
ರಾಮ-ಲಕ್ಷ್ಮಣರನ್ನು ಹಿಂಬಾಲಿಸಿ
ಬರಿಗಾಲಲ್ಲಿ ಸೀಳುದಾರಿಯಲ್ಲಿ ನಡೆಯಲು

ನಾನೇನು ಸೀತೆಯಲ್ಲವಲ್ಲ
ನಿಂದನೆಯ ಸಹಿಸಲು
ತನಗಂಟಿದ ಕಳಂಕ ಸುಳ್ಳೆಂದು ಸಾಬೀತು ಪಡಿಸಲು
ಅಗ್ನಿ ಪ್ರವೇಶಿಸಲು
ನಿಂಧನೆಗೆ ಬೇದರಿ ಭೂತಾಯಿ ಮಡಿಲು ಸೇರಲಾ

ನಾನೇನು ಸೀತೆಯಲ್ಲವಲ್ಲ
ಓರ್ವ ಮಹಿಳೇ ಅಷ್ಟೇ ಅಲ್ಲವೆ?
ಅದೆಷ್ಟು ನೋವ ನುಂಗೇನು
ಅದೆಷ್ಟು ಚುಚ್ಚು ಮುಳ್ಳುಗಳ ಗಾಯ ಸಹಿಸೇನು
ಅದೇಷ್ಟು ವನವಾಸ ಅನುಭವಿಸೇನು
ಉತ್ತೆರಿಸ ಬಲ್ಲಿರೇನು ನಿವ್ಯಾಯಾರಾದರು?

- ಹೇಮಲತಾ.ವಿ.ಹಡಪದ

 

 

 

ಹೇಮಲತಾ.ವಿ.ಹಡಪದ

ಹೇಮಲತಾ.ವಿ. ಹಡಪದ ಅವರು ಮೂಲತಃ ಇಚ್ಚಂಗಿಯವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಕವನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author